ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅನುರೂಪಶ್ರೇಣಿಗಳು

ವಿಕಿಸೋರ್ಸ್ದಿಂದ
   ಮೂಲದೊಡನೆ ಪರಿಶೀಲಿಸಿ

ಅನುರೂಪಶ್ರೇಣಿಗಳು

ಒಂದು ಸಂಯುಕ್ತಕ್ಕೂ ಅದರ ಪಕ್ಕದ ಸಂಯುಕ್ತಕ್ಕೂ ಅಣುಸೂತ್ರದಲ್ಲಿ ವ್ಯತ್ಯಾಸವಿರುವಂಥ ಸಾವಯವ ಸಂಯುಕ್ತಗಳ ಶ್ರೇಣಿಗಳು (ಹೊಮೊಲೋಗಸ್ ಸೀರೀಸ್). ಇದಕ್ಕೆ ಅತ್ಯಂತ ಸರಳನಿದರ್ಶನ, ಆಲ್ಕೇನ್ ಶ್ರೇಣಿ. ಈ ಶ್ರೇಣಿಗೆ ಸೇರಿದ ಸಂಯುಕ್ತಗಳನ್ನು ಆಲ್ಕೋನ್‍ಗಳೆಂದು ಕರೆಯುತ್ತಾರೆ. ಇವೆಲ್ಲವೂ ಹೈಡ್ರೋಕಾರ್ಬನ್‍ಗಳು. ಆಂದರೆ ಹೈಡ್ರೋಜನ್, ಕಾರ್ಬನ್‍ಗಳೆರಡೇ ಇರುವ ಸಂಯುಕ್ತಗಳು.

ಅಊ4 ... ಮೀಥೇನ್ ಅಊ3-ಅಊ3 ... ಈಥೇನ್ ಅಊ3- ಅಊ2-ಅಊ3 ... ಫ್ರೊಪೇನ್ ಅಊ3-ಅಊ2-ಅಊ2-ಅಊ3 ... ಬ್ಯೂಟೇನ್ ಅಊ3-ಅಊ2-ಅಊ2-ಅಊ2-ಅಊ3 ... ಪೆರೆಟೇನ್, ಇತ್ಯಾದಿ ಆಲ್ಕೇನ್ ಶ್ರೇಣಿ ಹೊರತು ಎಲ್ಲ ಅನುರೂಪಶ್ರೇಣಿಗಳಿಗೂ ಒಂದು ವಿಶಿಷ್ಟ ಅಣ್ವಂಗವಿರುತ್ತದೆ (ರ್ಯಾಡಿಕಲ್). ಅಣ್ವಂಗವೆಂದರೆ ವಿಶಿಷ್ಟ ರಾಸಾಯನಿಕ ಗುಣಗಳುಳ್ಳ ಒಂದು ನಿರ್ದಿಷ್ಟ ಪರಮಾಣುಪುಂಜ. ಒಂದು ಅನುರೂಪಶ್ರೇಣಿಗೆ ಸೇರಿದ ಎಲ್ಲ ಸಂಯುಕ್ತಗಳಲ್ಲೂ ಒಂದೇ ಅಣ್ವಂಗವಿರುತ್ತದೆ. ಉದಾಹರಣೆಗೆ, ಅಣ್ವಂಗ ಅಲಿಫ್ಯಾಟಿಕ್ ಆಲ್ಕೊಹಾಲ್ ಶ್ರೇಣಿಯ ಎಲ್ಲ ಸಂಯುಕ್ತಗಳಲ್ಲೂ ಇರುತ್ತದೆ.

ಅಊ3ಔಊ ... ಮೀಥೈಲ್ ಆಲ್ಕೊಹಾಲ್ ಅಊ3- ಅಊ2ಔಊ ... ಈಥೈಲ್ ಆಲ್ಕೊಹಾಲ್ ಅಊ3-ಅಊ2-ಅಊ2ಔಊ ... ಪ್ರೊಪೈಲ್ ಆಲ್ಕೊಹಾಲ್ ಅಊ3-ಅಊ2-ಅಊ2-ಅಊ2ಔಊ ... ಬ್ಯೂಟೈಲ್ ಆಲ್ಕೊಹಾಲ್ ಹೀಗೆಯೇ ಆಲಿಫ್ಯಾಟಿಕ್ ಅಮಿನ್‍ಗಳಲ್ಲಿ -ಓಊ2 ಅಣ್ವಂಗವೂ ಅಲ್ಟಿಹೈಡುಗಳಲ್ಲಿ -ಅಊಆ ಅಣ್ವಂಗವೂ ಕಾರ್ಬಾಕ್ಸಿಲಿಕ್ ಆಮ್ಲಗಳಲ್ಲಿ ಅಔಔಊ ಅಣ್ವಂಗವೂ ಇರುತ್ತದೆ.

