ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಥಿಲೀನ್ ಡೈಅಮೀನ್ ಟೆಟ್ರ ಅಸಿಟೇಟ್

ವಿಕಿಸೋರ್ಸ್ದಿಂದ
   ಮೂಲದೊಡನೆ ಪರಿಶೀಲಿಸಿ

ಎಥಿಲೀನ್ ಡೈಅಮೀನ್ ಟೆಟ್ರ ಅಸಿಟೇಟ್ ಎಥಿಲೀನ್ ಡೈ ಅಮೀನ್ ಟೆಟ್ರ ಅಸೆಟಿಕ್ ಆಮ್ಲದ ಟೆಟ್ರ (ಅಂದರೆ ನಾಲ್ಕು) ಸೋಡಿಯಂ ಲವಣ. ಸಂಕ್ಷೇಪರೂಪ ಇಡಿಟಿಎ. ಎಥಿಲೀನ್ ಡೈ ಅಮೀನಿನೊಡನೆ ಫಾರ್ಮಾಲ್ಡಿ ಹೈಡ್ ಮತ್ತು ಸೋಡಿಯಂ ಸೈನೈಡುಗಳನ್ನಾಗಲೀ ಸೋಡಿಯಂ ಕ್ಲೋರ್‍ಅಸಿಟೇಟನ್ನಾಗಲೀ ಸಂಯೋಗಿಸುವಂತೆ ಮಾಡಿ ಇಡಿಟಿಎಯನ್ನು ತಯಾರಿಸಲಾಗುತ್ತದೆ. NaO-OC-CH2 CH2-CO-ONa N-CH2-CH2-N NaO-OC-CH2 CH2-CO-ONa

                  ಇಡಿಟಿಎ

ಇಡಿಟಿಎ ಸಂಯುಕ್ತ ಬಹುತೇಕ ಎಲ್ಲ ಲೋಹ ಮತ್ತು ಲೋಹ ಅಯಾನುಗಳೊಡನೆ ಸಂಯೋಗಿಸಿ ಅಯಾನುಗಳಾಗಿ ವಿಭಜನೆಗೊಳ್ಳದ (ನಾನ್‍ಅಯಾನಿಕ್) ಕೀಲೇಟ್ ಸಂಕೀರ್ಣಗಳನ್ನು (ಕೀಲೇಟ್ ಕಾಂಪ್ಲೆಕ್ಸಸ್) ನೀಡುತ್ತದೆ. ಇವು ಸಾಕಷ್ಟು ಸ್ಥಿರವಾದವುಗಳಾದ್ದರಿಂದ ಇಡಿಟಿಎ ಸಂಯುಕ್ತ ಅನೇಕ ಲೋಹಗಳ ಪರಿಮಾಣ ವಿಶ್ಲೇಷಣಗಳಲ್ಲಿ (ಕ್ವಾಂಟಿಟೇಟ್ಯೂ ಅನಾಲಿಸಿಸ್) ಉಪಯೋಗಿಸಲಾಗುತ್ತಿರುವ ಬಹು ಜನಪ್ರಿಯ ಸಂಕೀರ್ಣಕಾರಕವಾಗಿದೆ (ಕಾಂಪ್ಲೆಕ್ಸಿಂಗ್ ಏಜೆಂಟ್). ದ್ರಾವಣದ ಆಮ್ಲೀಯತೆಯನ್ನು ಅನುಸರಿಸಿ ಈ ಸಂಯುಕ್ತ ನಿರ್ದಿಷ್ಟ ಲೋಹಗಳೊಡನೆ ಮಾತ್ರ ಸಂಯೋಗಿಸುವುದರಿಂದ ಲೋಹ ಅಥವಾ ಲೋಹ ಮಿಶ್ರಣಗಳ ವಿಶ್ಲೇಷಣೆಯನ್ನೂ ಸಾಧಿಸಬಹುದು. ಮತ್ತೆ ಹಲವು ಸಂದರ್ಭಗಳಲ್ಲಿ ಹಲವು ಅಸ್ಥಿರ ಸಂಕೀರ್ಣಗಳನ್ನು (ಅನ್‍ಸ್ಟೇಬಲ್ ಕಾಂಪ್ಲೆಕ್ಸಸ್) ಸ್ಥಿರಗೊಳಿಸಲು ಇಡಿಟಿಎಯನ್ನು ಉಪಯೋಗಿಸಲಾಗುತ್ತದೆ. ಈವರೆಗೆ ಕ್ಯಾಲ್ಸಿಯಂ, ಮೆಗ್ನೀಸಿಯಂ, ಸತು, ತವರ, ಕಬ್ಬಿಣ, ತಾಮ್ರ, ಬೆಳ್ಳಿ, ಸೀಸ, ನಿಕಲ್, ಪಾದರಸ, ಬಿಸ್ಮತ್ ಮ್ಯಾಂಗನೀಸ್, ಸೋಡಿಯಂ, ಕೋಬಾಲ್ಟ್, ಥೋರಿಯಂ, ಜೆರ್ಕೋನಿಯಂ ಮತ್ತು ಹ್ಯಾಫ್ನಿಯಂ ಲೋಹ ಮತ್ತು ಲವಣಗಳ ಪರಿಮಾಣಾತ್ಮಕ ವಿಶ್ಲೇಷಣೆಗಳಲ್ಲಿ ಇಡಿಟಿ ಎ ಸಂಯುಕ್ತವನ್ನು ಉಪಯೋಗಿಸಲಾಗಿದೆಯೆಂದರೆ ಈ ಸಂಕೀರ್ಣಕಾರಕದ ಉಪಯುಕ್ತತೆಯ ವೈಶಾಲ್ಯದ ಅರಿವಾಗುತ್ತದೆ. ಇದನ್ನು ಬೇರೆ ಸಂದರ್ಭಗಳಲ್ಲಿಯೂ ಉಪಯೋಗಿಸುವ ಸಾಧ್ಯತೆಯನ್ನು ಇನ್ನೂ ಪರಿಶೀಲಿಸಲಾಗುತ್ತಿದೆ.

