ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅವೆನೇರಿಯಸ್ ರಿಚರ್ಡ್ ಹೆನ್ರಿಕ್ ಲಡ್ವಿಗ್

ವಿಕಿಸೋರ್ಸ್ದಿಂದ

1843-96. ಜರ್ಮನ್ ದಾರ್ಶನಿಕ. ಸೂರಿಕ್‌ನಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಪಕನಾಗಿದ್ದ (1877-96). ಈತ ರಚಿಸಿದ ತತ್ತ್ವಶಾಸ್ತ್ರ ಗ್ರಂಥಗಳಲ್ಲಿ ಎರಡು ಲೋಕವಿಖ್ಯಾತವಾಗಿವೆ. ಮೊದಲನೆಯದು ತತ್ತ್ವಶಾಸ್ತ್ರ ಸೂತ್ರಗಳ ಬಗ್ಗೆಯೂ ಎರಡನೆಯದು ತತ್ತ್ವವಿಮರ್ಶೆಯ ಬಗ್ಗೆಯೂ ಇವೆ. ಎರಡನೆಯ ಗ್ರಂಥದಲ್ಲಿ ಈತ ಪ್ರತಿಪಾದಿಸಿರುವ ತತ್ತ್ವಸಾನುಭವ ವಿಮರ್ಶೆ (ಎಂಪಿರಿಯೋ ಕ್ರಿಟಿಸಿಸಂ), ಮನುಷ್ಯನ ಚಿಂತನೆಯಿಂದ ವಿಕಸನಗೊಳ್ಳುವ ಅರಿವು ಹಾಗೂ ಪರಿಸರದ ಮೇಲೆ ನಿರ್ಧಾರವಾಗುವ ಲೌಕಿಕಾನು ಭವ-ಈ ಎರಡನ್ನೂ ಸಮನ್ವ ಯಗೊಳಿಸಬಹುದು ಎನ್ನುವುದೇ ಈತ ಸೂಚಿಸಿದ ವಿಚಾರಧಾರೆ. ಈ ತತ್ತ್ವ ಲೌಕಿಕವಾದದಿಂದ (ಮೆಟೀರಿಯಲಿಸಮ್) ವಿಭಿನ್ನವಾದುದೆಂದು ಹೇಳಲಾಗಿದೆ.