ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿಯಾ ಗಿಣಿ

ವಿಕಿಸೋರ್ಸ್ದಿಂದ

ಕಿಯಾ ಗಿಣಿ

ಗಿಣಿಗಳನ್ನೊಳಗೊಂಡ ಸಿಟ್ಟಾಸಿಫಾರ್ಮೀಸ್û ಗಣದ ಸಿಟ್ಟಾಸಿಡೀ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಹಕ್ಕಿ. ಇದರ ವೈಜ್ಞಾನಿಕನಾಮ ನೆಸ್ಟರ್ ನೊಟಾಬಿಲಿಸ್. ಇದರ ತವರು ನ್ಯೂಜಿóಲೆಂಡ್. ಎತ್ತರವಾದ ಪರ್ವತ ಪ್ರದೇಶಗಳಲ್ಲಿನ ಕಲ್ಲುಪೊಟರೆಗಳಲ್ಲಿ ಗೂಡು ಕಟ್ಟಿಕೊಂಡು ವಾಸಿಸುತ್ತದೆ.

 ಇದು ಹೆಚ್ಚು ಕಡಿಮೆ ಕಾಗೆಯಷ್ಟು ದೊಡ್ಡದು. ಗಿಣಿಗಳಲ್ಲಿರುವಂತೆ ಬಾಗಿರುವ ಬಲವಾದ ಕೊಕ್ಕು ಇದೆ. ಮೈಬಣ್ಣ ಕಂದುಮಿಶ್ರಿತ ಹಸಿರು. ಗಿಣಿಗಳಂತೆಯೇ ಹಣ್ಣು, ಮೊಗ್ಗು, ಹುಳು, ಕೀಟ ಮುಂತಾದುವನ್ನು ತಿಂದು ಜೀವಿಸುತ್ತದೆ. ಚಳಿಗಾಲದಲ್ಲಿ ಪರ್ವತದ ಅತೀವ ಚಳಿಯನ್ನು ಸಹಿಸಲಾರದೆ ಕಣಿವೆಗಳಿಗೆ ಇಳಿದುಬರುತ್ತದೆ. ಆಗ ಕೆಲವೊಮ್ಮೆ ಕುರಿಗಳ ಬೆನ್ನನ್ನು ಕುಕ್ಕಿ ಮಾಂಸವನ್ನು ಬಗಿದು ತಿನ್ನುವುದುಂಟು. ಇದರಿಂದಾಗಿ ಮಾನವನಿಗೆ ಈ ಹಕ್ಕಿಯನ್ನು ಕಂಡರೆ ಆಗದು.

 

 (ಜೆ.ಎಂ.ಬಿ.)

(ಪರಿಷ್ಕರಣೆ: ಕೆ ಎಸ್ ನವೀನ್)