ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಷ್ಣವಿಭಜನೆ ಮತ್ತು ಉಷ್ಣವಿಯೋಜನೆ

ವಿಕಿಸೋರ್ಸ್ದಿಂದ
  ಮೂಲದೊಡನೆ ಪರಿಶೀಲಿಸಿ

ಉಷ್ಣವಿಭಜನೆ ಮತ್ತು ಉಷ್ಣವಿಯೋಜನೆ

ಎರಡು ಬಗೆಯ ರಾಸಾಯನಿಕ ಬದಲಾವಣೆಗಳು (ಥರ್ಮಲ್ ಡೀಕಾಂಪೊಸಿಷನ್ ಅಂಡ್ ಥರ್ಮಲ್ ಡಿಸೋಸಿಯೇಷನ್). ಒಂದು ನಿರ್ದಿಷ್ಟ ರಾಸಾಯನಿಕ ಸಂಯುಕ್ತವನ್ನು ಕಾಯಿಸಿದಾಗ ಅದು ವಿಭಜಿಸಿ ಎರಡು ಅಥವಾ ಅನೇಕ ಧಾತು ಅಥವಾ ಸಂಯುಕ್ತಗಳನ್ನು ಉತ್ಪತ್ತಿ ಮಾಡಿದರೆ ಆ ಕ್ರಿಯೆಗೆ ಉಷ್ಣವಿಭಜನೆ ಎಂದು ಹೆಸರು. ಇದಕ್ಕೆ ಅನೇಕ ನಿದರ್ಶನಗಳನ್ನು ಕೊಡಬಹುದು.

2HgO(2Hg+O2

NH4 NO3(N2O +2H2O

(NH4)2 Cr2O7(N2 +Cr2O3 +4H2O ಇತ್ಯಾದಿ

ಉಷ್ಣದ ನೆರವಿನಿಂದ ಆಗುವ ಈ ಕ್ರಿಯೆ ವಿಪರ್ಯಾಯವಾಗಬಲ್ಲುದಾದರೆ ಅಂದರೆ ಉತ್ಪನ್ನ ಪದಾರ್ಥಗಳು ಕಡಿಮೆ ಉಷ್ಣದಲ್ಲಿ ಪುನಃ ಸಂಯೋಗ ಹೊಂದಿ ಮೂಲ ಪದಾರ್ಥವನ್ನು ಉತ್ಪತ್ತಿಮಾಡುವುದಾದರೆ ಆ ಕ್ರಿಯೆಗೆ ಉಷ್ಣವಿಯೋಜನೆ ಎಂದು ಹೆಸರು. ಇದಕ್ಕೆ ಕೆಲವು ನಿದರ್ಶನಗಳು(


ಇತ್ಯಾದಿ (ಜಿ.ಆರ್.ಎಲ್.)