ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರಿಸ್ಟೋಫೆನೀಸ್

ವಿಕಿಸೋರ್ಸ್ದಿಂದ

ಅರಿಸ್ಟೋಫೆನೀಸ್ : ನಲವತ್ತು ವರ್ಷಕ್ಕೂ ಮೀರಿ ಕೃತಿರಚನೆಯಲ್ಲಿ ನಿರತನಾಗಿದ್ದು ಸುಮಾರು 43 ಕೃತಿಗಳನ್ನು ಹೊರತಂದ ಸುಪ್ರಸಿದ್ಧ ಗ್ರೀಕ್ ಕವಿ. ಅವುಗಳಲ್ಲಿ ಹನ್ನೊಂದು ಯಾವ ವಿಕೃತಿಗೂ ಒಳಗಾಗದೆ ಉಳಿದು ಬಂದಿವೆ. ಪುರಾತನ ಗ್ರೀಕರಲ್ಲಿ ಆಗಿಬಂದ ವಿನೋದ ನಾಟಕಕಾರರಲ್ಲಿ ಅವನೇ ಅಗ್ರೇಸರನೆಂಬುದು ನಿರ್ವಿವಾದ. ಆದರೂ ನಮಗೆ ಗೊತ್ತಾಗಿರುವ ಅವನ ಜೀವನಸಂಗತಿಗಳು ತೀರ ಕಡಿಮೆ. ಹುಟ್ಟಿದ್ದು ಆ್ಯಟಿದಲ್ಲಿ ಪ್ರ ಶ.ಪೂ. ಸು. 448ರಲ್ಲಿ, ಪ್ರ.ಶ.ಪೂ. 385 ಅಥವಾ 380ರಲ್ಲಿ ಈತ ನಿಧನನಾದನೆಂದು ಊಹಿಸಿದ್ದಾರೆ. ತಂದೆ ಫಿಲಿಪಸ್ ಅಥೆನ್ಸಿನ ಒಂದು ಬುಡಕಟ್ಟಿನವನಾಗಿ, ಒಂದು ಅಧಿಕೃತ ಮೊಹಲ್ಲಾಕ್ಕೆ ಸೇರಿದವನಾಗಿದ್ದ. ಈಜಿನ್ ದ್ವೀಪದಲ್ಲಿ ಅವನಿಗೊಂದು ಸಣ್ಣ ಭೂಸ್ವಾಮ್ಯವಿತ್ತು. ಅರಿಸ್ಟೋಫೆನೀಸ್ ಇನ್ನೂ ಚಿಕ್ಕ ಹುಡುಗ ನಾಗಿದ್ದಾಗಲೇ ತಂದೆಯೊಂ ದಿಗೆ ಈಜಿನಕ್ಕೆ ಹೋಗಿ ಇರ ಬೇಕಾ ಯಿತು. ಬಹುಶಃ ಅದನ್ನೇ ಆಧಾರ ಮಾಡಿಕೊಂಡು ಮುಂದೆ ಜನನಾಯ ಕನಾದ ಕ್ಲಿಯಾನ್ ಅವನ ಮೇಲೆ ಅಥೆನ್ಸಿನ ಪೌರತ್ವದ ದುರಾಕ್ರಮಣದ ಆಪಾದನೆ ಹೊರಿಸಿ ನ್ಯಾಯಸ್ಥಾನದ ಮುಂದೆ ಅವನನ್ನು ನಿಲ್ಲಿಸಿದ , ಆಪಾದನೆ ತೀರ ಸುಳ್ಳು; ಮುಯ್ಯಿ ತೀರಿಸಿಕೊಳುವ ಸಲುವಾಗಿ ಕ್ಲಿಯನ್ ಹಾಗೆ ಮಾಡಿದ್ದು. ಯುವಕನಾಗಿದ್ದಾ ಗಲೇ ಆತ ನಾಟಕ ಬರೆಯಲಾರಂಭಿ ಸಿದ. ಪ್ರಥಮ ಕೃತಿ ಪ್ರ ಶ.ಪೂ. 427 ರಲ್ಲಿ ಪ್ರದರ್ಶಿತವಾದ ಔತಣಪ್ರಿಯರು. ಅದಕ್ಕೆ ಸ್ಪರ್ಧೆಯಲ್ಲಿ ಎರಡನೆಯ ಬಹಮಾನ ಬಂತು. 426ರಲ್ಲಿ ನೇಪಥ್ಯ ವನ್ನು ಕಂಡ ಅವನ ಎರಡನೆಯ ಸಾಹಿತ್ಯ ಸಾಹಸ ಬ್ಯಾಬಿಲೋನಿಯನ್ನರು, ಅದಕ್ಕೂ ಎರಡನೆಯ ಬಹುಮಾನ ದೊರಕಿತು. ಇವೆರಡೂ ಈಗ ನಷ್ಟವಾಗಿವೆ. ತನ್ನ ಮೂರನೆಯ ನಾಟಕ ಅಕಾರ್ನಿಯನ್ನರು ಎಂಬುವನ್ನು 425ರಲ್ಲಿ ಪ್ರದರ್ಶಿಸಿ, ಎದುರಾಳಿಗಳಾದ ಹೆಸರಾಂತ ವಿನೋದನಾಟಕಕಾರರಾದ ಕ್ರ್ಯಾಟಿನಸ್ ಮತ್ತು ಯುಪೊಲಿಸ್‍ವನ್ನು ಸೋಲಿಸಿ, ಪ್ರಥಮಸ್ಥಾನ ಪಡೆದುಕೊಂಡ. ಲೋಕಕೆ ಉಪಲಬ್ಧವಾಗಿರುವ ಅವನ ನಾಟಕಗಳು, ಜನಿಸಿದ ಕ್ರಮ, ಆರ್ಜಿಸಿದ ಫಲ, ಹೀಗಿವೆ.

ಪ್ರ.ಶ.ಪೂ. 425 ಅಕಾರ್ನಿಯನ್ನರು ಮೊದಲನೆಯ ಸ್ಥಾನ; ಹೈಪೀಸ್ ಪ್ರ.ಶ.ಪೂ. 424 ರಕ್ಷಕವೀರರು ಮೊದಲನೆಯ ಸ್ಥಾನ; ನೆಫೆಲೈ ಪ್ರ.ಶ.ಪೂ. 423 ಮೋಡಗಳು ಮೊದಲನೆಯ ಸ್ಥಾನ; ಸ್ಪೆಕ್ಸ್ ಪ್ರ.ಶ.ಪೂ. 422 ಖಣಜಗಳು ಮೊದಲನೆಯ ಸ್ಥಾನ ಪ್ರ ಶ.ಪೂ. 421 ಶಾಂತಿ ಐರ್ನೆ ಎರಡನೆಯ ಸ್ಥಾನ ಮುಂದಣ ಏಳು ವರ್ಷದ ದಾಖಲೆಯೆಲ್ಲ ಮಾಯವಾಗಿದೆ. ಪ್ರ ಶ.ಪೂ. 414 ಹಕ್ಕಿಗಳು ಎರಡನೆಯ ಸ್ಥಾನ; ಆರ್ನಿತೆಸ್ ಪ್ರ ಶ.ಪೂ. 411 ಲೂಸಿಸ್ಟ್ರಾಟಿ ಲುಸಿಟ್ರಾಟಿ ಪ್ರ.ಶ. ಪೂ. 411 ಥೆಸ್ಮೊಫರಿಯ ವ್ರತದ ಹೆಣ್ಣುಗಳು ತೆಸ್ಮೊಫ್ರಿಯಝುಸಿಯ ಪ್ರ.ಶ.ಪೂ. 408 ಐಶ್ವರ್ಯ ಪ್ಲೌಟಸ್ ಪ್ರಥಮ ಪತಿ ಪ್ರ.ಶ.ಪೂ. 405 ಕಪ್ಪೆಗಳು ಬಟ್ರಕೊಯ್ ಪ್ರ.ಶ.ಪೂ. 392 ಮಂತ್ರಾಲೋಚನೆಯ ಮಹಿಳೆಯರು ಈಟಿಸಿಯ ಔಸೈ ಪ್ರ.ಶ.ಪೂ. 388 ಐಶ್ವರ್ಯ ಪ್ಲೌಟಸ್ (ದ್ವಿತೀಯ ಪ್ರತಿ)

ಅನಂತರ ಎರಡು ನಾಟಕಗಳನ್ನು ಮಗ ಅರೇರಸ್‍ಗಾಗಿ ರಚಿಸಿದ ಆದರೆ ಈ ಎರಡೂ ನಾಟಕಗಳು ಉಪಲಬ್ದವಿಲ್ಲ. ಅವುಗಳಲ್ಲಿ ಒಂದಾದ ಇಕೊಕಲಸ್ ಹೊಸಬಗೆಯ ವಿನೋದ ನಾಟಕಕ್ಕೆ ದಾರಿ ತೋರಿತು.

ತನ್ನ ಪ್ರಥಮ ರೂಪಕವಾದ ಔತಣಪ್ರಿಯರು ತನಗಿಂತ ವಯಸ್ಸಿನಲ್ಲಿ ದೊಡ್ಡವನಾದ ನಟ ಕ್ಯಾಲಿಸ್ಟ್ರಾಟಸ್‍ನ ಅಂಕಿತದಲ್ಲಿ ಪ್ರದರ್ಶಿಸಿದ. ಹಾಗೇ ಬ್ಯಾಬಿಲೋನಿಯನ್ನರು, ಅಕಾರ್ನಿಯನ್ನರು, ಹಕ್ಕಿಗಳು, ಲೂಸಿಸ್ಟ್ರಾಟಿಗಳಿಗೂ ಆ ನಟನೇ ಬಹಿರಂಗದ ಆಶ್ರಯ. ಮುಂದೆ, ಖಣಜಗಳು, ಕಪ್ಪೆಗಳು ಎಂಬ ಕೃತಿಗಳಿಗೂ ಇನ್ನೊಬ್ಬ ನಟ ಫಿಲಾನಿಡೀಸ್‍ಸಟೆ ಜನಕನಾದ. ನಾಟಕಗಳ ಕರ್ತೃ ಅರಿಸ್ಟೋಫೆನೀಸ್ ಎಂಬ ನಿಜಾಂಶ ಎಲ್ಲರಿಗೂ ಚೆನ್ನಾಗಿ ತಿಳಿದಿದ್ದಿತು. ಹಾಗಾದರೆ ಕೃತ್ರಿಮವೇತವಾಕ್ಕೆಂದು ಕರಾರುಕ್ಕಾಗಿ ಹೇಳಲಾಗುವುದಿಲ್ಲ. ಬಹುಶಃ ಕವಿ ಇನ್ನೂ ವಯೋಧರ್ಮದಿಂದ ಕಿರಿಯನಾಗಿದ್ದುದು ಒಂದು ಕಾರಣ. ನಾಟ್ಯ ಮೇಳಕ್ಕೆ ಶಿಕಣಕೊಟ್ಟು ಸಮರ್ಪಕವಾಗಿ ತರಬೇತುಮಾಡುವ ಜವಾಬ್ದಾರಿಗೆ ಅವಶ್ಯಕವಾದ ಜ್ಞಾನವೂ ಅನುಭವೂ ಅವನಲ್ಲಿ ಇರಲಿಲ್ಲವೆನ್ನ ಬಹುದು. ಆದರೆ ಅವನ ಉದ್ಘಕೃತಿಯಾದ ಹಕ್ಕಿಗಳು ಬೆಳಕು ಕಾಣುವ ಹೊತ್ತಿಗೆ ಅವನಿಗೆ ವಯಸ್ಸು 37; 13 ವರ್ಷಕ್ಕೂ ಮೇಲ್ಪಟ್ಟು ನಾಟಕ ಶಾಲೆಯ ನಿಕಟ ಸಂಪರ್ಕ ಏರ್ಪಟ್ಟಿತ್ತು. ಕಪ್ಪೆಗಳು ನಾಟಕ ರಚನೆಯ ಹೊತ್ತಿಗೆ ಅವನ ವಯಸ್ಸು 42. ನಾಟಕಶಾಲೆಯ ಸಂಬಂಧ ಪೂರ್ತಿ 22 ವರ್ಷ. ಯಥಾರ್ಥವಾಗಿ ಹೀಗಿದ್ದರೂ ತನ್ನ ನಾಮಧೇಯವನ್ನು ಮರೆಮಾಚಿದ್ದೇಕೆಂದು ತಿಳಿಯದು. ಅವನ ವಿನೋದನಾಟಕವೆಲ್ಲ ಕುಚೋದ್ಯಕ್ಕೆ ಮೀಸಲು. ಲೇಖಕರೆಂಬ ಅಂಶವನ್ನೂ ಹುಡುಗಾಟಕ್ಕೆ ಈಡುಮಾಡುವ ಬಯಕೆ ಪ್ರಾಯಶಃ ಅವನಲ್ಲಿ ಮೂಡಿರಬಹುದೆನಿಸುತ್ತದೆ.

