ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಬ್ಡರ್ಹೆಲ್ಡನ್

ವಿಕಿಸೋರ್ಸ್ದಿಂದ

ಅಬ್ಡರ್‍ಹೆಲ್ಡನ್ ಸ್ವಿಡ್ಜರ್‍ಲೆಂಡಿನ ರಸಾಯನಶಾಸ್ತ್ರಜ್ಞ, ಮನಶ್ಯಾಸ್ತ್ರಜ್ಞ (1877-1950). ಹಾಲೆ ಎಂಬಲ್ಲಿ ಶರೀರಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲಸಮಾಡಿದ. ಪ್ರೊಟೀನ್‍ಗಳ ರಚನೆ, ಪಾಲಿಪೆಪ್ಟೈಡ್‍ಗಳ ವಿಶ್ಲೇಷಣೆ, ಮದ್ಯಸಾರೀಯ ವಸ್ತುಗಳ ಹುಳಿಗಟ್ಟುವಿಕೆಯ ಕ್ರಮ-ಇವುಗಳ ಬಗ್ಗೆ ಗಮನಾರ್ಹ ವಿಚಾರಗಳನ್ನು ತಿಳಿಸಿದ್ದಾನೆ.