ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉರಾಳ

ವಿಕಿಸೋರ್ಸ್ದಿಂದ

ಉರಾಳ: ಕಾಂಪೊಸಿಟೆ ಕುಟುಂಬಕ್ಕೆ ಒಂದು ಜಾತಿಯ ಆಸ್ಟರೇನೇ ಸಸ್ಯ ಅಜಿರೇಟಂ ಕೋನೈಸಾಯ್ಡಿಸ್. ಪರ್ಯಾಯನಾಮ ಮೇಕೆ ಗಿಡ. ಸುಗಂಧಯಕ್ತ ಸಸ್ಯ. ಉಷ್ಣವಲಯದಲ್ಲೆಲ್ಲ ಪಸರಿಸಿದೆ. ಸುಮಾರು 45 ಜಾತಿಗಳಿವೆ. ಭಾರತದಲ್ಲಿ ಎಲ್ಲ ಕಡೆಯೂ ಬಯಲು ಜೀವಿಯಾಗಿ ಬೆಳೆಯುವುದು. ಹೂಗಳು ಬಿಳುಪಾಗಿಯೂ ಹಲವು ಬಾರಿ ತಿಳಿಗೆಂಪಾಗಿಯೂ ಇವೆ. ಎಲೆಗಳನ್ನು ಗಾಯಗಳಿಗೆ ಔಷಧವಾಗಿ ಉಪಯೋಗಿಸುತ್ತಾರೆ. ಮ್ಯಾಂಡ್ಗಿಲ್ ಎಂಬಾತ ಈ ಗಿಡದಲ್ಲಿ ಎಲೆ ಹಾಗೂ ಹೂವಿನಲ್ಲಿ 0.02%ರಷ್ಟು ಸಾರಭೂತ ಎಣ್ಣಿಯ ಅಂಶವಿದೆಯೆಂದು ತಿಳಿಸಿದ್ದಾನೆ. (1925).(ನೋಡಿ-ಅಜಿರೇಟಂ). (ಸಿ.ಎಸ್.ಎಚ್.)