ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೈಗರ್, ಹ್ಯಾನ್ಸ್

ವಿಕಿಸೋರ್ಸ್ದಿಂದ

1882-1945. ಜರ್ಮನ್ ಭೌತವಿಜ್ಞಾನಿ. ಸಶಕ್ತ ಉಪಪರಮಾಣ್ವಕ ಕಣಗಳನ್ನು ಪತ್ತೆಹಚ್ಚುವಲ್ಲಿ ಬಳಸುವ ಗೈಗರ್ ಗುಣಕದ ಉಪಜ್ಞೆಕಾರ (1913) ಗುಣಕ,ಗೈಗರ್-ಮುಲ್ಲರ್. ಒಂದನೆಯ ಮಹಾಯುದ್ಧದ ಹಿಂದಿನ ವರ್ಷಗಳಲ್ಲಿ ಲಾರ್ಡ್ ರುದರ್ಫರ್ಡನ (1871-1937) ಸಮರ್ಥ ಸಹಾಯಕನಾಗಿ ಸೇವೆ ಸಲ್ಲಿಸಿದ ಮತ್ತು ಆ ಅವಧಿಯಲ್ಲಿ ಗೈಗರ್ ಗುಣಕವನ್ನು ನಿರ್ಮಿಸಿ ಪ್ರಸಿದ್ಧಿಗೆ ಬಂದ. ಯುದ್ಧಾರಂಭವಾದ (1914) ಬಳಿಕ ಸ್ವದೇಶವಾದ ಜರ್ಮನಿಗೆ ಮರಳಿ ಫಿರಂಗಿದಳದಲ್ಲಿ ಕೆಲಸ ಮಾಡಿದ. 1925ರಲ್ಲಿ ಕೀಲ್ ವಿಶ್ವವಿದ್ಯಾಲಯದಲ್ಲೂ 1929ರಲ್ಲಿ ಟ್ಯೂಬಿಂಜನ್ ವಿಶ್ವವಿದ್ಯಾಲಯದಲ್ಲೂ ಪ್ರಾಧ್ಯಾಪಕನಾಗಿ ನೇಮಕ ಪಡೆದ. ಪ್ರಖ್ಯಾತ ಆಂಗ್ಲ ವಿಜ್ಞಾನಿ ಜೇಮ್ಸ್‌ ಚಾಡ್ವಿಕ್ ಗೈಗರನ ಶಿಷ್ಯರಲ್ಲೊಬ್ಬ. 1882ರ ಸೆಪ್ಟೆಂಬರ್ 30ರಂದು ಜನನ, 1945 ಸೆಪ್ಟೆಂಬರ್ 24 ರಂದು ಮರಣ.