ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಕ್ಯಾಬ್

ವಿಕಿಸೋರ್ಸ್ದಿಂದ

ಅಕ್ಯಾಬ್

 ಬರ್ಮದ ಅರಕಾನ್ ಪ್ರಾಂತ್ಯದ ಪಶ್ಚಿಮ ತೀರದಲ್ಲಿ ಮಾಯುಕಲಾಡನ್ ಮತ್ತು ಲೆಮ್ರೊ ನದಿಗಳ ಸಂಗಮದಲ್ಲಿರುವ ಮುಖ್ಯ ರೇವುಪಟ್ಟಣ (200 14' ಅಕ್ಷಾಂಶ, 920 55' ರೇಖಾಂಶ). ಹಿಂದೆ ಮೀನುಗಾರಿಕೆಯ ಒಂದು ಹಳ್ಳಿಯಾಗಿದ್ದು ಇಂದು ಬರ್ಮದ ಒಂದು ಪ್ರಮುಖ ರೇವುಪಟ್ಟಣವಾಗಿ ಬೆಳೆದಿದೆ. ಜನಸಂಖ್ಯೆ 42,329 (1953) ಬೌದ್ಧರೇ 1/3 ಭಾಗದಷ್ಟಿದ್ದಾರೆ. ಅಕ್ಕಿಯನ್ನು ಹೆಚ್ಚಾಗಿ ರಫ್ತು ಮಾಡುತ್ತಾರೆ. ಅನೇಕ ಸಾರ್ವಜನಿಕ ಕಟ್ಟಡಗಳ ಜೊತೆಗೆ ದೊಡ್ಡ ಅಕ್ಕಿ ಗಿರಣಿಗಳೂ ಇವೆ.

(ಎಂ.ಎಸ್.ಎಂ.)