ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅವತಂಸ

ವಿಕಿಸೋರ್ಸ್ದಿಂದ

ಒಂದು ಕರ್ಣಾಭರಣ ಅವತಂಸವೆಂದರೆ ಕರ್ಣಪುರವೆಂದಾಗುವುದು. ಕಿವಿಯಲ್ಲಿ ಮಾತ್ರ ಧರಿಸುವ ಆಭರಣವಿದು. ಇಲ್ಲಿ ತಾಳೆ ಹೂ, ಕಮಲ, ಕನ್ನೈದಿಲೆ, ಪಾರಿಜಾತ, ಶಿರೀಷ, ಅಶೋಕ ಮೊದಲಾದ ಪುಷ್ಪಗಳ ಬಳಕೆಯಾಗುತ್ತಿತ್ತು. ಅಂದರೆ ಇದು ಹೂವಿನ ತೊಡವು. ಅಗಲಹೂವಾದರೆ ಒಂದೇ ಹೂವನ್ನು ಧರಿಸುತ್ತಿದ್ದರು. ಸಣ್ಣವಾದರೆ ಹೂಗೊಂಚಲನ್ನೇ ಧರಿಸುತ್ತಿದ್ದರು ಪುಷ್ಪಗಳನ್ನು ಧರಿಸುತ್ತಿದ್ದ ರೀತಿಯಲ್ಲೇ ಕಿವಿಯ ತುದಿಯಲ್ಲಿ ದಪ್ಪ ಮುತ್ತುಗಳ ಮೊಗ್ಗನ್ನೂ ಧರಿಸುತ್ತಿದ್ದರು. ಚಿನ್ನದ ಸುರುಳಿಯನ್ನೂ ತಾಳೆಯ ಗರಿಯಂತೆ ಉಪಯೋಗಿಸುತ್ತಿದ್ದರು.