ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಐಸೊಪ್ರೊಪೈಲ್ ಈಥರ್

ವಿಕಿಸೋರ್ಸ್ದಿಂದ

ಐಸೊಪ್ರೊಪೈಲ್ ಈಥರ್: ಕರ್ಪುರದ ವಾಸನೆಯಿರುವ ಬಣ್ಣವಿಲ್ಲದ ದ್ರವವಸ್ತು. ಅಣುಸೂತ್ರ ಅ6ಊ14ಔ. ರಚನಾಸೂತ್ರ 200 ಸೆಂ. ಉಷ್ಣತೆಯಲ್ಲಿ ಇದರ ಸಾಂದ್ರತೆ 0.725. ಕುದಿಯುವ ಬಿಂದು 67.50 ಸೆಂ. ನೀರಿನಲ್ಲಿ ಅದ್ರಾವ್ಯ. ಅನೇಕ ಆಗಾರ್ಯ್‌ನಿಕ್ ಲೀನಕಾರಿಗಳೊಡನೆ ಬೆರೆಯುತ್ತದೆ. ಐಸೊಪ್ರೊಪೈಲ್ ಆಲ್ಕೊಹಾಲಿನ ತಯಾರಿಕೆಯಲ್ಲಿ ಉಪವಸ್ತುವಾಗಿ ದೊರೆಯುವುದು. ಈ ಆಲ್ಕೊಹಾಲನ್ನು ಪ್ರಬಲ ಸಲ್ಫ್ಯೂರಿಕ್ ಆಮ್ಲದೊಂದಿಗೆ ಕಾಯಿಸಿ ಐಸೊಪ್ರೊಪೈಲ್ ಈಥರನ್ನು ಪಡೆಯಬಹುದು. ದೀರ್ಘಾವಧಿ ಕೂಡಿಟ್ಟಾಗ ಈಥೈಲ್ ಈಥರಿನಂತೆ ಇದೂ ಪರಾಕ್ಸೈಡುಗಳನ್ನು ಕೊಡುವುದು. ಕೀಲೆಣ್ಣೆಗಳಲ್ಲಿರುವ ಮೇಣಗಳನ್ನು ಲೀನಮಾಡಿಕೊಂಡು ನಿವಾರಿಸಲು ಇದು ಸಹಾಯಕವಾಗಿದೆ. ಕೊಬ್ಬು ಮತ್ತು ತೈಲಗಳ ಶುದ್ಧೀಕರಣದಲ್ಲೂ ಇದರ ಉಪಯೋಗ ಇದೆ. (ಎಚ್.ಜಿ.ಎಸ್.)