ಒಂದು ಅನುರೂಪಶ್ರೇಣಿಗೆ ಸೇರಿದ ಸಂಯುಕ್ತಗಳೆಲ್ಲಕ್ಕೂ, ಒಂದು ಸಾಮಾನ್ಯ ಅಣುಸೂತ್ರವನ್ನು ಬರೆಯಬಹುದು. ಉದಾಹರಣಿಗೆ ಆಲ್ಕೇನ್‍ಗಳ ಅಣುಸೂತ್ರ ಅಟಿಊ2ಟಿ+2. ಆಲಿಫ್ಯಾಟಿಕ್ ಆಲ್ಕೊಹಾಲ್‍ಗಳ ಅಣುಸೂತ್ರ ಅಟಿಊ2ಟಿ+1ಔಊ. ಅಲ್ಲದೆ ಒಂದು ಅನುರೂಪಶ್ರೇಣಿಯ ಎಲ್ಲ ಸಂಯುಕ್ತಗಳಲ್ಲಿಯೂ ಒಂದೇ ಅಣ್ವಂಗವಿರುವುದರಿಂದ ಅವುಗಳ ರಾಸಾಯನಿಕ ವರ್ತನೆ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ. ಆದರೆ ಬಣ್ಣ, ವಾಸನೆ, ದ್ರವಿಸುವ ಬಿಂದು, ಕುದಿಯುವ ಬಿಂದು, ಮುಂತಾದ ಭೌತಿಕ ಗುಣಗಳನ್ನು ತೆಗೆದುಕೊಂಡರೆ ಶ್ರೇಣಿಯಲ್ಲಿ ಅಣುತೂಕ ಹೆಚ್ಚಾಗುತ್ತ ಹೋದಂತೆ, ಈ ಭೌತಿಕಗುಣಗಳು ಒಂದು ಕ್ರಮದಲ್ಲಿ ವ್ಯತ್ಯಾಸವಾಗುತ್ತ ಹೋಗುತ್ತವೆ. ಅನುರೂಪಶ್ರೇಣಿಗೆ ಸೇರಿದ ಸಂಯುಕ್ತಗಳ ಗುಣಗಳಲ್ಲಿ ಈ ರೀತಿಯ ಒಂದು ಕ್ರಮಬದ್ಧ ವ್ಯವಸ್ಥೆ ಇರುವುದರಿಂದ ಅವುಗಳ ಅಧ್ಯಯನ ಸುಗಮಗೊಳ್ಳುತ್ತದೆ.

ಅನುರೂಪಶ್ರೇಣಿಗೆ ಸೇರಿದ ಸಂಯುಕ್ತಗಳಲ್ಲಿ ಒಂದನ್ನು ಇನ್ನೊಂದರ ಅನುರೂಪಿ (ಹೊಮೊಲೋಗ್) ಎನ್ನುತ್ತಾರೆ. ಪ್ರೊಪೇನ್ ಈಥೇನಿನ ಮೇಲಿನ ಅನುರೂಪಿ; ಮೀಥೇನು ಈಥೇನಿನ ಕೆಳಗಿನ ಅನುರೂಪಿ. ಕೆಲವುವೇಳೆ ಎರಡು ಸಂಯುಕ್ತಗಳು ಒಂದು ಅನುರೂಪ ಶ್ರೇಣಿಗೆ ಸೇರದಿದ್ದರೂ, ಅವೆರಡಕ್ಕೂ ಅಊ2 ವ್ಯತ್ಯಾಸವಿದ್ದರೆ ಒಂದನ್ನು ಇನ್ನೊಂದರ ಅನುರೂಪಿ ಎನ್ನುವುದುಂಟು. ಉದಾಹರಣೆಗೆ ಟಾಲ್ವೀನನ್ನು (ಅ6ಊ5ಅಊ3) ಬೆನಸೀನಿನ (ಅ6ಊ6) ಅನುರೂಪಿ ಎನ್ನುತ್ತಾರೆ.

   (ಜಿ.ಆರ್.ಎಲ್.)