ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಮೀನ್ಗಳು

ವಿಕಿಸೋರ್ಸ್ದಿಂದ
  ಮೂಲದೊಡನೆ ಪರಿಶೀಲಿಸಿ

ಅಮೀನ್‍ಗಳು

ಅಮೋನಿಯದಿಂದ ಹುಟ್ಟಿದ ರಾಸಾಯನಿಕಗಳು. ಅಮೋನಿಯದಲ್ಲಿನ ಜಲಜನಕ (ಹೈಡ್ರೊಜನ್) ಅಣುಗಳನ್ನು ಒಂದೊಂದಾಗಿ ತೆಗೆದು ಜೈವಿಕ ಅಣುತಂಡಗಳನ್ನು (ಆಗ್ರ್ಯಾನಿಕ್ ಗ್ರೂಪ್ಸ್) ಸೇರಿಸಿದರೆ, ಕ್ರಮವಾಗಿ ಪ್ರಥಮ (ಪ್ರೈಮರಿ), ದ್ವಿತೀಯ (ಸೆಕೆಂಡರಿ) ಮತ್ತು ತೃತೀಯ (ಟರ್ಷಿಯರಿ) ಅಮೀನುಗಳು ಆಗುತ್ತವೆ. ಇವು ಕ್ಷಾರಗುಣವುಳ್ಳವು. ಕೆಳಮಟ್ಟದ ಶ್ರೇಣಿಯವು (ಲೋವರ್ ಮೆಂಬರ್ಸ್). ಅನಿಲಗಳು; ಉಳಿದವು ದ್ರವ ಮತ್ತು ಘನಪದಾರ್ಥಗಳು. ಆಮ್ಲಗಳ ಜೊತೆಗೂಡಿ ಲವಣಗಳನ್ನು (ಸಾಲ್ಟ್ಸ್) ಕೊಡಬಲ್ಲವು.

ಅಮೋನಿಯ ಮಿಥೈಲ್ ಫಿನೈಲ್ ಮಿಥೈಲ್ ಅಮೀನ್

          ಅಮೀನ್
                             
                       ಫಿನೈಲ್ ಡೈಮಿಥೈಲ್ ಅಮೀನ್

ಮಿಥೈಲ್ ಅಮೀನ್ ಹೈಡ್ರೋ ಮಿಥೈಲ್ ಅಮೀನ್

             ಕ್ಲೋರಿಕ್ ಆಮ್ಲ   ಹೈಡ್ರೋಕ್ಲೋರೈಡ್ 

(ವೈ.ಎಸ್.ಎಲ್.)