ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅನುಮಾಪನ

ವಿಕಿಸೋರ್ಸ್ದಿಂದ

ಅನುಮಾಪನ

  ಮೂಲದೊಡನೆ ಪರಿಶೀಲಿಸಿ

ನಿರ್ದಿಷ್ಟ ಗಾತ್ರದ ಒಂದು ದ್ರಾವಣದೊಡನೆ ಸಂಪೂರ್ಣವಾಗಿ ವರ್ತಿಸಲು ಅಗತ್ಯವಾದ ಮತ್ತೊಂದು ದ್ರಾವಣದ ಗಾತ್ರವನ್ನು ನಿರ್ಣಯಿಸುವ ಪ್ರಯೋಗವಿಧಾನ (ಟೈಟ್ರೇಷನ್) ಕ್ರಿಯಾಭಾಗಿಗಳಾದ ದ್ರಾವಣಗಳ ಪೈಕಿ ಒಂದರ ನಾಮ್ರ್ಯಾಲಿಟಿ ಅಥವಾ ಅದರ ಪ್ರಬಲತೆ ತಿಳಿದಿದ್ದರೆ ಮತ್ತೊಂದರ ನಾಮ್ರ್ಯಾಲಿಟಿಯನ್ನು ಓ1ಗಿ1= ಓ2ಗಿ2 ಎಂಬ ಸೂತ್ರದ ಸಹಾಯದಿಂದ ಕಂಡುಹಿಡಿಯಬಹುದು. ಅನುಮಾನಕ್ಕೆ ಪೂರ್ವಸಿದ್ಧತೆಯಾಗಿ 1. ನಾಮ್ರ್ಯಾಲಿಟಿ ಗೊತ್ತಿರುವ ದ್ರಾವಣ; ಇಂಥ ಪ್ರಮಾಣಿಕ (ಸ್ಟ್ಯಾಂಡಡ್ ್) ದ್ರಾವಣವನ್ನು ತಯಾರಿಸಲು ಬೇಕಾದ ಪರಿಶುದ್ಧ ರಾಸಾಯನಿಕ ಸೂಚಿಸುವ ಸಾಧನ; 2. ಬ್ಯೂರೆಟ್, ಪಿಪೆಟ್, ಆಲಿಕೆ, ಅನುಮಾಪನಕ್ಕಾಗಿಯೇ ನಿರ್ಮಿಸಿರುವ ಫ್ಲಾಸ್ಕುಗಳು (ಜಾಡಿ) ಇತ್ಯಾದಿಗಳನ್ನು ಒದಗಿಸಿಕೊಳ್ಳಬೇಕು. ಉಪಕರಣಗಳನ್ನೆಲ್ಲಾ ಶುಭ್ರವಾಗಿ ತೊಳೆದು ಬಟ್ಟಿ ಇಳಿಸಿದ ನೀರಿನಿಂದ ಗಲಬರಿಸಿರಬೇಕು. ಬ್ಯೂರೆಟ್ ಮತ್ತು ಪಿಪೆಟ್‍ಗಳಲ್ಲಿ ದ್ರಾವಣಗಳನ್ನು ತುಂಬುವ ಮುನ್ನ, ಅವುಗಳನ್ನು ಆಯಾ ದ್ರಾವಣದಿಂದ ಗಲಬರಿಸಬೇಕು. ಫ್ಲಾಸ್ಕಿನಲ್ಲಿರುವ ನಿರ್ದಿಷ್ಟಗಾತ್ರ ದ್ರಾವಣಕ್ಕೆ (ಉದಾ: 25ಮಿ.