ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಮೆರಿಷಿಯಂ

ವಿಕಿಸೋರ್ಸ್ದಿಂದ

ಅಮೆರಿಷಿಯಂ

ಸಂಕೇತ Am. ಪರಮಾಣು ಸಂಖ್ಯೆ 95. ಅಮೆರಿಷಿಯಂ ಯುರೇನಿಯಂ ಅನಂತರದ, ಒಂದು ಮಾನವಸೃಷ್ಟಿತ ವಿಕಿರಣಶೀಲ ಮೂಲವಸ್ತು. ಪ್ರಕೃತಿಯಲ್ಲಿ ಇದು ದೊರೆಯುವುದಿಲ್ಲ. ಈ ಮೂಲವಸ್ತುವಿಗೆ ಅನೇಕ ಸಮಸ್ಥಾನಿಗಳಿದ್ದರೂ (ಐಸೊಟೋಪ್ಸ್) ಪ್ರಮುಖವಾದುವು (241), (242) ಮತ್ತು (243). ಹೆಚ್ಚಾಗಿ ಅರ್ಧಾಯುಷ್ಯವುಳ್ಳ ಸಮಸ್ಥಾನಿ (243)ನ್ನು ಅದರ ಪರಮಾಣು ತೂಕವೆನ್ನಬಹುದು. ಸಮಸ್ಥಾನಿ (241)ರ ಅರ್ಧಾಯುಷ್ಯ (470) ವರ್ಷಗಳು ; (242)ರ ಅರ್ಧಾಯುಷ್ಯ (100) ವರ್ಷಗಳು ಮತ್ತು (243)ರ ಅರ್ಧಾಯುಷ್ಯ ಸುಮಾರು (7800) ವರ್ಷಗಳು. ಆವರ್ತನಪಟ್ಟಿಯ ಆ್ಯಕ್ಟಿನೈಡ್ಸ್ ಮಾಲೆಯಲ್ಲಿ (6)ನೆಯ ಸ್ಥಾನವನ್ನು ಪಡೆದಿದೆ. ವಿರಳಲೋಹಗಳೆನ್ನುವ ಲ್ಯಾಂಥನೈಡ್ಸ್ ಮಾಲೆಯಲ್ಲಿ ಆರನೆಯ ಮೂಲವಸ್ತು. ಯೂರೋಪಿಯಂಗೆ ಹೇಗೆ ಯೂರೋಪ್ ದೇಶದ ಹೆಸರನ್ನಿಟ್ಟರೋ ಅದೇ ರೀತಿ ಯುರೇನಿಯಂ ಅನಂತರದ ಹೆಚ್ಚು ಮೂಲವಸ್ತುಗಳನ್ನು ಸೃಷ್ಟಿಸಿದ ಅಮೆರಿಕ ದೇಶದ ನೆನಪಿಗಾಗಿ, ಆ್ಯಕ್ಟಿನೈಡ್ಸ್ ಮಾಲೆಯ ಆರನೆಯ ಮೂಲವಸ್ತುವಿಗೆ ಅಮೆರಿಷಿಯಂ ಎಂದು ಹೆಸರಿಸಿದರು.

(1845)ರಲ್ಲಿ ಆರ್.ಎ.ಜೇಮ್ಸ್, ಎಲ್.ಓ. ಮಾರ್ಗನ್ ಮತ್ತು ಜಿ.ಟಿ.ಸಿ. ಬೋರ್‍ರವರು ಈ ಮೂಲವಸ್ತುವನ್ನು ಕಂಡುಹಿಡಿದರು. (ಎನ್.ಎಸ್.ಎಸ್.ಪಿ.)