ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಚ್ಚುಮೊಳೆ

ವಿಕಿಸೋರ್ಸ್ದಿಂದ

ಅಚ್ಚುಮೊಳೆ

ಯಾವುದೇ ಭಾಷೆಯ ಅಕ್ಷರ, ಅಂಕಿ, ಸಂಕೇತಗಳನ್ನು ಕಾಗದದ ಮೇಲೆ ಮುದ್ರಿಸಲು ವಿಶೇಷ ರೀತಿಯಲ್ಲಿ ತಯಾರಿಸಲಾಗಿರುವ ಮೊಳೆಗಳಿಗೆ ಈ ಹೆಸರಿದೆ. ಇವನ್ನು ತಯಾರಿಸಲು ಪ್ರತಿ ಅಕ್ಷರ ಅಥವಾ ಚಿಹ್ನೆಗೂ ಪ್ರತ್ಯೇಕ ಮಾತೃಕೆಯನ್ನು (ಮ್ಯಾಟ್ರಿಕ್ಸ್) ಮೊದಲು ತಯಾರಿಸಿಕೊಂಡು ಅನಂತರ ಸೀಸ, ತವರ ಮತ್ತು ಆಂಟಿಮೊನಿ ಲೋಹಗಳಿಂದ ಸೂಕ್ತ ಮಿಶ್ರಣವನ್ನು ತಯಾರಿಸಿ ಮಾತೃಕೆಗಳಲ್ಲಿ ತುಂಬಿ ಮೊಳೆಯನ್ನು ಎರಕ ಹೊಯ್ಯುವರು. ಕೆಲವು ವೇಳೆ ಈ ಮಿಶ್ರ ಲೋಹದಲ್ಲಿ ತಾಮ್ರ ಮತ್ತು ನಿಕ್ಕಲ್‍ಗಳೂ ಸೇರಿರುತ್ತವೆ.

ಅಚ್ಚುಮೊಳೆಗಳು ಸಮಕೋನಾಕಾರದಲ್ಲಿದ್ದು, 23317ಮಿ.ಮೀ. ಎತ್ತರ ಇರುತ್ತದೆ. ಇವುಗಳ ಅಗಲ ಮತ್ತು ದಪ್ಪವನ್ನು ಅಂತರರಾಷ್ಟ್ರೀಯ ಮುದ್ರಣ ಸಂಘದ ನಿಯಮವನ್ನನುಸರಿಸಿ ನಿಗದಿ ಮಾಡಲಾಗಿದೆ. (ನೋಡಿ- ಮುದ್ರಣ) (ನೋಡಿ- ಕಲೆ)

(ಎಂ.ಎ.ಎಸ್.)