ಪುರಾತನ ವಿನೋದಕಾರರಲ್ಲಿ ಹಳೆಯ ಬಗೆಗೆ (ಓಲ್ಡ್ ಕಾಮೆಡಿ) ಸೇರಿದವರೆಲ್ಲ ಸಾಮಾನ್ಯವಾಗಿ ಹಿಂದಿನದನ್ನು ಹೊಗಳುವವಸ್ತು, ಇಂದಿನದನ್ನು ತೆಗಳುವವಸ್ತು. ಅವರಲ್ಲಿ ಅತ್ಯಂತ ಮೇಧಾವಿಯೂ ಪ್ರಚಂಡಪ್ರತಿಭಾವಂತನೂ ಆದ ಅರಿಸ್ಟೋಫೆನೀಸ್ ಗಂತೂ ಅಥೆನ್ಸಿನ ಸುವರ್ಣಸಮಯವೆಂದು ಪಕಾಶಮಾನವಾಗಿದ್ದ ಮ್ಯಾರಥಾನ್ ದಿವಸಗಳು ಬಾಯಲ್ಲಿ ನೀರೂರಿಸುತ್ತಿದ್ದುವು. ಆ ತಲೆಮಾರಿನ ಗ್ರೀಕ್ ಜನತೆಯಲ್ಲಿ ರೂಢಮೂಲವಾಗಿದ್ದ ದೈವಭಕ್ತಿ, ದೇಶಭಕ್ತಿ, ಪೂರ್ವಾಚಾರಪ್ರಿಯತೆ, ಹಿರಿಯರಲ್ಲಿ ಕಿರಿಯರಿಗಿದ್ದ ಹೆಗ್ಗೌರವ, ನಿಷ್ಕಾಪಟ್ಯ, ಸೌಶೀಲ್ಯ, ಸರಳತೆ, ಕುಟುಂಬ ಗೃಹಸ್ವಾಮಿಯ ಹಿಡಿತದಲ್ಲಿರುವಿಕೆ, ಧೈ ರ್ಯ, ಧಾರಾಳ, ಪರಾಕ್ರಮ, ಆಶಾವಾದ-ಎಲ್ಲವೂ ಅವನಿಗೆ ಅಚ್ಚುಮೆಚ್ಚು. ಅಂಥ ಉದಾತ್ತ ಆದರ್ಶದಿಂದ ಎಷ್ಟೋ ಕೀಳುಮಟ್ಟದಲ್ಲಿ ಸಡಿಲವಾಗಿ ನಡೆಯುತ್ತಿದ್ದ ತನ್ನ ಸಮಕಾಲೀನ ಸನ್ನಿವೇಶಗಳನ್ನು ಪರೀಕ್ಷಿಸಿ ಆತ ರೋಷಭರಿತನಾಗುತ್ತಿದ್ದ . ಮಂದಿಯ ವೈಯಕ್ತಿಕ ರೀತಿನೀತಿಗೆ ಹದ್ದುಂಟೆ? ಹಾಳತವುಂಟೆ? ನಾನಾ ವಿಧದ ಸ್ವೇಚ್ಛಾಚಾರ ತಾನೇ ತಾನು. ಸಾಮಾಜಿಕ ಬದುಕಿನಲ್ಲಿ ಬರೀ ನಟನೆ, ಮೋಸ, ಸ್ವಾರ್ಥಪರತೆ, ರಾಜಕೀಯದಲ್ಲಿ ಅಪ್ರಾಮಾಣಿಕತೆ, ವಾಗಾಡಂಬರ, ವಂಚನೆ, ದ್ರೋಹ. ವಿದ್ಯಾಭ್ಯಾಸದಲ್ಲಿ ನವೀನಸಿದ್ಧಾಂತಗಳ ಪ್ರಚಾರ, ಮೇಲುಮೇಲಣ ಬುರುಗು, ಕುತರ್ಕ, ಸಂಗೀತ, ಕಾವ್ಯರೂಪಗಳಲ್ಲಿ ವಿಕಾರವಾದ ಮಾರ್ಪಾಟುಗಳು. ಇಂಥ ಆತಂಕಕಾರಿ ವ್ಯವಹಾರಗಳಿಂದ ರೋಸಿಹೋಗಿ, ಅದನ್ನುಕವಿ ತನ್ನ ಭಯಂಕರ ಅಣಕಕ್ಕೂ ಲೇವಡಿಗೂ ತಿರುತಿರುಗಿ ಈಡುಮಾಡಿ ನೊಂದ ತನ್ನ ಹೃದಯಕ್ಕೆ ಕೊಂಚ ಸಮಾಧಾನವನ್ನು ತಂದುಕೊಂಡ. ಸೋಲನ್, ಪೀಸಿಸ್ಟ್ರಾಟಸ್‍ರ ಜಾಗದಲ್ಲಿ ಕ್ಲಿಯಾನ್, ಲುಮಾಕಸ್ಸರೆ? ಈಸ್ಕಿಲಸ್ಸನ ಗದ್ದುಗೆಯ ಮೇಲೆ ಯೂರಿಪಿಡೀಸ್? ಆಂತರ್ಯದಲ್ಲಿ ಜ್ಯೋತಿವನ್ನು ಹೊತ್ತುತಿದ್ದ ಜ್ಞಾನಿಗಳ ಬದಲು ಶುಲ್ಕ ಪಡೆದು ಪಾಠಕಲಿಸುವ ಸೋಫಿಸ್ಟ್ ಉಪಾಧ್ಯಾಯರೆ? ಇದೇ ಅವನ ತೀವ್ರ ತಾಪ. ಬಾಳಿನ ಸಕಲ ಮುಖ್ಯ ಶಾಖೆಗಳನ್ನೂ ತನ್ನ ದೃಷ್ಟಿಗೆ ತೆಗೆದುಕೊಂಡು ವಿಮರ್ಶನಗೈ ದ ಕವಿಗೆ ಯಾವುದನ್ನೇ ಆಗಲಿ ಯಾರನ್ನೇ ಆಗಲಿ ಅವಲೋಕಿಸುವಾಗ ಹುಚ್ಚು ನಗು ಎಬ್ಬಿಸುವ ತೀಕ್ಣ ಹಾಸ್ಯವೇ ಸಾಧನೆ. ಗಂಭೀರನಾಟಕ ಎಲ್ಲೂ ಹಗುರವಾಗಬಾರದು. ವಿನೋದ ನಾಟಕದೊಳಕ್ಕೆ ಗಾಂಭೀರ್ಯ ನುಗ್ಗಬಾರದು. ಇದೊಂದು ಕಟ್ಟಾಜ್ಞೆಯಂತಿತ್ತು. ಆ ಸಮಯದಲ್ಲಿ ಪರಿಣಾಮವಾಗಿ ಸಾಮಾಜಿಕರು ಅರಿಸೋಫನೀಸ್‍ನ ಪರಿಹಾಸ, ಹದಿರುನುಡಿ, ಗೇಲಿಗಳಿಂದ ಉಲ್ಲಾಸ ಹೊಂದುತ್ತಿದ್ದ ರೇ ವಿನಾ ಅವನ ಹಾಸ್ಯ ವ್ಯಂಗ್ಯಗಳ ಒಳUಡೆ ಮಂಡಿಸಿದ್ದ ಉತ್ತಮ ತತ್ವಗಳ ಕಡೆಗೆ ತಮ್ಮ ಲಕ್ಷ್ಯವನ್ನು ಹರಿಯಗೊಡುತ್ತಿರಲಿಲ್ಲ. ಬರುಬರುತ್ತ ತನ್ನ ಅಪಹಾಸ್ಯದಿಂದ ಏನೊಂದು ಸತ್ಸುಧಾರಣೆಯೂ ಆಗಲಿಲ್ಲವೆಂಬ ಸತ್ಯಾಂಶ ಕಂಡು, ಮನಗಂಡು, ಕವಿ ಬೇಸರಪಟ್ಟ. ಹತಾಶೆ ಅವವನ್ನು ಆವರಿಸಿತು. ಆದರೂ ಕವಿತಾಶಕ್ತಿ ತೆಪ್ಪಗೆ ಕುಳ್ಳಿರುತ್ತದೆಯೆ ಬರಿ ಅಭೀಷ್ಟ, ಕೇವಲ ಕನಸು ಕೂಡ ನಾಚದ ಅದ್ಭುತಗಳ ಮೇಲೆ ಕೆಲವು ವಿನೋದ ನಾಟಕಗಳನ್ನು ರಚಿಸಿದ.

ಇಷ್ಟೇ ಆಗಿದ್ದಿದ್ದ ರೆ ಅವನು ಪ್ರಪಂಚದ ಸಾಹಿತಿಗಳಲ್ಲಿ ಒಬ್ಬ ಎನ್ನಿಸಿಕೊಳ್ಳುತ್ತಿರಲಿಲ್ಲ. ಆ ಧವಳಕೀರ್ತಿವನ್ನು ಅವನಿಗೆ ತಂದುಕೊಟ್ಟಿರುವುದು ಅವನ ಅದ್ವಿತೀಯ ಕಾವ್ಯಶಕ್ತಿ. ಯೂರಿಪಿಡೀಸನ ನಾಟಕಕ್ರಮವನ್ನೂ ಪಾತ್ರಚಿತ್ರಣವನ್ನೂ ಆತ ಎಷ್ಟೇ ಕಟುವಾಗಿ ದೂಷಿಸಿದರೂ ಆ ಕವೀಶ್ವರನ ಮಧುವಾಣಿಗೆ ಮನಸೋತಿದ್ದ. ಯೂರಿಪಿಡೀಸನನ್ನು ಪೂರ್ತಿ ಕಂಠಪಾಟಮಾಡಿದ್ದ. ಅಯತ್ನಿತವಾಗಿ ತನ್ನ ವಿನೋದನಾಟಕದಲ್ಲೂ ಅವನಂತೆಯೇ ಇಂಪಾದ ಗೀತೆಗಳನ್ನು ತಂದು ಜೋಡಿಸಿ ಶೋತೃಗಳನ್ನು ಮುಗ್ಧಗೊಳಿಸಿದ. ಶೈಲಿಯಲ್ಲಿ ಅವರಿಬ್ಬರಿಗೂ ಸಾದೃಶ್ಯ ಎಷ್ಟರಮಟ್ಟಿಗೆ ಕಂಡುಬಂದಿತೆಂದರೆ, ಅದನ್ನು ಬಣ್ಣಿಸುವುದಕ್ಕೆ ಕ್ರ್ಯಾಟಿನಸ್ ಯೂರಿಪಿಡರಿಸೋಫನೀಸ್ ಎಂಬ ಹೊಸಪದವನ್ನು ನಿರ್ಮಿಸಿದ. ಅದಿರಿಲಿ, ಅರಿಸ್ಟೋಫೆನೀಸ್ ಹೀಗೆ ಜೀವನವಿಮರ್ಶೆಯನ್ನೂ ಘನವೂ ಸೂಕ್ಷ್ಮವೂ ಆದ ಅಭಿಪ್ರಾಯಪುಂಜವನ್ನೂ ಒದಗಿಸುತ್ತಾನೆ. ಹಾಸ್ಯಪ್ರಮುಖವಾದ ವಿಡಂಬನವನ್ನು ಎಂದೂ ಎಲ್ಲೂ ಕೈಬಿಡುವುದಿಲ್ಲ. ಜೊತೆಗೆ ಜಾಣ ವಿಭಾವನೆಯಿಂದಲೂ ತೀವ್ರರಾಗದಿಂದಲೂ ಕೂಡಿದ ಸುಶ್ರಾವ್ಯ ಭಾವಗೀತೆಗಳನ್ನೂ ಮಳೆಗರೆಯುತ್ತಾನೆ. ಇಂಥ ಸತ್ಕಾರಯೋಗ್ಯವಾದ ಸಂಮಿಶ್ರತೆಯ ವೈಚಿತ್ರ್ಯ ಮತ್ತಾವ ಕವಿವರ್ಯನಲ್ಲೂ ಗೋಚರಿಸುವುದಿಲ್ಲ.

