ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಗಸ್ಟಾ

ವಿಕಿಸೋರ್ಸ್ದಿಂದ

ಆಗಸ್ಟಾ ಇಟಲಿಯ ದಕ್ಷಿಣಕ್ಕಿರುವ ಸಿಸಿಲಿದ್ವೀಪದ ಸಿರಾಕ್ಯೂಸ್ ಪ್ರಾಂತ್ಯದ ಒಂದು ಬಂದರು. ಆಗೂಸ್ಟಾ ಎಂದೂ ಕರೆಯುತ್ತಾರೆ. ಇದನ್ನು ಆಗಸ್ಟಸ್ ಎಂಬಾತ ಕ್ರಿ.ಪೂ. 42ರಲ್ಲಿ ನಿರ್ಮಿಸಿದ. 1693ರ ಭೂಕಂಪದಿಂದಲೂ 1943ರ ಮಹಾಯುದ್ಧದಿಂದಲೂ ನಾಶಹೊಂದಿತು. ಹೊಸದಾಗಿ ಊರು ಈಗ ಬೆಳೆಯುತ್ತಿದ್ದು ನಾವಿಕಪಡೆಯ ನೆಲೆಯಾಗಿದೆ. ಆಲಿವ್ ಎಣ್ಣೆ, ದ್ರಾಕ್ಷಾರಸ, ಹಣ್ಣು, ಮೀನು, ಉಪ್ಪು -ಮುಂತಾದುವುಗಳ ವಾಣಿಜ್ಯ ಕೇಂದ್ರವಾಗಿದೆ. ಜನಸಂಖ್ಯೆ ; 23,071 (1951).

ಪ್ರಾಚೀನ ಇಟಲಿಯಲ್ಲಿ ಆಗೂಸ್ಟಾ ಎಂಬ ಹೆಸರಿನ ಅನೇಕ ಪಟ್ಟಣಗಳಿದ್ದವು. ಆಗಸ್ಟಾ ಎಂಬ ಹೆಸರಿನ ಪಟ್ಟಣಗಳು ಅಮೆರಿಕ ಸಂಯುಕ್ತ ಸಂಸ್ಥಾನದ ಜಾರ್ಜಿಯಾ, ಕಾನ್ಸಾಸ್, ಮತ್ತು ಮೇನ್ ಪ್ರಾಂತ್ಯಗಳಲ್ಲಿವೆ. (ಎ.ಕೆ.)