ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಮೃತಸರ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಅಮೃತಸರ ಪೂರ್ವ ಪಂಜಾಬು ಪ್ರಾಂತ್ಯದಲ್ಲಿನ ಒಂದು ಮುಖ್ಯ ಪಟ್ಟಣ. ನಾಲ್ಕನೆಯ ಗುರು ರಾಮದಾಸನಿಂದ ಸ್ಥಾಪನೆಯಾಯಿತು (1577). ಪ್ರಸಿದ್ಧ ವ್ಯಾಪಾರ ಕೇಂದ್ರ. ಜನಸಂಖ್ಯೆ ಸು. 3,76,000 (1961). ಸಿಖ್‍ರ ಯಾತ್ರಾಸ್ಥಳ ಮತ್ತು ಮತೀಯ ಕೇಂದ್ರಸ್ಥಾನ. ಇಲ್ಲಿ ಪ್ರಸಿದ್ಧವೆನಿಸಿದ ಚಿನ್ನದ ದೇವಸ್ಥಾನವಿದೆ. ಸಿಖ್‍ರ ವಿಶ್ವವಿದ್ಯಾನಿಲಯ ಇಲ್ಲಿ ಸ್ಥಾಪನೆಯಾಗಿದೆ. ಇಲ್ಲಿ ತಯಾರಾಗುವ ಕಾಶ್ಮೀರಿ ಶಾಲುಗಳು ಮತ್ತು ಜಮಖಾನಗಳು ಪ್ರಖ್ಯಾತಿ ಪಡೆದಿವೆ. ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ ನಡೆದುದು (1919) ಈ ನಗರದಲ್ಲಿಯೆ. (ಎಂ.ಎಸ್.)