ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಯಡೊಫಾರಮ್

ವಿಕಿಸೋರ್ಸ್ದಿಂದ

ಅಯಡೊಫಾರಮ್

ಅಯೋಡೀನನ್ನು ಮದ್ಯಸಾರದಲ್ಲಿ ಕರಗಿಸಿ ಆ ದ್ರಾವಣವನ್ನು ಸೋಡಿಯಮ್ ಕಾರ್ಬೊನೇಟ್ ಕ್ಷಾರದ ಜೊತೆಯಲ್ಲಿ ಕುದಿಸಿದಾಗ ಒಂದು ಹಳದಿ ಬಣ್ಣದ ದ್ರಾವಣ ಉತ್ಪನ್ನವಾಗುತ್ತದೆ. ಇದನ್ನು ತಣಿಸಿದರೆ ಹಳದಿ ಬಣ್ಣದ ಅಯಡೊಫಾರಮ್ ಹರಳುಗಳು (ಅಊI₃) ಘನೀಕರಿಸುತ್ತವೆ. ಇದನ್ನು ಪಡೆಯುವ ಇನ್ನೊಂದು ವಿಧಾನ : ಮದ್ಯಸಾರ (ಅ₂ಊ₅.ಔಊ) ಅಥವಾ ಅಸಿಟೋನ್ (ಅಊ₃ಅಔ.ಅಊ₃) ಜೊತೆಗೆ ಸೋಡಿಯಮ್ ಕಾರ್ಬೊನೇಟ್ ಮತ್ತು ಪೊಟಾಸಿಯಮ್ ಅಯೊಡೈಡ್‍ಗಳನ್ನು ಸೇರಿಸಿ ಆ ಮಿಶ್ರಣದ ಮೂಲಕ ವಿದ್ಯುಚ್ಛಕ್ತಿ ಹಾಯಿಸಿದರೆ ಅಯಡೊಫಾರಮ್ ಸಿಕ್ಕುತ್ತದೆ. ಮೀಥೈಲ್ ಆಲ್ಕೋಹಾಲ್ (ಅಊ₃.ಔಊ) ಮೇಲೆ ತಿಳಿಸಿದ ಯಾವ ರೀತಿಯಲ್ಲೂ ಅಯಡೋಫಾರಮನ್ನು ಕೊಡಲಾರದು. ಆದರೆ ಈಥೈಲ್ ಆಲ್ಕೋಹಾಲ್ ಇದನ್ನು ಕೊಡಬಲ್ಲದು. ಇವೆರಡು ಮದ್ಯಸಾರಗಳನ್ನು ಹೋಲಿಸಲು ಇದು ಒಳ್ಳೆಯ ಪರೀಕ್ಷೆ (ಅಯಡೊಫಾರಮ್ ಟೆಸ್ಟ್). ಅಯಡೊಫಾರಮ್ ತೀವ್ರ ವಾಸನೆಯಿರುವ ಹಳದಿ ಬಣ್ಣದ ಹರಳು; (120) ಸೆಂ.ಗ್ರೇ.ನಲ್ಲಿ ದ್ರವೀಕರಿಸುತ್ತದೆ. ಅಯಡೊಫಾರಮ್ ಕ್ಲೋರೋಫಾರಮ್ಮನ್ನು (ನೋಡಿ- ಕ್ಲೋರೊಫಾರಂ) ಅನೇಕ ಲಕ್ಷಣಗಳಲ್ಲಿ ಹೋಲುತ್ತದೆ. ಔಷಧಿಯಲ್ಲಿ ಇದನ್ನು ಕ್ರಿಮಿನಾಶಕ ವಸ್ತುವಾಗಿ ಬಳಸುತ್ತಾರೆ. (ಕೆ.ಎಸ್.ಎಲ್.)