ಲೀ.) ಬ್ಯೂರೆಟ್ಟಿನಲ್ಲಿರುವ ದ್ರಾವಣವನ್ನು ಸ್ವಲ್ಪ ಸೇರಿಸಿ, ಎಚ್ಚರಿಕೆಯಿಂದ ಕುಲುಕಬೇಕು. ಕ್ರಿಯಾಂತ್ಯ ಸನಿಹದಲ್ಲಿ ಬ್ಯೂರೆಟ್ಟಿನಿಂದ ದ್ರಾವಣವನ್ನು ತೊಟ್ಟು ತೊಟ್ಟಾಗಿ ಹಾಕಿ ಪರೀಕ್ಷಿಸಬೇಕು. ಕ್ಲೋರೈಡ್ ಸಿಲ್ವರ್ ನೈಟ್ರೇಟ್ ಕ್ರಿಯೆಯಂತೆ ಒತ್ತಡ ಉಂಟಾಗುತ್ತಿದ್ದರೆ ಅಥವಾ ಆಕ್ಸಾಲಿಕ್ ಆಮ್ಲ ಪೊಟ್ಯಾಸಿಯಂ ಪಮ್ರ್ಯಾಂಗನೇಟ್ ಕ್ರಿಯೆಯಂತೆ ಬಣ್ಣ ಮಾಯವಾಗುತ್ತಿದ್ದರೆ, ಕ್ರಿಯಾಂತ್ಯದ ನಿರ್ಣಯ ಸುಲಭ. ಇಲ್ಲದಿದ್ದರೆ ರಾಸಾಯನಿಕ ಕ್ರಿಯೆಯಲ್ಲಿ ನಿರ್ಲಿಪ್ತವಾಗಿರುವ ಸೂಚಕಗಳನ್ನು (ಇಂಡಿಕೇಟರ್ಸ್) ಬಳಸಬೇಕಾಗುತ್ತದೆ. ಲಿಟ್ಮಸ್, ಮೀಥೈಲ್ ಆರೆಂಜ್, ಮೀಥೈಲ್ ರೆಡ್, ಮತ್ತು ಫೀನಾಲ್ಫ್‍ಥಲೀನುಗಳು ಆಮ್ಲ-ಕ್ಷಾರಗಳ ಅನುಮಾಪನದಲ್ಲಿ ಉಪಯೋಗಿಸುವ ಪರಿಚಿತಸೂಚಕಗಳು. ಆಮ್ಲ-ಕ್ಷಾರಗಳ ಬಲ ಮತ್ತು ಕ್ರಿಯಾಂತ್ಯದಲ್ಲಿ ಆಗುವ ವ್ಯತ್ಯಾಸಗಳನ್ನು ಅನುಸರಿಸಿ ನಿರ್ದಿಷ್ಟಸೂಚಕವನ್ನು ಚುನಾಯಿಸಬೇಕಾಗುತ್ತದೆ. ಪ್ರಸಕ್ತ ರಾಸಾಯನಿಕ ಕ್ರಿಯೆಯಲ್ಲಿ ವ್ಯಕ್ತವಾಗುವ, ವಿದ್ಯುದ್ವಿಭಜನೆ, ವಿದ್ಯುದ್ವಾಹಕತ್ವ, ರೋಧ, ಶಾಖ, ವಕ್ರೀಭವನಾಂಕ, ಸ್ನಿಗ್ಧತೆ, ಪ್ರಭಾವಪಟುತ್ವ-ಇತ್ಯಾದಿ ಭೌತಬದಲಾವಣೆಗಳನ್ನು ಗಮನಿಸಿಯೂ ಅನುಮಾಪನ ಮಾಡುವುದುಂಟು. ಇದಕ್ಕಾಗಿ ವಿಶಿಷ್ಟ ತಾಂತ್ರಿಕ ವ್ಯವಸ್ಥೆಗಳು ರೂಪಿತವಾಗಿವೆ. ಅನುಮಾಪನದಲ್ಲಿ ಬಳಸುವ ದ್ರಾವಣಗಳನ್ನು ಸಾಮಾನ್ಯವಾಗಿ, ನೀರಿನಿಂದ ತಯಾರಿಸುತ್ತಾರೆ. ಸಾವಯವ ವಸ್ತುಗಳಾದರೆ (ಆಗ್ರ್ಯಾನಿಕ್) ಇತರ ಸೂಕ್ತ ದ್ರಾವಣಗಳಲ್ಲಿ ವಿಲೀನಮಾಡಿ ದ್ರಾವಣರೂಪಕ್ಕೆ ತರಬೇಕಾಗುತ್ತದೆ. ಅನುಮಾಪನಕ್ರಿಯಾ ಸ್ವರೂಪವನ್ನು ರೇಖಾನಕ್ಷೆಯ (ಗ್ರಾಫ್) ರೂಪದಲ್ಲಿ ಗುರುತಿಸಿಕೊಂಡು ಹೋಗುವ ಸ್ವಯಂಚಾಲಿತ ಸಾಧನಗಳಿಗೆ ಪ್ರಾಶಸ್ತ್ಯ ಹೆಚ್ಚುತ್ತಿದೆ. (ಎಚ್.ಜಿ.ಎಸ್.)