ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಟೋಕ್ಲೇವ್

ವಿಕಿಸೋರ್ಸ್ದಿಂದ

ಆಟೋಕ್ಲೇವ್ ರಾಸಾಯನಿಕ ಅಥವಾ ಭೌತಕ್ರಿಯಾಪರಿಣಾಮ ಅಥವಾ ಪ್ರಯೋಗವರ್ಧನವಾಗಿ ಉಪಯೋಗಿಸಲು ಉಷ್ಣ ಮತ್ತು ಸಂಮರ್ದಗಳನ್ನು ತಡೆದಿಟ್ಟುಕೊಳ್ಳುವಂಥ ಪಾತ್ರೆ (ಯಾಂತ್ರಿಕ ಉಷ್ಣಬಲೋಪಕರಣ).

ಅಡಿಗೆಗೆ ಉಪಯೋಗಿಸುವ ಪ್ರೆಷರ್ ಕುಕ್ಕರನ್ನು ಒಂದು ರೀತಿಯ ಆಟೋಕ್ಲೇವ್ ಎಂದೇ ಹೇಳಬಹುದು. ಈ ಬಲಬಂಧಿತ ಪಾತ್ರೆಯನ್ನು ರಾಸಾಯನಿಕ ಮತ್ತು ಇತರ ಕೈಗಾರಿಕೋದ್ಯಮಗಳಲ್ಲಿ ವಿಶೇಷವಾಗಿ ಬಳಸುತ್ತಾರೆ. ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೋಪಕರಣಗಳನ್ನೂ, ಸೂಜಿ ಮೊದಲಾದ ಇತರ ಉಪಕರಣಗಳನ್ನೂ ಶುದ್ಧಿಗೊಳಿಸಲು ಈ ಪಾತ್ರೆಯ ಉಪಯೋಗವಿದೆ. ಕ್ರಿಮಿತಜ್ಞರು ಕ್ರಿಮಿಕೀಟಗಳ ಅನುತ್ಪಾದನ ವಾತಾವರಣ ರಚನೆಯಲ್ಲಿ, ಅವುಗಳ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಮತ್ತು ಕೊಳಚೆ ವಾತಾವರಣ ನಿವೃತ್ತಿಯಲ್ಲಿ ವಿಶೇಷವಾಗಿ ಈ ಶುದ್ಧೀಕರಣ ವಿಧಾನವನ್ನು ಬಳಸುತ್ತಾರೆ. (ವಿ.ಎಸ್.ವಿ.)