ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಈಟಾರ್ಡನ ಕ್ರಿಯೆ

ವಿಕಿಸೋರ್ಸ್ದಿಂದ

ಈಟಾರ್ಡನ ಕ್ರಿಯೆ: ಮೀಥೈಲ್ ಗ್ರೂಪುಗಳಿರುವ ಬೆಂಜಿûೀನ್ ವರ್ಗದ ಕೆಲವು ಹೈಡ್ರೋಕಾರ್ಬನ್ನುಗಳನ್ನು ಆಲ್ಡಿಹೈಡುಗಳಾಗಿ ಪರಿವರ್ತಿಸಲು ಈಟಾರ್ಡ್ ಎಂಬುವನು ನಿರೂಪಿಸಿದ ಕ್ರಿಯಾವಿಧಾನ. ಟಾಲೀನನ್ನು (C6H5.CH3) ಕ್ರೋಮೈಲ್ ಕ್ಲೋರೈಡಿನಿಂದ (CrO2Cl2) ಉತ್ಕರ್ಷಿಸಿ ಬೆಂeóÁಲ್ಡಿಹೈಡ್ (C6H5.CHO) ಮಾಡುವುದು ಇದಕ್ಕೆ ಉದಾಹರಣೆ. ಮೊದಲು ಟಾಲೀನನ್ನು ಇಂಗಾಲದ ಡೈಸಲ್ಫೈಡಿನಲ್ಲಿ ವಿಲೀನ ಮಾಡಬೇಕು. ಉಷ್ಣತೆ 25o-45 o ಸೆಂ.ಗ್ರೇ. ಮಿತಿಯನ್ನು ಮೀರಬಾರದು. ಆಗ ಕ್ರೋಮೈಲ್ ಕ್ಲೋರೈಡಿನೊಂದಿಗೆ ಟಾಲೀನು ಕೂಡಿ ಮಧ್ಯವರ್ತಿ ಸಂಯುಕ್ತವೊಂದು ಬೇರ್ಪಡುವುದು. ಇದಕ್ಕೆ ಸ್ಫೋಟಕ ಗುಣವಿರುವುದರಿಂದ ಈ ಕ್ರಿಯೆ ನಡೆಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ. ಅನಂತರ ತಣ್ಣೀರನ್ನು ಸೇರಿಸಿದರೆ ಬೆಂeóÁಲ್ಡಿಹೈಡ್ ಉಂಟಾಗುವುದು. ಈ ಕ್ರಿಯೆಗಳನ್ನು ಕೆಳಕಂಡ ಸಮೀಕರಣಗಳು ಸೂಚಿಸುತ್ತವೆ.

ಟಾಲೀನಿನ ಬದಲು ಈಥೈಲ್ ಬೆಂಜೀನನ್ನು (C6H5.CH2.CH3) ಈಟಾರ್ಡನ ಕ್ರಿಯೆಗೆ ಒಳಪಡಿಸಿದರೆ ಫೀನೈಲ್ ಅಸಿಟಾಲ್ಡಿಹೈಡ್ (C6H5.CH2.CHO) ಮತ್ತು ಅಸಿಟೊಫೀನೋನುಗಳ (C6H5 — CO - CH3) ಮಿಶ್ರಣ ದೊರೆಯುವುದು. ಆದರೆ ಆಲ್ಕೈಲ್‍ಪಾಶ್ರ್ವಸರಣಿ ಇನ್ನೂ ನೀಳವಾಗಿದ್ದರೆ ಉತ್ಪನ್ನವಸ್ತು ಕೇವಲ ಕೀಟೋನ್ ಆಗಿರುವುದು. ಆರೋಮ್ಯಾಟಿಕ್ ಆಲ್ಡಿಹೈಡುಗಳು ಉಪಯುಕ್ತ ವಸ್ತುಗಳು. ಆದ್ದರಿಂದ ಅದನ್ನು ತಯಾರಿಸಲು ನೆರವಾಗುವ ಈ ಕ್ರಿಯೆಗೆ ಪ್ರಾಶಸ್ತ್ಯ ಬಂದಿದೆ.

(ಎಚ್.ಜಿ.ಎಸ್.)