ನಾಟಕವಸ್ತುವಿನ ಸಂವಿಧಾನದಲ್ಲೂ ಆತನ ಮಾದರಿಗೆ ಪ್ರತ್ಯೇಕ ವೈಲಕ್ಷಣ್ಯವಿದೆ. ನಾಲ್ಕಾರು ಘಟನಾವಳಿಗಳಿಂದಾದ ಸಮಕಟ್ಟಿನ ಆಖ್ಯಾನ ಅವನಂಗಡಿಯ ಮಾಲಲ್ಲ. ನಿಜ ನುಡಿಯಬೇಕಾದರೆ, ಅವನ ಉದ್ದೇಶ ಕಥೆ ಹೇಳುವುದಲ್ಲ. ಸಿಡಿಲಿನಂತೆ ಸಿಡಿದು ಕ್ಷೋಭೆ ಉಂಟು ಮಾಡುವ ಯಾವುದೋ ವಿನೂತನ ಮನೋಗತ ಅಥವಾ ಮಹಾಸಂಕಲ್ಪವೇ. ನಾಟಕದ ತಿರುಳು, ಸರ್ವಸ್ವ. ಅದನ್ನುಹಲವು ಪುಟ್ಟ ದೃಶ್ಯಗಳ ಸಹಾಯದಿಂದಲೂ ಮೇಳಗೀತಗಳ ಮೂಲಕವೂ ಪ್ರತಿಪಾದಿಸುವುದೇ ಕವಿಯ ಕೆಲಸ. ನಾಟಕದಲ್ಲಿ ಮೂರು ಅಂಗಗಳನ್ನು ಕಾಣುತ್ತೇವೆ. ಪ್ರಾರಂಭದಲ್ಲಿ ನಾಯಕ ಪಾತ್ರ ಆಗಮಿಸಿ ತನ್ನಲ್ಲಿ ಉದಯವಾಗಿ ರುವ ವಿಸ್ಮಯಕಾರಕವಾದರೂ ಉಪಯುಕ್ತವಾದ ಹೆಬ್ಬಯಕೆವನ್ನು ವಚನಿಸುತ್ತದೆ, ಅದನ್ನುಕಾರ್ಯಾಚರಣೆಗೆ ತರುವ ಕರ್ತವ್ಯವನ್ನು ಕೂಡಲೇ ಕೈಗೊಂಡು ಕಠೋರ ಅಡಚಣೆಗಳು ಅಡ್ಡಬಂದರೂ ಉಪಾಯದಿಂದ ಅದನ್ನು ಅತಿಕ್ರಮಿಸಿ, ಹಿಡಿದ ಪ್ರಯತ್ನವವನ್ನು ನೆಲೆಗೆ ಮುಟ್ಟಿಸಿ, ಕೃತಕೃತ್ಯವಾಗುತ್ತದೆ. ಅನಂತರ, ಮಧ್ಯದ ಭಾಗವಾಗಿ, ನಾಟ್ಯಮೇಳ ಸಾಮಾಜಿಕ ಸಂದೋಹದ ಎದುರಿಗೆ ನಿಂತು, ಕವಿಯ ಪರವಾಗಿ ಹಾಡು ಹಾಡಿ, ಭಾಷಣ ಮಾಡಿ, ಹುರಿದುಂಬಿಸುತ್ತದೆ. ಇದೇ ಮುಂಭಾಗಕ್ಕೆ ಅಡಿಯಿಡುವಿಕೆ (ಪ್ಯಾರ ಬಸಿಸ್) ಎಂಬ ಕುತೂಹಲಜನಕವಾದ ಸಂಗತಿ. ಮೂರನೆಯ ಭಾಗದಲ್ಲಿ ನಾಯಕನ ಯೊಜನೆಯಿಂದ ಉಂಟಾಗಿರುವ ಸತ್ಫಲಗಳನ್ನು ಕೆಲವು ಬಿಡಿ ದೃಶ್ಯಗಳು ತೋರಿಕೊಡುತ್ತವೆ. ನಾಯಕನ ಹಿರಿಮೆವನ್ನು ಸ್ಪಷ್ಟಗೊಳಿಸಿ, ಆತವನ್ನು ಒಂದು ವಿಧದ ದೇವತ್ವಕ್ಕೆ ಏರಿಸಿ ಮುಕ್ತಾಯವಾಗುತ್ತದೆ, ಸಡಗರದ ನಾಟಕ. ಅಸಾಧಾರಣವಾದ ವಿಚಿತ್ರಾಭಿಪ್ರಾಯವೇ ನಾಟಕದ ರಸಯುಕ್ತ ಕೊಡುಗೆ. ಲೋಕಾಚಾರಕ್ಕೆ ವಿಪರ್ಯಾಸವಾದರೂ ಅದು ತಿರಸ್ಕಾರಯೋಗ್ಯವಾದ ತಿರುಗು ಮುರುಗಲ್ಲ, ತಲೆಕೆಳಗಲ್ಲ. ಚಿಂತನೆಯನ್ನು ಕೆರೆಳಿಸುವ ಪ್ರಚೋದನೆ ಅದು. ಆತನ ಪ್ರತಿಯೊಂದು ನಾಟಕವೂ ಕಾರ್ಯಗತವಾದ ಒಂದೊಂದು ತಮಾಷೆ. ನಗು ಬರಿಸುವ ವಾಕ್ಯವೂ ಕೈ ಮೈ ಒಲೆದಾಟವೂ ಹಾಗಿರಲಿ, ಇಡೀ ವಿರಚನೆಯೇ ಒಂದು ಕುಚೋದ್ಯ.

ವಿನೋದನಾಟಕವನ್ನು ತಾನೇ ತಿದ್ದಿ ಸಿಂಗರಿಸಿ ಕೊಳೆ ಮಾಲಿನ್ಯವೆಲ್ಲವನ್ನೂ ತೊಡೆದು ಹಾಕಿ ಅಂದಗೊಳಿಸಿದಾತನೆಂದು ಹೆಮ್ಮೆಯಿಂದ ಹೇಳಿಕೊಂಡ, ಅರಿಸ್ಟೋಫನೀಸ್. ತನ್ನ ಕೈಗೆ ಅದು ಬಂದಾಗ ಒರಟು, ಒಡ್ಡು, ಪೋಕರಿತನಗಳಿಂದ ಅದರ ರೂಪ ಕುರೂಪವಾಗಿ ತ್ತಂತೆ, ಗ್ರಾಮ್ಯತೆ, ಅಶ್ಲೀಲ, ಅವಲಕ್ಷಣಗಳನ್ನು ತೆಗೆದುಹಾಕಿ, ಸುಸಂಸ್ಕೃತ ನಡೆನುಡಿ ಹಾವ ಭಾವ ಒಯ್ಯಾರಗಳನ್ನು ಹೊಂದಿಸಿಕೊಟ್ಟು, ನಾಗರಿಕ ಸಮಾಜಕ್ಕೆ ಅದು ಸಮಂಜಸ ವಾಗುವಂತೆ ಏರ್ಪಡಿಸಿದನಂತೆ. ಒಣ ಜಂಭವಲ್ಲ ಈ ಮಾತು. ಅರಿಸ್ಟೋಫೆನೀಸ್ ವಿನೋದನಾಟಕಕ್ಕೆ ಶಿಸ್ತನ್ನು ತಂದುಕೊಟ್ಟ; ಆದರೆ ಅಶ್ಲೀಲತೆ ಅತಿರೇಕಗಳು ಅವನಲ್ಲೂ ಅಲ್ಪ ಸ್ವಲ್ಪ ಉಂಟು.

ಅಕಾರ್ನಿಯನ್ನರು ಎಂಬ ನಾಟಕದ ಮುಖ್ಯ ಪಾತ್ರ ಡಿಕಿಯೊಪೊಲಿಸ್ (ಪ್ರಾಮಾಣಿಕತೆ, ರಾಜ್ಯನೀತಿ) ಗ್ರಾಮಾಂತರದವನಾದರೂ ವಿವೇಕಶಾಲಿ. ಅಥೆನ್ಸ್ ಎಚ್ಚರಗೇಡಿತನದಿಂದ ಸ್ಪಾರ್ಟದೊಂದಿಗೆ ಯುದ್ಧ ಹೂಡಿರುವುದರಿಂದ ಆತ ತನ್ನ ಮನೆ ಜಮೀನನ್ನು ಬಿಟ್ಟುಕೊಟ್ಟು ನಗರಕ್ಕೆ ಬಂದು ನಿಲ್ಲಬೇಕಾಯಿತು. ಸೌಕರ್ಯವಿಲ್ಲ, ವಿಶ್ರಾಂತಿಯಿಲ್ಲ. ಹೊತ್ತನ್ನು ಮರೆಸುವ ವ್ಯವಸಾಯವಿಲ್ಲ. ನರಳುತ್ತಿದ್ದಾನೆ, ಅರ್ಧದೇವತೆ ಆಂಪಿತಿಯಸ್‍ವನ್ನು ದೇವವರ್ಗ ಮಧ್ಯಸ್ತಿಕೆಗೋಸ್ಕರ ನೇಮಿಸಿ ಕಳಿಸಿದ್ದಾರೆ; ಆದರೆ ಅವನ ಬಳಿ ಸ್ಪಾರ್ಟಕ್ಕೆ ಹೋಗಿಬರುವ ಖರ್ಚಿಗೆ ದುಡ್ಡಿಲ್ಲ. ರಾಷ್ಟ್ರಸಭೆಯನ್ನು ಹೊಕ್ಕು ಪ್ರಯಾಣದ ವೆಚ್ಚವನ್ನು ಬೇಡುತ್ತಾನೆ; ಆಡಳಿತಗಾರರಿಂದ ಅವನಿಗೆ ಕೋಲುಸೇವೆಯಾಗುತ್ತದೆ. ಪರ್ಷಿಯಕ್ಕೆ ಹೋಗಿದ್ದ ರಾಯಭಾರಿಗಳು ಆ ಆಸ್ಥಾನದ ಸಚಿವ ಶ್ರೀಮಂತ ರಾಜನೇತ್ರನೊಂದಿಗೆ ಹಿಂತಿರುಗಿ, ಅಲ್ಲಿಂದ ಹೇರಳ ಹೊನ್ನು ಬರುವ ಭರವಸೆ ಇದೆ ಎನ್ನುತ್ತಾರೆ. ಅದೆಲ್ಲ ಮೋಸದ ಕುತಂತ್ರವೆಂಬುದನ್ನು ಡಿಕಿಯೊಪೊಲಿಸ್ ಬಲ್ಲ, ಆದರೆ ಅವನೊಬ್ಬನೇ ಕದನವಿರೋಧಿ, ಏನನ್ನು ತಾನೇ ಮಾಡಬಲ್ಲ? ಬಲಿದ ದುಗುಡದ ಮಧ್ಯೆ ಅವನಿಗೊಂದು ಯೋಜನೆ ಹೊಳೆಯುತ್ತದೆ. ಅಂಪಿತಿಯಸ್‍ವನ್ನು ಗುಟ್ಟಾಗಿ ಕರೆದು, ಎಂಟು ಹಣವನ್ನು ಅವನಿಗಿತ್ತು, ತನ್ನೊಂದು ಸಂಸಾರಕ್ಕೆ ಮಾತ್ರ ಅನ್ವಯಿಸುವ ಪ್ರತ್ಯೇಕ ಶಾಂತಿಕೌಲಿಗೆ ಸ್ಟಾರ್ಟವನ್ನು ಒಪ್ಪಿಸೆಂದು ನಿರೂಪವಿತ್ತು ಬೀಳ್ಕೊಡುತ್ತಾನೆ. ಥ್ರೇಸಿನಿಂದ ಕಾಡುಜನರ ರೌದ್ರಸೈ ನ್ಯವೊಂದು ಅಥೆನ್ಸಿನ ಸಹಾಯಕ್ಕೆ ಬರುತ್ತದೆ; ಅವರು ಸಿಕ್ಕಿದ್ದೆಲ್ಲವನ್ನೂ ಅಧಿಕಾರಿಗಳ ಕಣ್ಣೆದುರೇ ದೋಚಿಕೊಳ್ಳುತ್ತಾರೆ. ಪಾಪ, ಡಿಕೊಯೊಪೊಲಿಸನ ತಿಂಡಿತೀರ್ಥವೂ ಅವರ ಪಾಲು. ಇಮ್ಮಡಿಯಾಗುತ್ತದೆ ಅವನ ವ್ಯಸನ. ಆ ಸಮಯಕ್ಕೆ ಶುಭವಾರ್ತೆಯೊಡನೆ ಅಲ್ಲಿಗೆ ಬರುತ್ತಾನೆ, ಆಂಪಿತಿಯಸ್, ಸ್ಟಾರ್ಟದವರು ಮೂರು ಬಗೆಯ ಮದ್ಯವನ್ನು ಶಾಂತಿ ಕರಾರಾಗಿ ಕಳಿಸಿದ್ದಾರೆ. 5 ವರ್ಷದ್ದು, 10ವರ್ಷದ್ದು, 30 ವರ್ಷದ್ದು. ಡಿಕಿಯೋಪೊಲಿಸಿನಿಗೆ ಕಡೆಯದೇ ಬಲುರುಚಿ. ಆದರೂ ಅವನ ಕಷ್ಟತಗಳು ಕೊನೆಗೂಂಡಿಲ್ಲ. ದೇಶದ್ರೋಹಿಯೆಂದು ಅವವನ್ನು ಸಂಬೋಧಿಸುತ್ತ ಉಗ್ರರಾದ ಜನ ದಂಡ ವಿಧಿಸುವುದಕ್ಕೆ ಹಾತೊರೆಯುತ್ತಿದ್ದಾರೆ. ಡಿಕಿಯೊಪೊಲಿಸ್ ಯೂರಿಪಿಡೀಸನಲ್ಲಿಗೆ ಓಡಿಹೋಗಿ ಅವನಿಂದ ಟ್ರ್ಯಾಜಿಕ್ ನಟನ ಚಿಂದಿ ಬಟ್ಟೆ ಮಣ್ಣು ಪಾತ್ರೆ ದೊಣ್ಣೆಗಳನ್ನು ಎರವು ಪಡೆದು, ಸಭೆಗೆ ಹಿಂದಿರುಗಿ, ಭಾಷಣ ಮಾಡುತ್ತಾನೆ. ಎದುರಾಳಿ ಯುದ್ಧಾಪೇಕ್ಷಿ ಲಮಾಕಸ್‍ವನ್ನು ಸೋಲಿಸುತ್ತಾನೆ. ವಾಕ್ಸಮರದಲ್ಲಿ. ಅನಂತರ ಪ್ಯಾರಬಸಿಸ್. ಮೂರನೆಯ ಭಾಗದಲ್ಲಿ ಡಿಕಿಯೊಪೊಲಿಸ್‍ನೊಡನೆ ಕೊಟ್ಟು ತೆಗೆದುಕೊಳ್ಳುವುದಕ್ಕೆ ತಮ್ಮ ತಮ್ಮ ಸರಕಿನೊಂದಿಗೆ ಮೆಗಾರದಿಂದ ಥೀಬ್ಸಿನಿಂದ ಜನ ಧಾವಿಸುತ್ತಾರೆ. ಅಲ್ಲಿಗೆ ಬಂದ ಕೆಲವು ಅಥೆನ್ಸಿವರಿಗೆ ಅದೃಷಶಾಲಿಯನ್ನು ಕಂಡು ಮೆಚ್ಚಿಕೆ, ಅಸೂಯೆ. ಲಮಾಕಸ್ಸನಾದರೂ ಸಂಗರತೃಷ್ಣೆಯನ್ನು ಬಿಡುವುದಿಲ್ಲ. ಪೆಟ್ಟುತಿಂದು ಗಾಯಗಳ ನೋವಿನಿಂದ ಬಸವಳಿದು ಹಿಂತಿರುಗಿ ಗೋಳಾಡುತ್ತಾನೆ. ಹಠಮಾರಿ. ಡಿಕಿಯೋಪೊಲಿಸನಿಗೆ ಕುಗ್ಗದ ಸಮ್ಮೋದ.

