ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಗೋಲ ದಾರ

ವಿಕಿಸೋರ್ಸ್ದಿಂದ

ಅಂಗೋಲ ದಾರ[ಸಂಪಾದಿಸಿ]

ಸಾಮಾನ್ಯವಾಗಿ ಶೇ.80 ಉಣ್ಣೆ ಮತ್ತು ಶೇ.20 ಹತ್ತಿಯ ಮಿಶ್ರಣದಿಂದ ಕೂಡಿರುತ್ತದೆ. ಈ ಪ್ರಮಾಣವನ್ನು ಮಾರ್ಪಡಿಸಬಹುದು. ಈ ದಾರವನ್ನು ಷರ್ಟಿನ ಹಾಗೂ ಸುಲಭ ಬೆಲೆಯ ಇತರ ಉಡುಪುಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ಅಂಗೋಲ ದಾರಕ್ಕೆ ಉಪಯೋಗಿಸುವ ಉಣ್ಣೆದಾರ ಸಾಮಾನ್ಯವಾಗಿ ಒರಟು ಹಾಗೂ ತುಂಡು ಬಗೆಯದ್ದಾಗಿರುತ್ತದೆ. ಅಂಗೋಲ ಬಟ್ಟೆ ಹತ್ತಿಹಾಸಿನ ಮತ್ತು ಅಂಗೋಲ ಹೊಕ್ಕಿನಿಂದ ಕೂಡಿದ್ದು ಸಾದಾ ಅಥವಾ ಮೂಲೆ (ಟ್ವಿಲ್) ನೇಯ್ಗೆಯದಾಗಿರುತ್ತದೆ.