ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆನೆಹುಣಿಸೆ

ವಿಕಿಸೋರ್ಸ್ದಿಂದ

ಆನೆಹುಣಿಸೆ ಬೊಂಬಕೇಸಿ ಕುಟುಂಬದ ಸಸ್ಯ (ಅಡನ್‍ಸೋನಿಯ). ಮಾಗಿಮಾವು ಅಥವಾ ಕೋತಿಗಡ್ಡದ ಮರವೆಂದೂ ಹೆಸರುಗಳಿವೆ. ಈ ಮರದ ಮೂಲಸ್ಥಾನ ಆಫ್ರಿಕ. ಉಷ್ಣವಲಯಗಳ ಪ್ರದೇಶಗಳಲ್ಲಿ ಮತ್ತು ಆಸ್ಟ್ರೇಲಿಯದಲ್ಲಿ ವ್ಯಾಪಿಸಿದೆ. ಭಾರತದ ಉತ್ತರ ಪ್ರದೇಶ, ಬಿಹಾರ್, ಬೊಂಬಾಯಿ, ಮದರಾಸಿನಲ್ಲಿ ಬೆಳೆಯುತ್ತದೆ. ಇದು ದೀರ್ಘಕಾಲ ಬೆಳೆಯುವ ಮರ. ಇದರಲ್ಲಿ ಹತ್ತು ಜಾತಿಗಳಿವೆ. ಅವುಗಳಲ್ಲಿ ಅಡನ್‍ಸೋನಿಯ ಡಿಜಿಟೇಟ ಎಂಬುದು ಮುಖ್ಯವಾದುದು. ಇದರ ತಿರುಳಿನಲ್ಲಿ ಹಗ್ಗ ತಯಾರಿಸುತ್ತಾರೆ.

(ಡಿ.ಜಿ.)