ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎರ್ಬಿಯಮ್

ವಿಕಿಸೋರ್ಸ್ದಿಂದ
 ಮೂಲದೊಂದಿಗೆ ಪರಿಶೀಲಿಸಿ

ಎರ್ಬಿಯಮ್: ವಿರಳ ಭಸ್ಮಧಾತುಗಳಲ್ಲಿ ಲ್ಯಾಂಥೆನೈಡ್ಸ್‌: ಅ ರೇರ್ಅರ್ತ್ ಎಲಿಮೆಂಟ್ಸ್‌) ಒಂದು. ಆವರ್ತಕೋಷ್ಟಕದ 3ನೆಯ ಗುಂಪಿಗೆ ಸೇರಿದೆ. ಇದರ ರಾಸಾಯನಿಕ ಚಿಹ್ನೆ ಇಡಿ, ಪರಮಾಣು ತೂಕ 167.26, ಪರಮಾಣು ಸಂಖ್ಯೆ 68, ಇದರ ಎಲೆಕ್ಟ್ರಾನಿಕ್ ವಿನ್ಯಾಸ I82 28 2 2ಠಿ6 382 3ಠಿ6 3ಜ10 482 4ಠಿ6 4ಜ10 4ಜಿ12 582 5ಠಿ 6 6s2 ಲೋಹವಸ್ತುವಾಗಿರುವ ಇದನ್ನು 1843ರಲ್ಲಿ ಸ್ವೀಡನ್ನಿನ ರಸಾಯನವಿಜ್ಞಾನಿ ಕಾರ್ಲ್‌ ಗುಸ್ಟಾವ್ ಮೊಸಾಂಡರ್ (1797-1858) ಕಂಡುಕೊಂಡ. ಶುದ್ಧರೂಪದ ಯೆಟ್ರಿಯದ (ಯೆಟ್ರಿಯಂ ಆಕ್ಸೈಡ್ ಙ2ಔ3) ಪರೀಕ್ಷೆಯನ್ನು ನಡೆಸುತ್ತಿದ್ದಾಗ ಮತ್ತೆರಡು ವಸ್ತುಗಳ ಆಕ್ಸೈಡುಗಳಿರುವುದು ಕಂಡುಬಂತು. ಒಂದನ್ನು ಎರ್ಬಿಯಮ್ ಎಂದೂ ಮತ್ತೊಂದನ್ನು ಟೆರ್ಬಿಯಮ್ ಎಂದೂ ಕರೆದ. ಇತರ ಭಸ್ಮಧಾತುಗಳಂತೆಯೇ ಎರ್ಬಿಯಮ್ ಮತ್ತು ಅದರ ಸಂಯುಕ್ತಗಳನ್ನು ಇತರ ಭಸ್ಮಧಾತುಗಳು ಹಾಗೂ ಅವುಗಳ ಸಂಯುಕ್ತಗಳಿಂದ ಬೇರ್ಪಡಿಸುವುದು ಬಹಳ ಕಷ್ಟ. ಪಾಲಿಕ್ರೇಸ್ (ಸು. 7.5% ಎರ್ಬಿಯಮ್ ಆಕ್ಸೈಡ್), ಯೂಕ್ಸ್‌ನೈಟ್ ಮತ್ತು ಗ್ಯಾಡೋಲಿನೈಟುಗಳಲ್ಲಿ ಇದು ದೊರೆಯತ್ತದೆ. ಸ್ವಾಭಾವಿಕವಾಗಿ ದೊರೆವ ಈ ವಸ್ತುವಿನಲ್ಲಿ 162ಇಡಿ(0.136%), 164ಇಡಿ (1.56%), 166ಇಡಿ (33.41%), 167ಇಡಿ (22.94%), 168ಇಡಿ (27.07%), 170ಇಡಿ (14.88%), ಎಂಬ ಸ್ಥಿರಸಮ ಸ್ಥಾನಿಗಳು ಸೇರಿರುತ್ತವೆ.

ಕಳೆದ 20 ವರ್ಷಗಳಲ್ಲಿ ಅಯಾನು ವಿನಿಮಯ ವರ್ಣಲೇಖೀವಿಜ್ಞಾನದಲ್ಲಿ (ಕ್ರೊಮಟಾಗ್ರಫಿ) ಅಗಿರುವ ಪ್ರಗತಿಯಿಂದಾಗಿ ಆಧಿಕ ಪ್ರಮಾಣದಲ್ಲಿ ಎರ್ಬಿಯಮ್ ಸಂಯುಕ್ತಗಳನ್ನು ತಯಾರಿಸುವುದು ಸಾಧ್ಯವಾಗಿದೆ. ಒಂದನ್ನೇ ಅಧಿಕ ಪ್ರಮಾಣದಲ್ಲಿ ಬಳಸುವ ಯಾವುದೇ ಕ್ಷೇತ್ರ ಇನ್ನೂ ಮೂಡಿಲ್ಲ

(ನೋಡಿ- ವಿರಳ-ಭಸ್ಮಧಾತುಗಳು).