ರಕ್ತವೀರರು ವಿಲಕ್ಷಣಪ್ರತಾಪದಿಂದ ಕ್ರಾಂತಿಪೂರ್ಣವಾಗಿರುವ ರೂಪಕ. ಕೇಂದ್ರ ವ್ಯಕ್ತಿ ಡೀಮಸ್-ಆಸತಿವಂತ, ಮುಂಗೋಪಿ, ಸಂಶಯ ಸ್ವಭಾವದವ. ಮನೆ ಮಂದಿ ಆಳುಕಾಳು ಯಾರನ್ನೂ ಆತ ನಂಬುವುದಿಲ್ಲ; ಆದರೆ ಪ್ಯಾಫ್ಲಗೋನಿಯದ ಒಬ್ಬನನ್ನು ಗುಲಾಮನಾಗಿ ಕೊಂಡಂದಿನಿಂದ ಅವನಿಗೆ ತಾನೇ ಅಡಿಯಾಳಾಗಿದ್ದಾನೆ. ಗುಲಾಮ ಯಜಮಾನವನ್ನು ತನ್ನ ಕೈಗೊಂಬೆಯಂತೆ ಆಡಿಸುತ್ತಿದ್ದಾನೆ. ಆ ಠಕ್ಕನಿಂದ ಇತರ ಸೇವಕರೆಲ್ಲರಿಗೂ ಚಿತ್ರಹಿಂಸೆ. ತಡೆದು ತಡೆದು ಸಾಕಾಗಿ ಇಬ್ಬರೂ ಮಸಲತ್ತು ನಡೆಸುತ್ತಾರೆ. ಬಹಳ ಹಿಂದೆ ಬಾಕಿಸ್ ದೇವತೆ ಕಣಿ ಹೇಳುತ್ತದೆಂದು ಡೀಮಸ್‍ಗೆ ಬಿನ್ನವಿಸುತ್ತಾರೆ. ಅದೇನೆಂದರೆ, ಡೀಮಸ್ ಕ್ರಮವಾಗಿ ನಾಲ್ಕು ಚಿಲ್ಲರೆ ವ್ಯಾಪಾರಿಗಳ ಉಸ್ತುವಾರಿಗೆ ಒಳಗಾಗತಕ್ಕದ್ದು; ಅಗಸೆಹಗ್ಗದವ, ಕುರಿಮಂದೆಯವ, ಚಕ್ಕಳದವ, ಕರಿಗಡುಬನ್ನು ಮಾರುವವ. ಪ್ಯಾಫ್ಲಗೋನಿಯದ ಮನುಷ್ಯನೇ ಚಕ್ಕಳದ ವರ್ತಕ; ಅವನ ಅಧಿಕಾರ ಇನ್ನೇನು ಮುಗಿಯುತ್ತದೆ ಆತ ಬಂದು ಗುಡುಗಾಡಿದರೂ ಅಂಜದೆ, ಅವರಿಬ್ಬರೂ ಹುಡುಕಾಡಿ ನಾಲ್ಕನೆಯ ಬೀದಿ ವ್ಯಾಪಾರಿವನ್ನು ಕಂಡುಹಿಡಿದು, ಅವನ ಭವಿಷ್ಯ ದೊಡ್ಡದೆಂದು ಪುಸಲಾಯಿಸಿ, ತಮ್ಮ ವೈರಿಯೆದುರು ಹೋರಾಟಕ್ಕೆ ಅವವನ್ನು ಕೆರೆಳಿಸುತ್ತಾರೆ. ಸುಳ್ಳು, ಕಳವು. ಭಾಷಾಭಂಗ, ಧೃಷ್ಟತನ, ಬಡಾಯಿ ಎಲ್ಲದರಲ್ಲೂ ಅವನ ಕೈಯೇ ಮೇಲಾಗಿ, ಪ್ಯಾಫ್ಲಗೋನಿಯದವನ ವಂಚನೆಯೂ ಟೊಳ್ಳೂ ಬಯಲಾಗುತ್ತವೆ. ಅಪಜಯವನ್ನು ಒಪ್ಪಿಕೊಂಡು ಆತ ಹಿಂದಕ್ಕೆ ಸರಿಯುತ್ತಾನೆ. ಅವನಿಗೆ ಇನ್ನು ಮುಂದೆ ಕೋರಿಸೆಟ್ಟಿಯಾಗುವುದೊಂದೇ ಉದರಭರಣಕ್ಕೆ ಇರುವ ಉಪಾಯ. ಹಿತಚಿಂತಕನ ಅಧಿಕಾರಮುದ್ರೆವನ್ನು ಡೀಮಸ್ ಹೊಸಬನಿಗೆ ಕೊಡುತ್ತಾನೆ. ಹಾಗೆ ಮಾಡಿದ ತಕ್ಷಣವೇ ಡೀಮಸ್‍ಗೆ ತಾರುಣ್ಯ, ಲವಲವಿಕೆ, ಗೆಲವು, ಆಸಕ್ತಿಗಳು ಕೂಡಿಬರುತ್ತವೆ. ಕಳೆಯೇರುತ್ತದೆ. ಅವನ ಮುಖ. ಕಣ್ಮರೆಯಾಗಿದ್ದ ಶಾಂತಿ ಸುಭಿಕ್ಷದ ಕಾಲ ಪುನಃ ಪ್ರಾಪ್ತಿಸಿದಂತೆ ಅವನಿಗೆ ಸಂತೋಷವಾಗುತ್ತ್ತದೆ.

ಕವಿಯ ಇಂಗಿತವನ್ನು ಸರ್ವರೂ ಸುಲಭವಾಗಿ ಗ್ರಹಿಸಬಹುದಾಗಿತ್ತು. ಅಥೆನ್ಸಿನ ಜನತೆಯೇ ಡೀಮಸ್. ವಿಧೇಯ ಸೇವಕರು ನೀಕಿಯಸ್, ಡಿಮೀಟ್ರಿಯಸ್ ಎಂಬ ದಂಡಾಧೀಶರು. ಪ್ಯಾಫ್ಲಗೋನಿಯದ ದಗಾಕೋರನೇ ದುಷ್ಟನೂ ದಬ್ಬಾಳಿಕೆಯವನೂ ಆದ ಮುಖಂಡ ಕ್ಲಿಯಾನ್. ಪ್ರ.ಶ.ಪೂ 426ರಲ್ಲಿ ಕ್ಲಿಯಾನ್ ವನ್ನು ಹೆಸರಿಟ್ಟು ಅವಹೇಳನಗೈ ದು, ಅವನ ಸೇಡಿಗೆ ಪಕ್ಕಾಗಿ, ಸಂಕಟಪಟಿದ್ದ , ಯುವಕ ಅರಿಸ್ಟೋಫನೀಸ್. ಆಕಸ್ಮಿಕ ವಿದ್ಯಮಾನಗಳಿಂದ ಕ್ಲಿಯಾನ್ ದರ್ಪ ಮೇಲಕ್ಕೇರಿತು. ವ್ಯಕ್ತಿಗಳನ್ನು ನಿರ್ದೇಶಿಸಿ ನಕಲಿ ಮಾಡಕೂಡದೆಂಬ ಕಾನೂವನ್ನು ಪ್ರಾಯಶಃ ಜಾರಿಗೆ ತಂದ. ಆದ್ದರಿಂದ 424ರಲ್ಲಿ ಅರಿಸ್ಟೋಫನೀಸ್ ಕಪಟೋಪಾಯವನ್ನು ಹಿಡಿಯಬೇಕಾಯಿತು. ರಕ್ಷಕ ವೀರರಲ್ಲಿ ಯಾರ ಹೆಸರನ್ನೂ ಕವಿ ಪ್ರತ್ಯಕ್ಷವಾಗಿ ಉಚ್ಚರಿಸಿಲ್ಲ. ಆದರೆ ಪ್ಯಾಫ್ಲಗೋನಿಯದ ಕೊಂಡಾಳೇ ಕ್ಲಿಯಾನ್ ಎಂಬುದು ಅರೆಬುದ್ಧಿಯ ನೋಟಕರಿಗೂ ತಕ್ಷಣ ಅರ್ಥವಾಗುತ್ತಿತ್ತು. ಪ್ಯಾಪ್ಲಸ್ ಎಂದರೆ ನೊರೆ. ಭಾಷಣ ಮಾಡುವಾಗ ಕ್ಲಿಯಾನ್‍ನ ತುಟಿಗಳಿಂದ ನೊರೆ ಉಕ್ಕುತ್ತಿತ್ತು. ಆ ಪಾತ್ರವನ್ನು ವಹಿಸಿಕೊಳಲು ಯಾವ ನಟನೂ ಮುಂದಕ್ಕೆ ಬರಲಿಲ್ಲವಂತೆ, ಅರಿಸ್ಟೋಫನೀಸ್‍ನೇ ಅದನ್ನುಕೈಗೊಳ್ಳಬೇಕಾಯಿತು. ಅಷ್ಟಕ್ಕೆ ಮುಗಿಯಲಿಲ್ಲ ತಡೆಗಳ ಕಥೆ. ಕ್ಲಿಯಾನ್‍ನ ವಿಕಟಾನುಕರಣದ ಮೊಗವಾಡ ಅವಶ್ಯಕವಾಗಿತ್ತು. ಅದನ್ನು ತಯಾರಿಸಿ ಕೊಡುವ ಕುಶಲಕೆಲಸಗಾರ ಎಲ್ಲಿಂದ ಬರಬೇಕು? ಆದರೂ ಕವಿ ಛಲವನ್ನು ಬಿಡಲಿಲ್ಲ. ಆದಿಯಲ್ಲಿ ನಟರು ಬಳಸಿಕೊಳ್ಳುತ್ತಿದ್ದ ವೇಷದ್ರವ್ಯವನ್ನು ನೆನಪಿಗೆ ತಂದುಕೊಂಡು ತನ್ನ ಮುಖಕ್ಕೆ ಹೆಂಡದ ಗಷ್ಟನ್ನು ಸವರಿಕೊಂಡು ಅನುಕಾರ್ಯನಾದನಂತೆ, ಕೆಟ್ಟ ಧೈರ್ಯಕ್ಕೆ ಇದೊಂದು ಉತ್ತಮ ನಿದರ್ಶನ.

