ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆನಂದರಂಗಂ ಪಿಳ್ಳೆ

ವಿಕಿಸೋರ್ಸ್ದಿಂದ

ಆನಂದರಂಗಂ ಪಿಳ್ಳೆ ಹದಿನೆಂಟನೆಯ ಶತಮಾನದ ಅಂತ್ಯದಲ್ಲಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಉನ್ನತಾಧಿಕಾರದಲ್ಲಿದ್ದು ಉಲ್ಲೇಖಾರ್ಹವಾದ ಒಂದು ದಿನಚರಿಯನ್ನು ಬಿಟ್ಟುಹೋಗಿದ್ದಾನೆ. ಇಂಗ್ಲಿಷರಿಗೂ ಫ್ರೆಂಚರಿಗೂ ನಡೆದ ಯುದ್ಧದ ಖಚಿತವಾದ ವಿವರಗಳು ಸಮಕಾಲೀನವಾದ ಅವನ ದಿನಚರಿಯಲ್ಲಿವೆ. ಅಲ್ಲದೆ ದಕ್ಷಿಣ ಭಾರತದಲ್ಲಿ ರಾಜರುಗಳಿಗೆ ಪರಸ್ಪರ ವೈಷಮ್ಯವಿದ್ದು ಡೂಪ್ಲೆ ಫ್ರೆಂಚರ ಸಾಮ್ರಾಜ್ಯವನ್ನು ಸ್ಥಾಪಿಸಲು ಪ್ರಯತ್ನಪಟ್ಟಿದ್ದು ಹೇಗೆ ಎಂಬುದನ್ನೂ ಇದರಿಂದ ತಿಳಿಯಬಹುದು. ಈ ಗ್ರಂಥದಲ್ಲಿ ಸಣ್ಣಪುಟ್ಟ ವಿವರಗಳನ್ನೂ ಸತ್ಯತೆಯಿಂದ ಹೇಳಿರುವುದು ಬಹು ಸ್ವಾರಸ್ಯವಾಗಿದೆ. ಇಂತಹ ಶ್ರೇಷ್ಠ ಗ್ರಂಥವನ್ನು ಬರೆದಿರುವುದರಿಂದ ಕರ್ತೃವನ್ನು ಭಾರತದ ಪೆಪಿಸ್ ಎಂದು ಕರೆಯುತ್ತಾರೆ. (ಬಿ.ಎಸ್.ಕೆ.)