ಅಮೀನಿನ ಹೆಸರು ಅಣುಸೂತ್ರ 20ಲಿ ಸೆಂ.ಗ್ರೇ. ಉಷ್ಣತೆಯಲ್ಲಿ ಸಾಂದ್ರತೆ ದ್ರವೀಕರಣ ಬಿಂದು ಲಿ ಸೆಂ.ಗ್ರೇ. ಕುದಿಯುವ ಬಿಂದು ಲಿ ಸೆಂ. ಗ್ರೇ. ಹಬೆಯೊಡನೆ ಹಾಯುವ ಗುಣ

ಮಾನೊ ಎಥೆನಾಲ್ ಅಮೀನ್ (ಊಔ.ಅಊ2.ಅಊ2)ಓಊ2 1.022 10.5 171 ಉಂಟು

ಡೈ ಎಥೆನಾಲ್ ಅಮೀನ್ (ಊಔ.ಅಊ2.ಅಊ2)2ಓಊ 1.097 28.0 217 (150 ಮಿ. ಮೀ. ಒತ್ತಡದಲ್ಲಿ ಇಲ್ಲ

ಟ್ರೈ ಎಥೆನಾಲ್ ಅಮೀನ್ (ಊಔ.ಅಊ2.ಅಊ3)3ಓ 1.126 21.0 277 (150 ಮಿ. ಮೀ. ಒತ್ತಡದಲ್ಲಿ ಇಲ್ಲ


ಕೇವಲ ಲೋಹಗಳು ಮಾತ್ರವಲ್ಲದೆ ಫಾಸ್ಫೇಟ್ ಮತ್ತು ಹಾಲೈಡ್ ಅಯಾನುಗಳ ಪರಿಮಾಣ ವಿಶ್ಲೇಷಣೆಯಲ್ಲಿಯೂ ಇಡಿಟಿಎ ಸಂಯುಕ್ತವನ್ನು ಉಪಯೋಗಿಸಬಹುದು. ಇಡಿಟಿಎ ಆಮ್ಲದ ಡೈಕ್ಯಾಲ್ಸಿಯಂ ಡೈ ಸೋಡಿಯಂ ಲವಣವನ್ನು ಕ್ಯಾಲ್ಸಿಯಂ ಕೊರತೆಯಿರುವ ರೋಗಿಗಳ ಚಿಕಿತ್ಸೆಯಲ್ಲೂ ಉಪಯೋಗಿಸಲಾಗುತ್ತದೆ. (ಕೆ.ಟಿ.ಎಸ್.)