ಕಲಾದೃಷ್ಟಿಯಿಂದ ಕಳಪೆಯೂ ಸಪ್ಪೆಯೂ ಆಗಿರುವ ಮೋಡಗಳು ಕವಿಯ ನಾಟಕಚಕ್ರ ದಲ್ಲಿ ಅತ್ಯಂತ ಪ್ರಸಿದ್ಧವಾದದ್ದು, ಬಹಳ ಪರಿಚಿತವಾದದ್ದು. ಅದರಲ್ಲಿ ಅಪಹಾಸ್ಯಕ್ಕೆ ಪಶುವಾಗಿರುವಾತನಿಗೆ ಸಾಕ್ರಟೀಸ್ ಎಂದು ನಾಮಧೇಯ. ಚಾರಿತ್ರಿಕ ಮಹಾವ್ಯಕ್ತಿ ಸಾಕ್ರಟೀಸನ ವ್ಯಂಗ್ಯಚಿತ್ತವಲ್ಲ ಅದು. ನಿರ್ಬಂಧವೇನನ್ನೂ ಲೆಕ್ಕಿಸದ ಆವೇಶ ಕಲ್ಪನೆಯ ನಿರ್ಮಾಣವಷ್ಟೇ. ಅಷ್ಟೇಕೆ, ನಾಟಕ ಜರುಗುತ್ತಿದ್ದಾಗ ತತ್ತ್ವಜ್ಞ ಸಾಕ್ರಟೀಸ್ ಪ್ರೇಕ್ಷಕನಾಗಿದ್ದ, ಮಗ್ಗುಲಿನವರಿಗಿಂತ ಹೆಚ್ಚು ಗಟ್ಟಿಯಾಗಿ ನಗುತ್ತಿದ್ದ. ನಾಟಕದ ಕಥಾವಸ್ತು ಹೀಗಿದೆ: ವಯಸ್ಕ ರೈತ ಸ್ರ್ಟೆಪಿಯಡೀಸ್‍ನು ಹೆಂಡತಿಯ ಷೋಕಿಯಿಂದಲೂ ಮಗನ ಜೂಜುಕೋರತನದಿಂದಲೂ ಕೈ ಬರಿದುಮಾಡಿ ಕೊಂಡು ಋಣಭಾರದಿಂದ ಬಾಗಿ ತೊಳಲುತ್ತಿದ್ದಾನೆ. ಸಾಲಗಾರವನ್ನು ವಂಚಿಸುವ ತಂತ್ರ ಬೇಕಾಗಿದೆ ಅವನಿಗೆ. ಸಾಕ್ರಟೀಸನೆಂಬ ಉಪಾಧ್ಯಾಯ ತಪ್ವನ್ನು ಸರಿಯೆಂದು ಸಮರ್ಥಿಸಬಲ್ಲ ನವ್ಯ ನೈಪುಣ್ಯವನ್ನು ಬೋಧಿಸುತ್ತಿರುವ ಸುದ್ದಿ ತಾಕುತ್ತದೆ. ಆ ವಿದ್ಯೆಯನ್ನು ಕಲಿತುಕೊಂಡು ಬಾ ಎಂದು ಮಗ ಫೀಡಿಪ್ಪಿಡೀಸನಿಗೆ ಹೇಳುತ್ತಾನೆ. ಆತ ಒಪ್ಪವುದಿಲ್ಲ. ಮುದುಕ ತಾನೇ ವಿದ್ಯಾರ್ಥಿಯಾಗುತ್ತಾನೆ. ಸಾಕ್ರಟೀಸನ ಫಂಟಿಸ್ಟೀರಿಆನ್ ಶಾಲೆಯಲ್ಲಿ. ಗುಡುಗು ಮಳೆಗಳನ್ನು ಕರೆಯುವ ಮೋಡಗಳೇ ದೇವರು ಜ್ಯೂಸ್ ಅಲ್ಲ ಎಂಬುದೇ ಪ್ರಥಮಪಾಠ. ಮುಂದಣ ಪಾಠಗಳು ಇನ್ನೂ ಜಟಿಲ, ಶ್ರಮಸಾಧ್ಯ. ಸ್ಟ್ರೆಪ್ಸಿಯಡೀಸನ ಚಿತ್ತವಲ್ಲ ಕಡದ ಕಡೆ; ಬೋಧನೆಯನ್ನು ಅದೆಂತು ಒಳಕ್ಕೆ ತೆಗೆದುಕೊಂಡೀತು? ಫೀಡಿಪ್ಪಿಡೀಸ್ ಅವನ ಜಾಗಕ್ಕೆ ಬರಲೇಬೇಕಾಗುತ್ತದೆ. ಗುರು ಸಾಕ್ರಟೀಸ್ ಅವವನ್ನು ನ್ಯಾಯ ಅನ್ಯಾಯಗಳ ಹತ್ತಿರಕ್ಕೆ ಕಳಿಸುತ್ತಾನೆ. ವಿವಾದ ನಡೆದು ಅನ್ಯಾಯ ಗೆಲ್ಲುತ್ತದೆ. ಪ್ರಬುದ್ಧನಾದ ಫೀಡಿಪ್ಪಿಡೀಸ್ ಮನೆಗೆ ಹಿಂತಿರುಗಿ, ಹಣ ಕೊಟ್ಟಿದ್ದವರನ್ನು ತಬ್ಬಿಬ್ಬು ಮಾಡಿ ಬರಿಗೈಯಲ್ಲಿ ಹೋಗುವಂತೆ ವ್ಯವಸ್ಥೆಗೊಳಿಸುತ್ತಾನೆ ಮತ್ತು ಅದೇ ಜಾಣ್ಮೆಯನ್ನು ಉಪಯೋಗಿಸಿಕೊಂಡು ತಂದೆ ಏಟು ಕೊಡುತ್ತಾನೆ. ಕಾರ್ಯದಲ್ಲಿ ತಂದೆಗೆ ಉತಮ ನೆರವು ನೀಡುತ್ತಾನೆ. ನವ್ಯ ವಿದ್ಯೆಯೆಂದರೆ ಸ್ರೆಪಿಯಡೀಸನಿಗೆ ಈಗ ಸೇರುವುದಿಲ್ಲ; ರೋಷದಿಂದ ಉನ್ಮತ್ತನಾಗಿ ಸಾಕ್ರಟೀಸನ ವಿದ್ಯಾಲಯಕ್ಕೆ ಬೆಂಕಿಯಿಡುವ ನಿರ್ಧಾರದಿಂದ ಅದರತ್ತ ಸರಿಯುತ್ತಾನೆ. ಈ ರೂಪಕವೇ ತನ್ನ ಕೃತಿಗಳಲ್ಲಿ ಅತ್ಯುತ್ತಮವಾದುದೆಂಬ ನೆಚ್ಚಿಕೆ ಕವಿಗಿದ್ದಂತೆ ತೋರುತ್ತದೆ.

ಕಣಜಗಳು (ದಿ ವಾಸ್ಪ್‍ಸ್) ಎಂಬ ನಾಟಕದಲ್ಲಿ ನ್ಯಾಯದರ್ಶಿಗಳ (ಜ್ಯೂರಿ) ನೇಮಕವನ್ನು ಹಳಿಯಲಾಗಿದೆ. ಅದರಲ್ಲೂತಂದೆ ಮಕ್ಕಳ ವಿರುದ್ಧ ನಡತೆಯ ಹೋರಾಟವೇ ಅದರ ಸಾರ ವಿಷಯ.

ಕಲ್ಪನಾವೈಭವ ಒಡೆದುಮೂಡಿರುವುದು ಶಾಂತಿ (ದಿ ಪೀಸ್) ಎಂಬ ರೂಪಕದಲ್ಲಿ, ಅಲ್ಲದೆ ಅದರಲ್ಲಿನೀಕಿಯಸನ ನೇತೃತ್ವದಲ್ಲಿ ಇನ್ನೇನು ಆಗಲಿರುವ ಅಥೆನ್ಸ್ ಸ್ಟಾರ್ಟಗಳ ಹಂಗಾಮಿ ಒಡಂಬಡಿಕೆಯ ಮುಂಗಾಣ್ಕೆ ಆಶ್ಚರ್ಯಕರವಾಗಿ ಕಾಣಬಂದಿದೆ. ಅಥೆನ್ಸಿನ ದ್ರಾಕ್ಷಿತೋಟಗಾರ ಟ್ರಿಗಾಯಿಅಸ್‍ಗೂ ಅವನ ಮನೆಯವರಿಗೂ ಅನ್ನಾಭಾವ ತಟ್ಟಿದೆ. ರೆಕ್ಕೆಯ ತೇಜಿ ಪೇಗಾಸಸ್ವನ್ನು ಹತ್ತಿ ಆಕಾಶಕ್ಕೇರಿದ ಪುರಾಣವೀರ ಬೆಲರಫಾನನ್ನು ತಾನೇಕೆ ಹಿಂಬಾಲಿಸಬಾರದು ಎಂದು ನಾಯಕ ಆಲೋಚಿಸುತ್ತಾನೆ. ಕುದುರೆಯ ಬದಲು ಅವನಿಗೊಂದು ದೈತ್ಯಾಕಾರದ ಜೀರುಂಡೆ ದೊರಕುತ್ತದೆ. ಅದರ ಮೇಲೆ ಕುಳಿತು ಎಟ್ನ ಪರ್ವತದ ಶಿಖರದಿಂದ ಕುಪ್ಪಳಿಸಿ, ಹಾರಿ ಏರಿ, ಒಲಿಂಪಸ್ ಸ್ವರ್ಗವನ್ನು ತಲುಪುತ್ತಾನೆ ಆ ಲೋಕ ಶೂನ್ಯವಾಗಿದೆ; ಬಾಗಿಲಬಂಟ ಹರ್ಮಿಸ್, ಆಡಳಿತಗಾರ ಯುದ್ಧದೇವ ಪಾಲಿಮಸ್, ಇಬ್ಬರ ಹೊರತು.ಮಿಕ್ಕ ದೂತರುಗಳೆಲ್ಲರೂ ಸುಮ್ಮನೆ ಕಚ್ಚಾಡುತ್ತಿರುವ ಗ್ರೀಕರ ಮೇಲಣ ಜುಗುಪ್ಸೆಯಿಂದ ಒಲಿಂಪಸ್ಸನ್ನು ಪರಿತ್ಯಜಿಸಿ ಎಲ್ಲಿಗೋ ಹೊರಟುಹೋಗಿದ್ದಾರೆ. ಶಾಂತಿಯನ್ನು ಕೂಪದ ತಟ್ಟತಳದಲ್ಲಿ ಹುದುಗಿಸಿದ್ದಾನೆ ಸಂಗರ ದೇವ. ಸಮಸ್ತ ಗ್ರೀಕ್ ರಾಷ್ಟ್ರಗಳನ್ನೂ ಒರಳಿನಲ್ಲಿ ಕುಟ್ಟಿ ಪುಡಿಮಾಡುವುದೇ ಆ ಕ್ರೂರಿಯ ಇಚ್ಛೆ. ಎಂದರೆ, ಒರಳಿನೊಳಕ್ಕೆ ಈರುಳ್ಳಿ (ಮೆಗಾರ), ಲೀಕ್‍ಗಡ್ಡೆ (ಪ್ರಾಸಿಯ), ಚೀಸ್(ಸಿಸಿಲಿ), ಜೇನುತುಪ್ಪ (ಅಥೆನ್ಸ್)ಗಳನ್ನು ಸುರಿದಿದ್ದಾನೆ. ನೇರ್ಪಾಗಿ ಜಜ್ಜುವ ಎರಡು ಒನಕೆಗಳಿಗಾಗಿ ಅರಸುತ್ತ ನಡೆಯುತ್ತಾನೆ, ದೂರ. ಅದೇ ಸೂಕ್ತ ಗಳಿಗೆಯೆಂದು ಬಗೆದು, ಟ್ರಿಗಾಯಿಅಸ್ ಗ್ರೀಸಿನಿಂದ ರೈತರನ್ನು ಬೇಗ ಕರೆಸಿಕೊಳ್ಳುತ್ತಾನೆ. ಹರ್ಮಿಸನ ಕೈ ಬೆಚ್ಚಗೆ ಮಾಡಿ ಅವವನ್ನು ಒಲಿಸಿಕೊಳ್ಳುತ್ತಾರೆ. ಎಲ್ಲರ ಮೆಹನತ್ತಿನ ಫಲವಾಗಿ ಬಾವಿಯಿಂದ ಮೇಲಕ್ಕೆದ್ದು ಬರುತ್ತಾಳೆ ಶಾಂತಿ. ಸ್ವಲ್ಪವೂ ವಿಳಂಬವಿಲ್ಲದೆ ಅವಳೊಂದಿಗೆ ಎಲ್ಲರೂ ಭೂಮಿಗೆ ಇಳಿದುಬಿಡುತ್ತಾರೆ. ಗ್ರೀಸಿನಲ್ಲೆಲ್ಲ ಮಹದಾನಂದ. ಟ್ರಿಗಾಯಿಅಸ್‍ಗೂ ಶಾಂತಿಗೂ ವಿವಾಹಕ್ಕಾಗಿ ಸಿದ್ಧತೆಗಳ ಸಂಭ್ರಮವೇ ಸಂಭ್ರಮ.

