ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಸಿನ್ಯಾಫ್ತೀನ್

ವಿಕಿಸೋರ್ಸ್ದಿಂದ


ಅಸಿನ್ಯಾಫ್ತೀನ್ ಬಿಳಿ ಬಣ್ಣದ ಸೂಜಿ ರೂಪದ ಹರಳಿನ ಅಸಿನ್ಯಾಫ್ತೀನ್ ಇಂಗಾಲದ ಒಂದು ಸಂಯುಕ್ತ. ಇದು 95 ಸೆಂ.ಗ್ರೇ. ನಲ್ಲಿ ಕರಗುವುದು ಮತ್ತು 2780 ಸೆಂ. ಗ್ರೇ. ನಲ್ಲಿ ಕುದಿಯುವುದು. ಈ ಸಂಯುಕ್ತವನ್ನು 2600 -2700 ಸೆಂ. ಗ್ರೇ.ನ ಅಂತರದಲ್ಲಿ ಕುದಿಯುವ ಕೋಲ್‍ಟಾರ್ ಎಣ್ಣೆಯಿಂದ ಎಂ.ಪಿ.ಇ ಬರ್ಥೆಲಾಟ್ ಎಂಬಾತ ಪ್ರತ್ಯೇಕಿಸಿದ. ಬಾರ್ಡೆ ಎಂಬ ಮತ್ತೊಬ್ಬ ವಿಜ್ಞಾನಿ (-( ಥೈಲ್ ನ್ಯಾಫ್ತ್‍ಲೀನ್ ಸಂಯುಕ್ತದಿಂದ ಅಸಿನ್ಯಾಫ್ತೀನ್ ಸಂಯುಕ್ತವನ್ನು ತಯಾರಿಸಿದ. ನ್ಯಾಫ್ತಲಿಕ್ ಅನ್‍ಹೈಡ್ರೈಡನ್ನು ಅಪಕರ್ಷಿಸಿ, ಡೈಬ್ರೋಮೈಡನ್ನಾಗಿ ಪರಿವರ್ತಿಸಿದ ಮೇಲೆ, ಈ ಡೈಬ್ರೊಮೈಡು ಫಿನೈಲ್ ಲೀಥಿಯಂನೊಡನೆ ವರ್ತಿಸಿದಾಗಲೂ ಅಸಿನ್ಯಾಫ್ತೀನ್ ಉತ್ಪತ್ತಿಯಾಗುವುದು.



ಪಿಕ್ರಿಕ್ ಆಮ್ಲದೊಡನೆ ನ್ಯಾಫ್ತಲೀನ್ ಸಂಕೀರ್ಣ[ಕಾಂಪ್ಲೆಕ್ಸ್] ಸಂಯುಕ್ತವನ್ನು ಕೊಡುವ ಹಾಗೆ ಅಸಿನ್ಯಾಫ್ತೀನ್ ಸಂಯುಕ್ತವೂ ಕೂಡ ಪಿಕ್ರಿಕ್ ಆಮ್ಲದೊಡನೆ, 162 ಸೆಂ.ಗ್ರೇ.ನಲ್ಲಿ ಕರಗುವ ಕಿತ್ತಲೆಬಣ್ಣದ ಅಸಿನ್ಯಾಫ್ತೀನ್ ಸಂಯುಕ್ತವನ್ನು ಶುದ್ಧೀಕರಿಸುವುದರಲ್ಲಿಯೂ ಮತ್ತು ಗುರುತಿಸುವುದರಲ್ಲಿಯೂ ಈ ಪಿಕ್ರೆಟು ಬಹಳ ಉಪಯುಕ್ತವಾಗಿರುವುದು. ಬೇಗ ಸ್ಫಟೀಕೀಕರಿಸುವ ಗುಣವನ್ನೂ, ಹೆಚ್ಚಿನ ಕರಗುವಿಕೆಯ ಉಷ್ಣವನ್ನೂ ಮತ್ತು ಅತಿ ಕಡಿಮೆ ವಿಲೀನವಾಗುವ ಗುಣವನ್ನೂ ಈ ಪಿಕ್ರೇಟುಗಳು ಹೊಂದಿರುವ ಕಾರಣ, ಅಸಿನ್ಯಾಫ್ತೀನ್ ಪಿಕ್ರೇಟನ್ನು ಮಿಶ್ರಣಗಳಿಂದ ಬೇರ್ಪಡಿಸಲು ಅನುಕೂಲವಾಗಿರುವುದು. ಹೀಗೆ ಬೇರ್ಪಡಿಸಿ ಶುದ್ಧಗೊಳಿಸಿದ ಈ ಪಿಕ್ರೇಟಿನ ಈಥರ್ ದ್ರಾವಣಕ್ಕೆ ಅಮೋನಿಯಂ ಹೈಡ್ರಾಕ್ಸೈಡನ್ನು ಹಾಕಿದಾಗ ಅಸಿನ್ಯಾಫ್ತೀನ್ ಪುನರುತ್ಪತ್ತಿಯಾಗುವುದು. ವ್ಯಾಟ್ ವರ್ಣದ್ರವ್ಯಗಳ[Vat dyes] ತಯಾರಿಕೆಯಲ್ಲಿ ಬೇಕಾಗುವ ಅಸಿನ್ಯಾಫ್ತಕ್ವಿನೋನ್ ಸಂಯುಕ್ತದ ತಯಾರಿಕೆಯಲ್ಲಿ ಇದನ್ನು ಉಪಯೋಗಿಸುವರು. (ಜಿ.ವಿ.ಸಿ.)