ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರೇಬಿಯ

ವಿಕಿಸೋರ್ಸ್ದಿಂದ

ಅರೇಬಿಯ : ಏಷ್ಯದ ನೈಋತ್ಯ ಭಾಗದಲ್ಲಿ ಕೆಂಪುಸಮುದ್ರ್ರ ಮತ್ತು ಪರ್ಷಿಯನ್ ಕೊಲ್ಲಿಗಳ ಮಧ್ಯ ದಲ್ಲಿರುವ ಪರ್ಯಾಯದ್ವೀಪ. ಉ. ಅ. 12ಡಿಗ್ರಿ ,45' , 34ಡಿಗ್ರಿ 50' ಪೂ. ರೇ. 30ಡಿಗ್ರಿ 30' , 60ಡಿಗ್ರಿ . ವಿಸ್ತೀರ್ಣ ಸು. 25,90,000 ಚಕಿಮೀ. ಜನಸಂಖ್ಯೆ ಸುಮಾರು 15,000,000. ಹೆಚಿನ ಪ್ರದೇಶ ಮರಳುಗಾಡು. ಇಂದು ಈ ಪರ್ಯಾಯ ದ್ವೀಪದಲ್ಲಿ 7 ದೇಶಗಳಿವೆ: ಕುವೈಟ್, ಓಮಾನ್, ಕತಾರ್, ಅರಬ್ ಎಮಿರೆಟಿಸ್ ಯಮನ್ ಅರಬ್ ಗಣರಾಜ್ಯ, ಪೀಪಲ್ಸ್ ಡೆಮಾಕಟಿಕ್ ರಿಪಬಿಕ್ ಆಫ್ ಯಮನ್, ಮತ್ತು ಬಹುನ್. ಸ್ವಲ್ಪಭಾಗ ಜೋರ್ಡಾನ್ ಮತ್ತು ಇರಾಕ್‍ಗಳಲ್ಲಿಯೂ ವಿಸರಿಸಿದೆ. ದಕ್ಷಿಣೋತ್ತರವಾಗಿ ಅರಬಿಸಮುದ್ರದಿಂದ ಜೋರ್ಡಾನ್ ಮತ್ತು ಇರಾಕ್‍ವರೆಗೆ 2,250 ಕಿಮೀ ಉದ್ದವಾಗಿದೆ. ಅಗಲ ಕೆಂಪುಸಮುದ್ರ ಮತ್ತು ಓಮನ್ ಖಾರಿಗಳ ನಡುವೆ 2,000 ಕಿಮೀಗಳು.

ಬಹಳಷ್ಟು ಪ್ರದೇಶದಲ್ಲಿ ಶುಷ್ಕವಾಯುಗುಣವಿದೆ. ಹಗಲಿನ ಉಷ್ಣಾಂಶದ ಗರಿಷ್ಠ ಮಟ್ಟ 600 ಸೆಂ. ರಾತ್ರಿಯ ಕನಿಷ್ಠ ಮಟ್ಟ 1 ರಿಂದ 40 ಸೆಂ. ಮಳೆ ಬಹಳ ವಿರಳ. ಯಾವುದೇ ಸಾರ್ವಕಾಲಿಕ ನದಿ ಮತ್ತು ಸರೋವರಗಳಿಲ್ಲ. ಸಮುದ್ರ್ರ ತೀರಗಳಲ್ಲಿ ಮಾತ್ರ ಸೇ. 90 ರಷ್ಟು ಆರ್ದತೆಯಿರುತ್ತದೆ. ಸಸ್ಯವರ್ಗ ವಿರಳ. ಜುನಿಫರ್ ಮರ ಬೆಳೆಯುತ್ತವೆ. ಪ್ರಮುಖ ಪ್ರಾಣಿಗಳೆಂದರೆ ಆರಿಕ್ಸ್ ಜಿಂಕೆ, ಒಂಟೆ, ಕತ್ತೆಕಿರುಬ, ತೋಳ, ನರಿ, ಹಾವು ಮುಂತಾದವು. ಕೆಲವು ಪ್ರದೇಶಗಳಲ್ಲಿ ಎತ್ತರವಾದ ಪರ್ವತಗಳಿದ್ದು ಮಳೆಯಾಗಲು ಸಹಾಯಕವಾಗಿವೆ. ಇಂಥ ಕೆಲವುಕಡೆ ಬೇಸಾಯ ನಡೆಯುತ್ತದೆ. ಉತ್ತರ ಅರೇಬಿಯದಲ್ಲಿ ಅನೇಕ ಅಲೆಮಾರಿ ಜನಾಂಗಗಳಿದ್ದು ಕುರಿಕಾಯುವ ಉದ್ಯೋಗವನ್ನವಲಂಬಿಸಿವೆ. ಇಲ್ಲಿ ಶ್ರೀಮಂತ ತೈಲನಿಕ್ಷೇಪಗಳಿದ್ದು ಅಮೆರಿಕ ಮತ್ತು ಯುರೋಪಿಯನ್ನರು ಇವುಗಳನ್ನು ಉಪಯೋಗಿಸಿಕೊಂಡಿದ್ದಾರೆ. ಇಲ್ಲಿಯ ಅನೇಕ ಜನಾಂಗಗಳು ಪರಸ್ಪರ ಕಾದಾಡುತ್ತಿದ್ದ ವು. 7ನೆಯ ಶತಮಾನದಲ್ಲಿ ಮಹಮ್ಮದ್ ಪೈಗಂಬರರ ಪೇರಣೆ ಅರಬ್ ಜನಾಂಗಗಳನ್ನೆಲ್ಲ ಒಂದುಗೂಡಿಸಿತು. ಆಡಳಿತಕೇಂದ್ರ್ರ ಮದೀನದಿಂದ ಡಮಾಸ್ಕಸ್‍ಗೆ ಸ್ಥಳಾಂತರ ಹೊಂದಿದಾಗ ಅರೇಬಿಯ ಪುನಃ ತನ್ನ ರಾಜಕೀಯ ಪ್ರಾಮುಖ್ಯ ಕಳೆದುಕೊಂಡಿತು. 1517ರಿಂದ ಆಟೋಮನ್ ಟರ್ಕರಿಂದ ಹೆಸರಿಗೆ ಮಾತ್ರ ಆಳಲಡುತ್ತಿತ್ತು. 18-19ನೆಯ ಶತಮಾನದಲ್ಲಿ ವಹಾಬಿ ಆಂದೋಳನದಿಂದ ಕಿರುಕುಳ ಉಂಟಾಯಿತು. ಒಂದನೆಯ ಮಹಾಯುದ್ಧದ ಕಾಲದಲ್ಲಿ ಟರ್ಕಿಯವರ ಆಡಳಿತ ಕುಸಿದುಬಿತ್ತು. (ಜಿ.ಎಸ್.ಬಿ.)