ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜ

ವಿಕಿಸೋರ್ಸ್ದಿಂದ

ಜ ಚ ವರ್ಗದ ಮೂರನೆಯ ಅಕ್ಷರ. ಕ್ರಿ.ಪೂ. ಮೂರನೆಯ ಶತಮಾನದ ಬ್ರಾಹ್ಮೀಲಿಪಿಯ ಈ ಅಕ್ಷರರೂಪ ಸುಮಾರು ಆರನೆಯ ಶತಮಾನದವರೆಗೆ ಹಾಗೆಯೆ ಮುಂದುವರಿಯುತ್ತದೆ, ಸಾತವಾಹನರ ಕಾಲದಲ್ಲಿ ಮೂರು ಅಡ್ಡರೇಖೆಗಳನ್ನು ಒಂದು ಲಂಬರೇಖೆಯೊಂದಿಗೆ ಸೇರಿಸಿರುವಂತೆ ಕಾಣುತ್ತದೆ. ಸುಮಾರು ಒಂಬತ್ತನೆಯ ಶತಮಾನದ ಸಮಯಕ್ಕೆ ಮೇಲಿನ ಅಡ್ಡರೇಖೆ ಸಣ್ಣದಾಗಿ ಕೆಳಗಿನ ಎರಡು ರೇಖೆಗಳು ಉದ್ದವಾಗುತ್ತವೆ ಮತ್ತು ಅಕ್ಷರದ ಅಗಲ ಹೆಚ್ಚಾಗುತ್ತದೆ. ಕ್ರಿ.ಶ. ಹನ್ನೊಂದನೆಯ ಶತಮಾನದಲ್ಲಿ ಈ ಅಕ್ಷರಕ್ಕೆ ಈಗಿರುವ ರೂಪ ಬರುತ್ತದೆ.

ಚಿತ್ರ : ಅಶೋಕ ಕ್ರಿ.ಪೂ. 3ನೆಯ ಶತಮಾನ ಶಾತವಾಹನ ಕ್ರಿ.ಶ. 2ನೆಯ ಶತಮಾನ ಕದಂಬ ಕ್ರಿ.ಶ. 5 ನೆಯ ಶತಮಾನ ಗಂಗ. ಕ್ರಿ.ಶ. 6ನೆಯ ಶತಮಾನ ಬಾದಾಮಿ ಚಾಳುಕ್ಯ, ಕ್ರಿ.ಶ. 6ನೆಯ ಶತಮಾನ ರಾಷ್ಟ್ರಕೂಟ ಕ್ರಿ.ಶ. 9ನೆಯ ಶತಮಾನ ಕಲ್ಯಾಣಿ ಚಾಳುಕ್ಯ ಕ್ರಿ.ಶ. 10ನೆಯ ಶತಮಾನ ಕಳಚುರಿ, ಹೊಯ್ಸಳ ಮತ್ತು ಸೇವುಣ ಕ್ರಿ.ಶ. 13ನೆಯ ಶತಮಾನ ವಿಜಯನಗರ ಕ್ರಿ.ಶ. 15ನೆಯ ಶತಮಾನ ಮೈಸೂರು ಅರಸರು ಕ್ರಿ.ಶ. 18ನೆಯ ಶತಮಾನ

ಈ ಅಕ್ಷರ ತಾಲವ್ಯ ಘೋಷ ಸ್ಪರ್ಶಧ್ವನಿಯನ್ನು ಸೂಚಿಸುತ್ತದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಇದರ ಉಚ್ಚಾರಣೆ ಸ್ಪರ್ಶಕ್ಕೆ ಬದಲಾಗಿ ಅನುಘರ್ಷವಾಗಿಯೂ ಇದೆ. (ಎ.ವಿ.ಎನ್.)