ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಂಪನಕಾರಿ (ಕಂಪಕ)

ವಿಕಿಸೋರ್ಸ್ದಿಂದ

ಕಂಪಕಾರಿ : ಕಾಂಕ್ರೀಟನ್ನು ಪೆಟ್ಟಿಸಲು ಉಪಯೋಗಿಸುವ ಸಾಧನ (ವೈಬ್ರೇಟರ್), ಕಾಂಕ್ರೀಟಿನ ಮೇಲ್ಭಾಗದಲ್ಲಿ, ಒಳಭಾಗದಲ್ಲಿ ಮತ್ತು ಸುತ್ತಲೂ ಉಪಯೋಗಿಸಲು ಮೂರು ಬಗೆಯ ಕಂಪಕ ಯಂತ್ರಗಳಿವೆ. ಇವನ್ನು ಉಪಯೋಗಿಸುವುದರಿಂದ ಕಾಂಕ್ರೀಟಿನ ಬಲ ಮತ್ತು ಘನಸಾಂದ್ರತೆ ಹೆಚ್ಚುತ್ತವೆ. ಚಿಕ್ಕಪುಟ್ಟ ಕೆಲಸಗಳಿಗೂ ದೊಡ್ಡ ಕೆಲಸಗಳಾದ ನೀರಾವರಿ ಕಟ್ಟಡದ ಮತ್ತು ಸೇತುವೆ ಕಟ್ಟಡಗಳಲ್ಲೂ ಇವನ್ನು ಬಳಸುತ್ತಾರೆ. ಆದರೆ ಈ ಯಂತ್ರಗಳ ಬೆಲೆ ಹೆಚ್ಚು ಇರುವುದರಿಂದ ಕಾಂಕ್ರೀಟಿಗೆ ಬೀಳುವ ವೆಚ್ಚ ಹೆಚ್ಚು. ಕಾಂಕ್ರೀಟನ್ನು ಕಟ್ಟಡದ ಕೆಲಸಗಳಲ್ಲಿ ಸುರಿದ ಕೂಡಲೆ ಕಂಪಕಾರಿಯನ್ನು ಮಧ್ಯದಲ್ಲಿ ಇಟ್ಟಾಗ ಕಾಂಕ್ರೀಟು ಕಂಪನಗಳ ಪ್ರಭಾವಕ್ಕೆ ಒಳಪಟ್ಟು ಚೆನ್ನಾಗಿ ಅಡಕವಾಗುತ್ತದೆ. ಕಾಂಕ್ರೀಟನ್ನು ರಸ್ತೆ ಕೆಲಸಗಳಲ್ಲಿ ಉಪಯೋಗಿಸಿದಾಗ ಕಂಪನಕಾರಿಗಳು ಮೇಲ್ಭಾಗದಿಂದ ಕಾಂಕ್ರೀಟನ್ನು ಗಟ್ಟಿಸುತ್ತವೆ. (ಜಿ.ಟ.ಜಿ.; ಎಂ.ಜಿ.ಎಸ್.)