ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಂಕಣಗ್ರಹಣ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕಂಕಣಗ್ರಹಣ : ಸೂರ್ಯಗ್ರಹಣದಲ್ಲಿ ಚಂದ್ರಬಿಂಬ ಸೂರ್ಯಬಿಂಬದ ಅಂಚನ್ನು ಮಾತ್ರ ತೆರಪು ಬಿಟ್ಟು ಉಳಿದ ಮಧ್ಯ ಭಾಗವನ್ನು ನಮ್ಮ ದೃಷ್ಟಿಯಿಂದ ಮರೆಮಾಡುವ ಒಂದು ವಿಶೇಷ ಪರಿಸ್ಥಿತಿ (ಆನ್ನುಲರ್ ಎಕ್ಲಿಪ್ಸ್‌), ಸೂರ್ಯಬಿಂಬದ ಹೊಳೆವ ಭಾಗ ಒಂದು ಬಳೆಯಂತೆ ಕಾಣುವುದರಿಂದ ಈ ಹೆಸರು ಬಂದಿದೆ. ಚಂದ್ರ ಗ್ರಹಣದಲ್ಲಿ ಕಂಕಣಗ್ರಹಣ ಸಂಭವಿಸುವುದಿಲ್ಲ.

ಸೂರ್ಯಚಂದ್ರರ ಗಾತ್ರದಲ್ಲಿನ ತೀವ್ರವ್ಯತ್ಯಾಸ ಸೂರ್ಯ-ಭೂಮಿ ದೂರದ ಅಗಾಧತೆ ಹಾಗೂ ಚಂದ್ರ-ಭೂಮಿ ಸಾಮೀಪ್ಯ ಈ ಕಾರಣಗಳಿಂದ ಅಪುರ್ವವಾಗಿ ಭೂಮಿಯ ಮೇಲಣ ಕೆಲವು ಪ್ರದೇಶಗಳಲ್ಲಿ ಕಂಕಣ ಗ್ರಹಣ ಕೇವಲ ಕೆಲವು ನಿಮಿಷಗಳ ಕಾಲ ಕಾಣಿಸಿಕೊಳ್ಳುವುದುಂಟು. ಯಾವುದೇ ಪ್ರದೇಶದಲ್ಲಿ ಸೂರ್ಯಗ್ರಹಣ ದರ್ಶನವೇ ಒಂದು ಅಪುರ್ವ ಘಟನೆ. ಅದರಲ್ಲೂ ಕಂಕಣಗ್ರಹಣ ತೀರ ವಿರಳ. 1971 ರಿಂದ 1990ರ ವರೆಗೆ ಸಂಭವಿಸಿದ ಹಾಗೂ ತದನಂತರ ಸಂಭವಿಸಲಿರುವ ಕಂಕಣಗ್ರಹಣಗಳ ವಿವರಗಳನ್ನು ಮುಂದಿನ ಯಾದಿಯಲ್ಲಿ ಬರೆದಿದೆ. ಇದೇ ಅವಧಿಯಲ್ಲಿ ಸಂಭವಿಸುವ ಪುರ್ಣ ಸೂರ್ಯಗ್ರಹಣಗಳ ಸಂಖ್ಯೆ 16. *