ಲೂಸಿಸ್ಟ್ರಾಟಿ ರೂಪಕದಲ್ಲಿ (ಲೂಸಿಸ್ಟ್ರಾಟ=ದಳ ವಿಸರ್ಜಕ) ಅಥೆನ್ಸಿನ ಹಠಮಾರಿತನ, ಕಾಳಗಾಪೇಕ್ಷೆಗಳಿಂದ ತನಗಾದ ಅಗಾಧ ಹೇವರಿಕೆಯನ್ನು ಕವಿ ಸುವ್ಯಕ್ತಗೊಳಿಸಿದ್ದಾನೆ. ಏನಾದರೂ ಒಂದು ಮನುಷ್ಯಾತೀತ ವೈಪರೀತ್ಯ ಜರುಗಿದಲ್ಲದೆ ತನ್ನ ನಾಡಿಗೆ ಬುದ್ಧಿ ಬರುವುದಿಲ್ಲವೆಂದು ಅವನ ಮತ. ನಾಟಕದಲ್ಲಿ ಜಗಳಗಂಟಿ ಪುರುಷಜಾತಿಗೆ ವಿವೇಕ ಬೋಧಿಸುವ ಹೊಣೆಗಾರಿಕೆವನ್ನು ತನ್ನ ಕೈಗೆ ತೆಗೆದುಕೊಟ್ಟುತ್ತದೆ, ಸ್ತ್ರೀಜಾತಿ. ಲೂಸಿಸ್ಟ್ರಾಟ ಮಹಿಳೆಯರ ಮುಖ್ಯಸ್ಥೆ. ಸ್ಟಾರ್ಟದಿಂದ ಲ್ಯಾಂಪಿತೊವನ್ನು ಕರೆಸಿಕೊಳ್ಳುತ್ತಾಳೆ. ಇತರ ಶತ್ರುರಾಜ್ಯಗಳಿಂದಲೂ ಅವಳ ಆಹ್ವಾನದಂತೆ ಪತಿನಿಧಿಗಳು ಬಂದು ಗುಂಪಾಗುತ್ತಾರೆ. ಶಯನಾಗಾರಗಳಿಂದ ತಮ್ಮ ತಮ್ಮ ಗಂಡಂದಿವನ್ನು ಹೊರದೂಡುವುದೇ ಅವರ ಸಂಗ್ರಾಮಭೇರಿ. ಆಮೇಲೆ ಗಂಡಸರೆಲ್ಲ ಎಲ್ಲೊ ದಣಿದು ನಿದ್ದೆಗೈಯ್ಯುತಿರುವಾಗ ಹೆಂಗಸರು ಪಟ್ಟಣದ ದುರ್ಗವನ್ನು ಸ್ವಾದೀನಪಡಿಸಿಕೊಳುತ್ತಾರೆ. ಅದನ್ನುಕಸಿದುಕೊಳ್ಳುವ ಪ್ರಯತ್ನದಲ್ಲಿ ಪುನಃ ಪುನಃ ಸೋಲಾಗುತ್ತದೆ, ಪುರುಷರಿಗೆ. ಯಾವ ಪ್ರಲೋಭನೆಗೂ ಸಿಕ್ಕವುದಿಲ್ಲ, ಗಟಿಮನಸ್ಸಿನ ಹೆಂಗಸರು. ಆಗ ಕದನವಿರಾಮದ ಘೋಷಣೆಯೊಡನೆ ದೂತ ಆಗಮಿಸುತ್ತಾನೆ. ಸ್ಪಾರ್ಟದಿಂದ, ಲೂಸಿಸ್ಟ್ರಾಟಳ ಸಮಾಧಾನದ ಸಲಹೆ ಸರ್ವರಿಗೂ ಒಪ್ಪಾಗುತ್ತದೆ, ಭರ್ತಭಾರ್ಯೆಯರು ಜೋಡಿ ಜೋಡಿಯಾಗಿ ಮೆರವಣಿಗೆ ತೆರಳುತ್ತಾರೆ. ಉಲ್ಲಾಸಪೂರಿತರಾಗಿ.

ಅದೇ 411ರಲ್ಲಿ ಬಂದ (ಥೆಸ್ಮೊಫರಿಯ ವ್ರತದ ಹೆಣ್ಣುಗಳು) ಎಂಬ ನಾಟಕದಲ್ಲೂ ಕಾರುಬಾರು ಹೆಂಗಸರದ್ದೇ. ಯೂರಿಪಿಡೀಸ್ ಹೆಂಗಸರನ್ನು ಹೀನಾ ಮಾನವಾಗಿ ಬೈದು ಲಜ್ಜೆಗೆ ದಬ್ಬಿದ್ದಾನೆಂದು ಅವನ ಮೇಲೆ ಅವರಿಗೆಲ್ಲ ಕೆಂಡಗೋಪ. ಯಾವ ರೀತಿ ಸೇಡು ತೀರಿಸಿಕೊಳ್ಳಬೇಕೆಂಬುವನ್ನು ಕಂಡುಹಿಡಿಯುವುದಕ್ಕೆ ಹಬ್ಬದ ನೆಪದಲ್ಲಿ ಗುಪ್ತ ಸಭೆ ಸೇರುತ್ತದೆ. ಯೂರಿಪಿಡೀಸ್ ನರಸೋಗಿನ ನರಿ. ಮಾವನಿಗೆ ಹೆಣ್ಣುವೇಷ ಹಾಕಿ ಅವವನ್ನು ಕಳಿಸುತ್ತಾನೆ. ರಹಸ್ಯಭೇದನಕ್ಕೆ. ಚಾಣಾಕ್ಷಮಹಿಳೆಯರಿಗೆ ಅವನಾರೆಂದು ಗೊತ್ತಾಗುತ್ತದೆ. ನಿರ್ಭಾಗ್ಯ ವೃದ್ಧನನ್ನು ಬಂಧನದಲ್ಲಿ ಇಡುತ್ತಾರೆ. ಯೂರಿಪಿಡೀಸನ ಗಂಭೀರ ನಾಟಕವೆಲ್ಲ ಅರಿಸ್ಟೋಫನೀಸ್ ಅಂಗೈ ಮೇಲಿದ್ದದ್ದು ಪ್ರಮಾಣವಾಗುತ್ತದೆ. ಈ ನಾಟಕದಲ್ಲಿ!

ಹಳೆಯ ಬಗೆಯ ವಿನೋದ ನಾಟಕದಲ್ಲಿ ಎಂಥ ಅಳ್ಳಯರಾಮ ವಿಕಟತ್ವ ಕುಣಿದಾಡುತ್ತಿ ದ್ದರೂ ಅದು ಎಷ್ಟು ಎತ್ತರಕ್ಕೆ ಹತ್ತಬಹುದೆಂಬುವನ್ನು ಸಾರುತ್ತದೆ.ಹಕ್ಕಿಗಳು ದಿ ಬರ್ಡ್ಸ್ ಎಂಬ ಕೃತಿ. ಅದೇ ಕವಿಯ ಶ್ರೇಷ್ಠತಮಸೃಷ್ಟಿ. ಅದರಲ್ಲಿವರ್ಣನೆಗೊಂಡಿರುವ ಮೇಘಕೋಗಿಲೆ ಯೂರು ನೆಫೆಲೊಕೊಸೈಝಿಯ ಕವಿಯ ಸ್ವಪ್ನದ ಆದರ್ಶರಾಜ್ಯ. ಪೀತಿಟಾಯರಸ್ ಮತ್ತು ಯುಎಲ್‍ಪಿಡೀಸ್ ಇಬ್ಬರಿಗೂ ಅಥೆನ್ಸಿನ ಬಾಳು ಅತ್ಯಂತ ದುಸ್ಸಹವಾಗಿದೆ. ಪುರಾತನ ಯುಗದಲ್ಲಿ ಥ್ರೇಸಿನ ದೊರೆಯಾದ ಟೇರಿಅಸ್ ಅಥೆನ್ಸಿನ ರಾಜಕುಮಾರಿ ಪ್ರೋಕ್ನಿಯನ್ನು ವರಿಸಿ, ಕಾರಣಾಂತರದಿಂದ ಹೂಪೊ ಹಕ್ಕಿಯಾಗಿ ಪರಿವರ್ತನಗೂಂಡು ಉಪಾಖ್ಯಾನ ಅವರ ಜ್ಞಾಪಕಕ್ಕೆ ಬರುತ್ತದೆ. ಆ ಪಕ್ಷಿಯ ಬಳಿಗೆ ನಡೆದು, ತಮ್ಮ ವಾಸಕ್ಕೆ ಯಾವ ಪ್ರದೇಶ ಸಲ್ಲಬಹುದೆಂದು ಕೇಳುತ್ತಾರೆ. ಟೇರಿಅಸ್ ನಿರ್ದೇಶಿಸುವ ಯಾವ ಜಾಗವೂ ಅವರಿಗೆ ಸರಿತೋರುವುದಿಲ್ಲ. ಆಗೊಂದು ಸ್ಫೂರ್ತಿ ಚಿಮ್ಮುತ್ತದೆ, ಪೀತಿಟಾಯರಸ್ಸನ ಆಂತರ್ಯದಿಂದ. ಖಗಪ್ರಪಂಚ ಒಟ್ಟುಗೂಡಿ, ನೀಳ್ದುನಿಂದ ಭೀತಿಗಳಿಂದ ದುರ್ಭೇದ್ಯವಾದ ನಗರವೊಂದನ್ನು ವಾಯುಮಂಡಲದಲ್ಲಿ ಏತಕ್ಕೆ ಕಟ್ಟಿ ಎಬ್ಬಿ¸ಬಾರದು, ಹಾಗೆ ಮಾಡಿದರೆ ಮೇಲಣ ದೇವತೆಗಳೂ ಕೆಳಗಣ ಮನುಷ್ಯರೂ ವಿಹಗಸಂಕುಲಕ್ಕೆ ತಲೆಬಾಗಲೇ ಬೇಕಾಗುತ್ತದೆ. ಬಿತ್ತಿದ ಬೀಜಗಳನ್ನು ಭಕ್ಷಿಸತೊಡಗಿದರೆ ಭೂಮಿಯವರು ಹತೋಟಿಗೆ ಸಿಕ್ಕುತ್ತಾರೆ. ಅವರು ಹರಕೆ ಹೊತ್ತು ಅರ್ಪಿಸುವ ಬಲಿಗಳ ಧೂಮವನ್ನು ತಡೆಗಟ್ಟಿಬಿಟ್ಟರೆ ದೇವತೆಗಳಿಗೆ ಕ್ಷಾಮ. ಅವರೂ ಮಣಿಯಬೇಕಾಗುತ್ತದೆ. ಹಕ್ಕಿಗಳಿಗೆ. ಪಕ್ಷಿಗಳ ನೃತ್ಯಮೇಳ ಯುಕ್ತಿಯುಕ್ತವಾದ ಆ ಉದ್ಯಮವನ್ನು ನಿರಾಕರಿಸುತ್ತದೆ. ಪ್ರಾರಂಭದಲ್ಲಿ, ಕೊನೆಗೆ ತನ್ನ ಸಮ್ಮತಿಯನ್ನು ಕೊಡುತ್ತದೆ. ಪೀತಿಟಾಯರಸ್, ಯೂರಿಟಿಡೀಸರೇ ವಾಸ್ತುಶಿಲ್ಪಿಗಳು. ಬಗಲಿನಲ್ಲಿ ಅವರಿಗೂ ಪಕ್ಷ ಅಂಕುರಿಸಿ ಹೊಮ್ಮಿ ಅವರ ಮೇಸ್ತ್ರಿ ಕಾಯ ಸಂಗಮವಾಗುತ್ತದೆ. ಕ್ಷಿಪ್ರದಲ್ಲಿ ಎದ್ದು ನಿಂತ ನಗರ ನಭಕ್ಕೆ ಭೂಷಣವಾಗುತ್ತದೆ. ಕೂಡಲೇ ಅತಿಥಿಗಳು ಸಾಲಾಗಿ ದಯಮಾಡಿಸುತ್ತಾರೆ. ಮೊದಲು ಬಂದ ಕವಿಗೆ ಅವನ ಪ್ರಶಂಸಾಪ್ರಗಾಥಕ್ಕಾಗಿ ಅಂಗಿ, ಒಳ ಅಂಗಿಯ ಉಡುಗೊರೆ ಲಭ್ಯವಾಗುತ್ತದೆ. ಆಮೇಲಣ ಶಕುನಗಾರ, ನಕ್ಷತ್ರವಿಜ್ಞಾನಿ, ಅಥೆನ್ಸಿನ ನಿಯೋಗಿ-ಮೂವರನ್ನೂ ಛೀಮಾರಿಮಾಡಿ ಬಡಿತದ ಬೆದರಿಕೆ ಹಾಕಿ ಓಡಿಸುತ್ತಾನೆ. ಪೀತಿಟಾಯರಸ್. ಹೊಸ ಶಾಸನದ ಪ್ರತಿಗಳನ್ನು ಮಾರುವ ಬೀದಿವ್ಯಾಪಾರಿ ಕಾಲಿಡುತ್ತಾನೆ. ಅವನಿಗೂ ಆಗುತದೆ ಅದೇ ಶಾಸ್ತಿ. ಅನಂತರ ಪ್ಯಾರಬಸಿಸ್, ಆ್ಯರಿಸ್ಟಾಫನೀಸನ ಗಂಭೀರಜ್ಞಾನಕ್ಕೂ ವಿಭಾವನಾವೈವಿಧ್ಯ ಕ್ಕೂ ರ¸ಪುಷ್ಟ ಕವಿತ್ವಕ್ಕೂ ಅದೊಂದು ಸಾಕ್ಷ್ಯ ಸಾಕು.

