ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಗ್ನಿಮಿತ್ರ

ವಿಕಿಸೋರ್ಸ್ದಿಂದ

ಅಗ್ನಿಮಿತ್ರ

 ಮೌರ್ಯರಿಂದ ಮಗಧರಾಜ್ಯವನ್ನು ಕ್ರಿ.ಪೂ. ಸುಮಾರು 187ರಲ್ಲಿ ಕಸಿದುಕೊಂಡು ಶುಂಗ ರಾಜಸಂತತಿಯನ್ನು ಸ್ಥಾಪಿಸಿ ಸುಮಾರು 150ರವರೆಗೆ ಆಳಿದ ಪುಷ್ಯಮಿತ್ರನ ಮಗ. ತಂದೆಯ ಕಾಲದಲ್ಲಿ ಸಾಮ್ರಾಜ್ಯಕ್ಕೆ ಉಪರಾಜಧಾನಿಯಾಗಿದ್ದ ವಿದೀಶದಲ್ಲಿ ನಿಂತು ಪ್ರಾಂತಾಡಳಿತ ನಡೆಸುತ್ತಿದ್ದ. ನೆರೆರಾಜ್ಯವಾಗಿದ್ದ ವಿದರ್ಭದ ದೊರೆ ದಂಡೆತ್ತಿ ಬಂದಾಗ ಅವನನ್ನು ಸೋಲಿಸಿದ. ತಂದೆಯ ಮರಣಾನಂತರ ಸಿಂಹಾಸನಕ್ಕೆ ಬಂದ. ಇವನ ವಿಷಯವಾಗಿ ಹೆಚ್ಚು ವಿವರಗಳು ತಿಳಿದುಬಂದಿಲ್ಲ. ಕಾಳಿದಾಸನ ಮಾಳವಿಕಾಗ್ನಿಮಿತ್ರ ನಾಟಕದ ಕಥಾನಾಯಕ ಇವನೇ.       

 (ಎ.ಎಂ.)