ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಡು ಇಪ್ಪೆ

ವಿಕಿಸೋರ್ಸ್ದಿಂದ

ಕಾಡು ಇಪ್ಪೆ

  ಗಿಡ್ಡ ಕಾಂಡದ, ಹರಡಿದ ರೆಂಬೆಗಳ, ದೊಡ್ಡ ದುಂಡನೆಯ ಹಂದರದ, ಅಸ್ಥಿರ ಪರ್ಣವೃಕ್ಷ (ಬಾಸ್ಸಿಯ ಲ್ಯಾಟಿಫೊಲಿಯ). ತೊಗಟೆ ಬಣ್ಣ ಬೂದು. ಇದು ಉದ್ದುದ್ದನೆಯ ಸೀಳುಗಳಿಂದ ಕೂಡಿದೆ. ಮಧ್ಯ ಪ್ರದೇಶ, ಮಹಾರಾಷ್ಟ್ರ ಹಾಗೂ ಆಂಧ್ರದ ಕೆ¯ವು ಭಾಗಗಳಲ್ಲೂ ಒರಿಸ್ಸ, ಉತ್ತರ ಪ್ರದೇಶ, ಹಿಮಾಲಯ ತಪ್ಪಲಿನ ಕೆಲವು ಭಾಗಗಳಲ್ಲೂ ಇದರ ವ್ಯಾಪ್ತಿ ಇದೆ, ಮೈಸೂರು ದೇಶದಲ್ಲಿ ಬಲು ವಿರಳ.

 ಇದರ ಹೂಗಳು ಮಾರ್ಚ-ಏಪ್ರಿಲ್‍ನಲ್ಲಿ ಅರಳುತ್ತವೆ. ಹೂಗಳ ತಿರುಳು ಮೆತು, ರುಚಿ ಸಿಹಿ. ಇವು ಅರಳುತ್ತಿದ್ದಂತೆಯೇ ಉದುರುವುವು. ಇವನ್ನು ಹಸಿಯಾಗಿ ಅಥವಾ ಒಣಗಿಸಿ ಪುಡಿಮಾಡಿ ಹಿಟ್ಟಿನೊಂದಿಗೆ ರೊಟ್ಟಿಗೆ ಉಪಯೋಗಿಸುತ್ತಾರೆ. ಕ್ಷಾಮ ಕಾಲದಲ್ಲಿ ಜನರಿಗೆ ಇದರ ನೆರವು ಹೆಚ್ಚಿನದು. ಹೂಗಳಿಂದ ಮಧ್ಯಸಾರವನ್ನು ತಯಾರು ಮಾಡಬಹುದು. ಆಗಸ್ಟ್‍ನಲ್ಲಿ ಕಾಯಿ ಮಾಗುವುದು. ಬೀಜದಿಂದ ದೊರೆಯುವ ಮಂದವಾದ ಎಣ್ಣೆ ಕೃತಕ ಬೆಣ್ಣೆ (ಮಾರ್ಗರೈನ್), ಗ್ಲಿಸರಿನ್, ಸೋಪುಗಳ ತಯಾರಿಕೆಗಳಿಗೆ ಉಪಯುಕ್ತ. ಚೌಬೀನೆ ಉಪಯುಕ್ತವಾದರೂ ಹೂ, ಬೀಜಗಳ ಉಪಯುಕ್ತತೆ ಹೆಚ್ಚಿನದಾಗಿರುವುದರಿಂದ ಅದಕ್ಕಾಗಿ ಮರವನ್ನು ಉರುಳಿಸುವುದಿಲ್ಲ.

 

(ಎ.ಕೆ.ಎಸ್.)