ಮೇದಿನಿಗೆ ಇಳಿಯಬಂದ ದೇವದೂತಿ ಈರಿಸ್ ಕೋಗಿಲೆಯೂರಿನ ಕಾವಲು ಸಿಪಾಯಿಗಳಿಗೆ ಸೆರೆಸಿಕ್ಕುತ್ತಾಳೆ. ಅವಳ ಹತ್ತಿರ ರಹದಾರಿ ಇಲ್ಲ. ಮುಂದಕ್ಕೆ ಹೋಗಗೊಡದೆ, ಪ್ರಶ್ನೆ ಕೇಳಿ ಆಕೆವನ್ನು ತಲ್ಲಣಗೊಳಿಸಿ ಪೀಡಿಸುತ್ತಾನೆ, ಪೀತಿಟಾಯರಸ್. ಅಳುತ್ತ ಅವಳು ಹಿಂತಿರುಗುತ್ತಾಳೆ ತಂದೆ ಜೂಸನ ಬಳಿಗೆ. ಆಮೇಲೆ ದೂತನೊಬ್ಬ ಬಂದು, ಭೂಮಂಡಲವನ್ನ ಲ್ಲ ಮುಸುಕಿರುವ ಹಕ್ಕಿ ಹುಚ್ಚನ್ನು ಕಣ್ಣೆದುರಿಗೆ ಇಟ್ಟಂತೆ ಬಣ್ಣ ಬಣ್ಣದ ನುಡಿಗಳಿಂದ ಬಣ್ಣಿಸುತ್ತಾನೆ. ಹಕ್ಕಿಯಂತೆ ನಡಿಗೆ, ಹಕ್ಕಿಯಂತೆ ಚಿಲಿಪಿಲಿ, ಹಕ್ಕಿಯಂತೆ ಊಟ, ಹಕ್ಕಿಯ ಹೆಸರನ್ನಿಟ್ಟುಕೊಳುವುದೇ ಹೆಮ್ಮೆ ಮಂದಿಗೆಲ್ಲ. ಕೋಗಿಲೆಯೂರಿನಲ್ಲಿ ನೆಲಸುವುದಕ್ಕೆ ಅನೇಕರು ಬಂದುಬಿಡಬಹುದೆಂದು ಅಲ್ಲಿಗೆ ಹಿಂದಿರುಗಿಸುತ್ತಾನೆ. ಅವರನ್ನು ಪೀತಿಟಾಯರಸ್.

ಭಾರಿ ಛತ್ರಿಯ ಕೆಳಗೆ ಅವಿತುಕೊಂಡು ಹೆಜ್ಜೆಯಿಡುತ್ತ ಆಗಮಿಸುತ್ತಾನೆ, ಹಳೆಯ ಮನುಷ್ಯಮಿತ್ರ ಪ್ರಾಮಿತಿಅಸ್. ದೇವಲೋಕದಲ್ಲಿ ಪರಿಸ್ಥಿತಿ ತುಂಬ ಹದಗೆಟ್ಟಿದೆಯೆಂದು ವರದಿ ಹೇಳಿ, ಅಲ್ಲಿಂದ ಬರುವ ರಾಯಭಾರಿಗಳೊಂದಿಗೆ ಗಡುಸಾಗಿ ವರ್ತಿಸಿ, ಬಿರುಸು ಷರತ್ತುಗಳನ್ನು ಅವರ ಮೇಲೆ ಹೇರಬೇಕೆಂದು ಉಪದೇಶ ಮಾಡುತ್ತಾನೆ. ಬರುವ ರಾಯಭಾರಿಗಳಾರು? ಮತಿವಂತ ಪಾಸೀಡನ್, ಹೊಟೆಬಾಕ ಹೆರಾಕ್ಲೀಸ್, ಪೆದ್ದ ಟ್ರೆಬಲಸ್. ಪೆದ್ದನಿಗೆ ಏನೂ ಅರ್ಥವಾಗುವುದಿಲ್ಲ. ಅವನ ಮಾತು ಯಾರಿಗೂ ಅರ್ಥವಾಗುವುದಿಲ್ಲ; ಹೆರಾಕ್ಲೀಸನಿಗೆ ತಿಂಡಿತೀರ್ಥದ ಯೋಚನೆಯೇ ಯೋಚನೆ. ಪೀತಿಟಾಯರಸ್ ಹೇಳುವುದಕ್ಕೆಲ್ಲ ಹೂಗುಟ್ಟಿಬಿಡುತ್ತಾರೆ, ಅವರು. ಪಾಸೀಡನ್ ಆಗುವುದಿಲ್ಲವೆಂದರೆ ಕೇಳುವರಾರು, ಯತ್ನವಿಲ್ಲದೆ ಅವನೂ ಒಪ್ಪಿಕೊಳ್ಳುತ್ತಾನೆ. ಪೃಥ್ವಿಯ ಅರಸೊತ್ತಿಗೆ ಬಹಳ ಹಿಂದೆ ಇದ್ದಂತೆ ಪಕ್ಷಿಗಳಿಗೇ ಮರಳಿ ಬರುತ್ತದೆ; ಜೂಸನ ಮಗಳಾದ ಬ್ಯಾಸಲಿಯ (ಪ್ರಭುತ್ವ) ಪತ್ನಿಯಾಗುತ್ತಾಳೆ, ಮಹಾಪರಾಕ್ರಮಿ ಪೀತಿಟಾಯರಸ್ಸಿಗೆ. ವಿವಾಹದ ಸಿದ್ಧತೆಗಳಿಂದ ನಾಟಕಕ್ಕೆ ಸಮಾಪ್ತಿ. ರಾಜಕೀಯದ ಗೊಂದಲವಿಲ್ಲದ ಶುದ್ಧಸಾಹಿತ್ಯವನ್ನು ಕವಿ ಇಲ್ಲಿ ಒದಗಿಸಿದ್ದಾನೆ.

ರಾಜಕೀಯದ ಸೋಂಕಿಲ್ಲದ ಅರ್ಥಗರ್ಬಿತವಾದ ಕಪ್ಪೆಗಳು (ಫ್ರಾಗ್ಸ್) ನಾಟಕದಲ್ಲಿ ಯೂರಿಪಿಡೀಸನ ಮರಣದಿಂದ ಗಂಭೀರನಾಟಕ ಕುಗ್ಗಿ ಕುಂಟಾಗಿದೆ. ಕಲಾಭಿಮಾನದೇವತೆ ಡಯೋನಿಸಸ್ಸಿಗೆ ದುಗುಡ. ನರಕಕ್ಕಿಳಿದು ಪ್ಲೂಟೋನನ್ನು ಒಲಿಸಿಕೊಂಡು ಯೂರಿಪಿಡೀಸ್ ಮತ್ತೆ ಹುಟ್ಟಿ ಬರುವಂತೆ ಎಸಗಬೇಕೆಂದು ಸಂಕಲಗೂಳುತ್ತಾನೆ. ಹಿಂದೊಮ್ಮೆ ಹಿರಾಕ್ಲೀಸ್ ನರಕಕ್ಕೆ ಇಳಿಯುವ ಸಾಹಸದಲ್ಲಿ ವಿಜಯಿಯಾಗಿದ್ದ. ಅವನಿಂದ ಸಿಂಹದ ಚರ್ಮ ಮತ್ತು ದೊಣ್ಣೆವನ್ನು ಎರವಲು ಪಡೆದು ದಾಸ ಗ್ಸಾಂತಿಯಸ್ಸೊಡನೆ ಇಳಿಯುತ್ತಾನೆ, ಅಧೋಲೋಕಕ್ಕೆ. ಅಲ್ಲಿ ಈಸ್ಕಿಲಸ್ಸಿಗೂ ಯೂರಿಪಿಡೀಸಿಗೂ ಜಗಳ. ಇಬ್ಬರ ಪದ್ಯ ಪಂಕ್ತಿಗಳನ್ನು ಎದುರುಬದುರು ತಟ್ಟೆಯಲ್ಲಿಟ್ಟು ತೂಗುತ್ತಾರೆ. ಈಸ್ಕಿಲಸ್ಸನ ತೂಕ ಪ್ರತಿಯೊಂದು ಬಾರಿಯೂ ಅಧಿಕ. ಕೊನೆಗೆ ಅವನಿಂದಲೇ ಗಂಭೀರನಾಟಕಕ್ಕೆ ಪುನರ್ಜೀವವೆಂದು ನಿಷ್ಚಯಿಸಿ ಅವನನ್ನು ವರದಾನವಾಗಿ ಪಡೆದುಕೊಂಡು ಹಿಂದಿರುಗುತ್ತಾನೆ. ಡಯೋನೀಸಸ್. ಕೈ ಕೈ ಹಿಸುಕಿಕೊಳ್ಳುತ್ತ ಹಲ್ಲು ಕಡಿಯುತ್ತ ಗೊಣಗುಟ್ಟುತ್ತಾನೆ. ಯೂರಿಪಿಡೀಸ್.

