ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಡೆಸ್ಟಿನ್

ವಿಕಿಸೋರ್ಸ್ದಿಂದ

ಎಡೆಸ್ಟಿನ್ ಪುಂಡಿ ಬೀಜದಲ್ಲಿರುವ ಗ್ಲಾಬ್ಯುಲಿನ್ ಜಾತಿಗೆ ಸೇರಿದ ಪ್ರೋಟೀನು. ಇದನ್ನು ಸ್ಫಟಿಕೀಕರಿಸಲಾಗಿದೆ. ಇದು ಮತ್ತು ಇದರ ಹೈಡ್ರೊಕ್ಲೋರೈಡು ನೀರಿನಲ್ಲಿ ವಿಲೀನವಾಗುವುದಿಲ್ಲ. ಎಲೆಕ್ಟ್ರಾನ್ ಸೂಕ್ಷ್ಮದರ್ಶನ, ಅತಿ ಅಪಕೇಂದ್ರೀಯತೆ (ಅಲ್ಟ್ರಾ ಸೆಂಟ್ರಿಫ್ಯೂಗೇಶನ್) ಮತ್ತು ಬೆಳಕು ಚದುರಿಕೆ (ಲೈಟ್ ಸ್ಕ್ಯಾಟರಿಂಗ್) ವಿಧಾನಗಳಿಂದ ಎಡೆಸ್ಟಿನ್ನಿನ ಅಣುತೂಕ 31,000-34,000 ಎಂದು ನಿರ್ಧರಿಸಲಾಗಿದೆ.

     (ಎಂ.ಆರ್.ಆರ್.)