ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾನ್ವೆಂಟ್

ವಿಕಿಸೋರ್ಸ್ದಿಂದ

ಕಾನ್ವೆಂಟ್

 ಕ್ರೈಸ್ತ ಸನ್ಯಾಸಿನಿಯರ ಮಠ ; ಇದೊಂದು ಧಾರ್ಮಿಕ ಸಂಸ್ಥೆ (ಕಾನ್ವೆಂಟ್). ದೇವರ ವಿಶೇಷ ಕರೆಗೆ ಓಗೊಟ್ಟ ಬಾಲಸಂನ್ಯಾಸಿನಿಯರು (ನನ್ಸ್) ತಮ್ಮ ಸರ್ವಸ್ವವನ್ನೂ ದೇವರಿಗೆ ಅರ್ಪಿಸಿ, ಮರಣ ಪರ್ಯಂತ ಬಡತನ, ವಿಧೇಯತೆ, ಮತ್ತು ವೈರಾಗ್ಯವನ್ನು ಪಾಲಿಸುವುದಾಗಿ ವ್ರತ ತೊಟ್ಟು ಧ್ಯಾನ ಮತ್ತು ಪರೋಪಕಾರದ ಜೀವನವನ್ನು ಈ ಸಂಸ್ಥೆಗಳಲ್ಲಿದ್ದು ನಡೆಸುತ್ತಾರೆ. ದೇವಸೇವೆ ಮತ್ತು ಭ್ರಾತೃಪ್ರೇಮಗಳೇ ಇವರ ಜೀವನದುದ್ದೇಶ. ಸಾಮಾನ್ಯವಾಗಿ ಈ ಸಂಸ್ಥೆಗಳು ಮತಪ್ರಸಾರ, ಅನಾಥಪೋಷಣೆ, ವಿದ್ಯಾಭ್ಯಾಸ, ಆಸ್ಪತ್ರೆ ನಡೆಸುವುದು-ಮುಂತಾದ ಕೆಲಸಗಳನ್ನು ನಿರ್ವಹಿಸುತ್ತವೆ.    

(ಎ.ಪಿ.ಆರ್.; ಡಿ.ಎಸ್.ಒ.)