ಸೈರಕ್ಯೂಸಿನ ಸರ್ವಾಧಿಕಾರಿ ಅಥೆನ್ಸಿನ ರಾಜಕೀಯ ವೃತ್ತಾಂತವನ್ನು ಅರಿಯಬಯಸಿದ ನಂತೆ. ಉತ್ತರವಾಗಿ ಪ್ಲೇಟೊ ಅವನಿಗೆ ಅರಿಸ್ಟೋಫನೀಸ್‍ನ ರಕ್ಷಕವೀರರು ನಾಟಕವನ್ನು ಓದೆಂದು ಕೊಟ್ಟನಂತೆ! ಓದುಗರಿಗೆ ಕೆಲವು ಶತಮಾನಗಳ ಕಾಲ ಅರಿಸ್ಟೋಪೆನೀಸ್ ಹೋಮರನಿಗೆ ಎರಡನೆಯವನಾಗಿದ್ದ. ಅನಂತರ ಅಂಕೆಗೆಟ್ಟವನೂ ಅಸಂಸ್ಕೃತನೂ ಆಗಿ ತೋರಿಬಂದ. ಹಲವಾರು ಶತಮಾನಗಳ ಕಾಲ, 19ನೆಯ ಶತಮಾನದ ಎರಡನೆಯ ಭಾಗದಿಂದ ವಿನೋದ ನಾಟಕದಲ್ಲಿ ಪ್ರಥಮ ಪೀಠ ಅವನಿಗೆ ಸಲ್ಲತಕ್ಕದ್ದೆಂಬ ಅಭಿಪ್ರಾಯ ಮಾನ್ಯವಾಗುತ್ತದೆ.

ವಿಮರ್ಶಕ[ಸಂಪಾದಿಸಿ]

ಅರಿಸ್ಟೋಪ್ಫೆನೀಸ್‍ವನ್ನು ವಿಮರ್ಶಕನೆಂದು ಕರೆಯಲು ಅನೇಕ ಪಂಡಿತರು ಒಪ್ಪರು. ಆದರೂ ನುರಿತ ವಿಮರ್ಶನ ಮನೋಭಾವ, ಧೀಶಕ್ತಿ, ಕೈಚಳಕಗಳನ್ನು ನಾವು ಅವನಲ್ಲಿ ಕಾಣುತ್ತ್ತೇವೆ. ಪ್ರಾಚೀನ ಗ್ರೀಕ್ ಹರ್ಷನಾಟಕ-ಅದರಲ್ಲೂ ಅದರ ಹಳೆಯ ಪ್ರಭೇದ-ಉದ್ದಕ್ಕೂ ಜೀವನದ ವಿಮರ್ಶೆಯಾಗಿತ್ತು. ಆತನಿಗಂತೂ ತನ್ನ ಪರಿಹಾಸ್ಯದ ಹಿಂದೆ ಇರುತ್ತಿದ್ದ ವಿಮರ್ಶೆಯನ್ನು ಮಂದಿ ಗ್ರಹಿಸಬೇಕೆಂಬುದೇ ಮುಖ್ಯ ಅಭೀಷ್ಟ. ಯೂರಿಪಿಡೀಸ್ ಗಂಭೀರನಾಟಕದ ಮಟ್ಟವನ್ನು ಮೇಲಿನಿಂದ ಕೆಳಕ್ಕಿಳಿಸಿ ಅವನ್ನು ಕೀಳುಮಾಡಿದನಂಬ ನಂಬಿಕೆ ಅರಿಸೋಫನೀಸ್ ಸಮಕಾಲೀನರಲ್ಲಿ ಅನೇಕರಿಗೆ ಧೃಢವಾಗಿತ್ತು. ಆದ್ದರಿಂದ ಆ ಟ್ರ್ಯಾಜಿಕ್ ಕವಿಯನ್ನು ಕಟು ಟೀಕೆಗೆ ಗುರಿ ಮಾಡುವ ಉದ್ಯಮದಲ್ಲಿ ಆತ ಸುಮಾರು ಇಪ್ಪತ್ತು ವರ್ಷ ನಿರತನಾಗಿದ್ದ. ಅವನ ಆಕ್ಷೇಪ ಅಭಿಪ್ರಾಯ ಅಶಯಗಳೆಲ್ಲ ಅವನ ಕಪ್ಪೆಗಳು ಎಂಬ ನಾಟಕದಲ್ಲಿ ಒಡೆದು ಮೂಡಿವೆ. ಯೂರಿಪಿಡೀಸನ ಸಂಶಯ ಪ್ರಮುಖ ಚಿತ್ತವೃತ್ತಿ, ಕುಯುಕ್ತಿ ಕೂಡಿದ ವಾದಚಟ, ಧಾರ್ಷ್ಟ್ಯ, ಅತಿ ಮರುಕದ ವೈಪರೀತ್ಯ, ನವೀನತೆಗೆ ಆತುರ-ಇವ್ಯಾವುದೂ ಸರಿಬೀಳಲಿಲ್ಲ. ಅರಿಸ್ಟೋಫೆನೀಸ್‍ನಿಗೆ, ಯೂರಿಪೀಡಿಸನ ನಾಟಕಗಳಲ್ಲಿ ತಪ್ಪದೆ ಬರುವ ದೀರ್ಘ ಪೀಠಿಕೆಯ ಶುಷ್ಕವರದಿ, ಬೇಸರ ಹಿಡಿಸುವ ಆಖ್ಯಾನ ಸಮುಚ್ಚಯ, ಶಬ್ದಚಮತ್ಕಾರ, ಎರಡರ್ಥದ ಸಂದಿಗ್ಧವಾಕ್ಯ, ಯಂತ್ರದ ಮೂಲಕ ಆಕಾಶದಿಂದ ಭೂಮಿಗೆ ಇಳಿದುಬಂದು ರಾಜಿಮಾಡಿಸಿ ಹೋರಾಟ ನಿಲ್ಲಿಸುವ ದೇವತೆ- ಮುಂತಾದುವುಗಳಿಂದ ಗಂಭೀರನಾಟಕದ ಮಹಿಮೆಯೂ ಬೆಡಗೂ ಕಳೆಗುಂದಿದವೆಂದು ಅರಿಸ್ಟೋಫನೀಸ್‍ನ ಪ್ರದಾನ ದೂಷಣೆ. ಆದ್ದರಿಂದ ಅವನ ಅಭಿಪ್ರಾಯದಂತೆ ಅಥೆನ್ಸಿನ ಯೋಗಕ್ಷೇಮಕ್ಕೆ ಇರುವುದು ಒಂದೇ ಉಪಾಯ; ನೈಜ ಗಂಭೀರನಾಟಕ ಕವಿಯಾದ ಈಸ್ಕಿಲಸ್ಸನನ್ನು ಪುನರುಜ್ಜೀವನಗೊಳಿಸಿ ಅಧೋಲೋಕದಿಂದ ಇಹಲೋಕಕ್ಕೆ ಬರುವಂತೆ ಮಾಡಬೇಕು; ನವ್ಯತೆಯ ಗೀಳು ಎಂಥ ವಿಕಟಾತಿಶಯಕ್ಕೂ ಅಭಾಸಕ್ಕೂ ಕವಿಗಳನ್ನು ಎಳೆಯುತ್ತದೆ ಎಂಬುವನ್ನು ಲವಲವಿಕೆಯಿಂದ ಆತ ದೃಷ್ಟಾಂತಗೈಯುತ್ತಾನೆ. ಈ ಕೃತಿಯಲ್ಲಿ ಗಂಭೀರ ನಾಟಕದ ಅಗ್ರಪೀಠ ತನ್ನದೆ ಎಂದು ರಂಪ ಮಾಡುತ್ತಾನೆ ಯೂರಿಪಿಡೀಸ್. ಉಚ್ಚಪ್ರತಾಪದ ಈಸ್ಕಿಲಸ್ಸನಿಗೆ ಆ ಭಂಡನನ್ನು ಕಂಡು ಕಡುಗೋಪ, ತೀವ್ರ ಜುಗುಪ್ಸೆ, ಯತ್ನವಿಲ್ಲದೆ ಆತನೋಡನೆ ಪಂದ್ಯಕ್ಕೆ ಒಪ್ಪಿಕೊಳ್ಳಬೇಕಾಗುತ್ತದೆ. ನಾಟಕಾಲಯದ ಅಧಿದೇವತೆ ಡಯೊನೀಸನೇ ತೀರ್ಪುಗಾರ. ಸರ್ಧೆಯ ವಿಧಾನ ಅಚ್ಚರಿಯ ಬಗೆಯದು. ತಕ್ಕಡಿಯನ್ನು ಇಡುತ್ತಾರೆ. ಅದರ ಒಂದು ತವೆಯನ್ನು ಕೈಯಿಂದ ಹಿಡಿದುಕೊಂಡು ಈಸ್ಕಿಲಸ್ ತನ್ನೊಂದು ಹೇಳಿಕೆಯನ್ನೂ ಉಚ್ಚರಿಸಬೇಕು.; ಇನ್ನೊಂದು ತವೆಯನ್ನು ಹಿಡಿದುಕೊಂಡು ಯೂರಿಪಿಡೀಸನೂ ಹಾಗೆಯೇ ಮಾಡಬೇಕು. ಯಾರ ಕಡೆ ಪಾತ್ರೆ ಹೆಚ್ಚು ಭಾರದಿಂದ ಕೆಳಕ್ಕೆ ಕುಸಿಯುತ್ತದೋ ಅವನೇ ವಿಜಯಶಾಲಿ ! ಯೂರಿಪಿಡೀಸನಿಗೆ ಸೋಲಿನ ಮೇಲೆ ಸೋಲು. ಹಾಗೂ ಅವನ ಕಾವ್ಯಪಂಕ್ತಿಗಳ ಏಕನಾದವನ್ನು ಪ್ರತ್ಯಕ್ಷ ಕ್ಷಗೊಳಿಸಿ ಅವಹೇಳನ ಗೈಯುತ್ತಾನೆ, ಈಸ್ಕಿಲಸ್. ಹೀಗಾದರೂ ಅರಿಸ್ಟೋಫೆನೀಸ್ ತನ್ನ ಕೈಯಲ್ಲಾಗುವಷ್ಟು ನಿಷ್ಪಕ್ಷಪಾತ ವರ್ತನೆಯನ್ನೇ ಪ್ರಕಟಿಸುತ್ತಾನೆ. ಯೂರಿಪೀಡಿಸನಲ್ಲಿ ಏನೇ ದೋಷವಿರಲಿ, ಅವನ ಕವಿತೆಯ ಮಾಧುರ್ಯಕ್ಕೂ ಹೃದಯಂಗಮತ್ವಕ್ಕೂಎಲ್ಲರೂ ಕಾಣಿಕೆ ನೀಡಬೇಕು. ಅವನ ನಾಟಕಗಳನ್ನೆಲ್ಲ ಕಂಠಪಾಠ ಮಾಡಿಕೊಂಡಿದ್ದ ಅರಿಸ್ಟೋಫೆನೀಸ್! ಅತ್ತ ಕಡೆ, ಈಸ್ಕಿಲಸನ ಮಹಾ ಘನತೆಯ ಶೈಲಿ ಎಷ್ಟೋಸಾರಿ ಬರಿ ವಾಗಾಡಂಬರಕ್ಕೂ ಆಟಾಟೋಪಕ್ಕೂ ಪಕ್ಕಾಗುವುದನ್ನು ಅವನು ಗಮನಿಸಿದ್ದಾನೆ. ಪಾತ್ರವನ್ನು ರಂಗದ ಮೇಲೆ ತಂದು ತುಸುಹೊತ್ತು ಅದು ಮೌನದಿಂದ ನಿಲ್ಲುವಂತೆ ಏರ್ಪಡಿಸುವುದು. ಈಸ್ಕಿಲಸನ ಪ್ರೀತಿಯ ರಚನಾಕ್ರಮ. ಅದು ಪದೇ ಪದೇ ಕಾಣಬಂದು ಅದೇನು ಕೃತ್ರಿಮ ಕಲೋಪಾಯವೋ ಎಂಬ ಶಂಕೆ ಉಂಟಾಗುವ ಸಂಭವವಿದೆಯೆಂಬುವನ್ನು ಅರಿಸ್ಟೋಫನೀಸ್ ಮರೆತಿಲ್ಲ.

ಉತ್ತಮ ವಿಮರ್ಶಕನ ಲಾಂಛನ ಹೀಗೆ ಅರಿಸ್ಟೋಫೆನೀಸ್‍ನ ಹಣೆಯಲ್ಲಿ ಕಂಗೊಳಿಸುತ್ತದೆ. (ಎಸ್.ವಿ.ಆರ್.)