ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಣ್ಣೆಮರ

ವಿಕಿಸೋರ್ಸ್ದಿಂದ

ಎಣ್ಣೆಮರ ಲೆಗ್ಯುಮಿನೋಸಿ ಕುಟುಂಬದ (ಫ್ಯಾಮಿಲಿ) ಒಂದು ಮರ (ಹಾರ್ಡ್‍ವಿಕಿಯ ಪಿನ್ನೇಟ). ವ್ಯಾಪಾರನಾಮ ಪಿನ್ನೆ. ನಿತ್ಯಹರಿದ್ವರ್ಣದ ದೊಡ್ಡ ಜಾತಿ ಮರ. ಎತ್ತರ 300 ಮೀಟರಷ್ಟು ಆಗಬಹುದು ; ಸುತ್ತಳತೆ 4 ಮೀಟರ್ ಹೊಳಪು ಎಲೆಗಳು ದಕ್ಷಿಣ ಕನ್ನಡ, ಕೊಡಗಿನ ಕಾಡುಗಳಲ್ಲಿ ವಿಶೇಷವಾಗಿದೆ. ಚೌಬೀನೆಯಲ್ಲಿ ಮಾಸಲು ಬಿಳುಪಿನ ಬಿಳಿಮರ ಹೆಚ್ಚು. ಕಬ್ಬಿನ ಮರ ಕಂದುಗೆಂಪು. ಇದರಲ್ಲಿ ಒಂದು ಬಗೆಯ ತೈಲರಾಳ ಇದೆ. ಬಿಳಿಮರ ಬಾಳಿಕೆ ಬರುವುದಿಲ್ಲ. ರಕ್ಷಕ ಸಂಸ್ಕರಣೆಯಿಂದ ಮರದ ಬಾಳಿಕೆ ಏರುತ್ತದೆ; ಕೆಚ್ಚು ಚೆನ್ನಾಗಿ ಹದಗೊಳ್ಳುವುದು ಹಾಗೂ ಬಾಳಿಕೆ ಬರುವುದು. ಮರ ಸಾಕಷ್ಟು ಗಡಸು ಮತ್ತು ಗಟ್ಟಿ ಮರಗೆಲಸ ಸುಲಭ. ತೊಲೆ, ತೇರು, ಹೆಂಚು ಹಲಗೆ, ನೆಲಹಲಗೆ ಮತ್ತು ಪೀಠೋಪಕರಣಗಳಿಗೆ ಉಪಯುಕ್ತವಾದುದು. ಕಡೆತದ ಕೆಲಸಗಳಿಗೂ ಬರುತ್ತದೆ. ಆರಿಸಿದ ಚೌಬೀನೆ ಬೀರು ಇತ್ಯಾದಿ ಅಂದದ ಉಪಕರಣಗಳಿಗೂ ಉಪಯುಕ್ತ.

(ಎ.ಕೆ.ಎಸ್.)