ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜರ್ಮೇನಿಯಮ್

ವಿಕಿಸೋರ್ಸ್ದಿಂದ

ಜರ್ಮೇನಿಯಮ್ ಆವರ್ತ ಕೋಷ್ಟಕದ (ಪೀರಿಯಾಡಿಕ್ ಟೇಬಲ್) ನಾಲ್ಕನೆಯ ಗುಂಪಿನಲ್ಲಿ ಸಿಲಿಕನ್ನಿನ ಕೆಳಗಿನ ಸ್ಥಾನದಲ್ಲಿರುವ ಧಾತು. ರಾಸಾಯನಿಕ ಪ್ರತೀಕ ಉe. ಪರಮಾಣು ಸಂಖ್ಯೆ 32. ಪರಮಾಣು ತೂಕ 72.60. ಎಲೆಕ್ಟ್ರಾನ್ ವಿನ್ಯಾಸ 2, 8, 18, 4. ಆವರ್ತ ಕೋಷ್ಟಕದ ನಿರ್ಮಾತೃ ಮೆಂಡಿಲೀಫ್, ಸಿಲಿಕನ್ ಕೆಳಗಿನ ಸ್ಥಾನವನ್ನು ಖಾಲಿ ಬಿಟ್ಟು, ಪರಮಾಣು ತೂಕದ ಅನುಕ್ರಮದಲ್ಲಿ ಆ ಸ್ಥಾನಕ್ಕೆ ಹೊಂದಿಕೊಳ್ಳುವ ಒಂದು ಧಾತು ಪತ್ತೆಯಾಗುವುದೆಂದು, 1871ರಲ್ಲಿ ಭವಿಷ್ಯ ನುಡಿದಿದ್ದ. ಅಲ್ಲದೆ ಆ ಧಾತುವಿನ ಪರಮಾಣು ತೂಕ ಸುಮಾರು ಇಷ್ಟೇ ಇರುವುದೆಂದೂ ಅದರ ಮತ್ತು ಅದರ ಸಂಯುಕ್ತಗಳ ಗುಣಲಕ್ಷಣಗಳು ಹೆಚ್ಚು ಕಡಿಮೆ ಇಂತಿಂಥವೇ ಎಂದೂ ಊಹೆ ಮಾಡಿ ಹೇಳಿ, ಆ ಧಾತುವನ್ನು ಏಕಸಿಲಿಕನ್ ಎಂದು ಕೂಡ ಹೆಸರಿಸಿದ್ದ. 15 ವರ್ಷಗಳ ಬಳಿಕ (1886) ಅವನ ಭವಿಷ್ಯ ನಿಜವಾಯಿತು. ಆ ವರ್ಷ ಜರ್ಮನಿಯ ಕ್ಲೆಮೆನ್ಸ್ ಅಲೆಕ್ಸಾಂಡರ್ ವಿಂಕ್ಲರ್ (1838-1904) ಎಂಬ ವಿಜ್ಞಾನಿ ಈ ಧಾತುವನ್ನು ಆವಿಷ್ಕರಿಸಿ ತನ್ನ ಪಿತೃಭೂಮಿಯ ಗೌರವಾರ್ಥವಾಗಿ ಅದಕ್ಕೆ ಜರ್ಮೇನಿಯಮ್ ಎಂದು ಹೆಸರಿಟ್ಟ.

ಭೂಮಿಯಲ್ಲಿ ಅತ್ಯಂತ ವಿರಳವಾಗಿ ಹಂಚಿಕೊಂಡಿರುವ ಧಾತುಗಳಲ್ಲಿ ಜರ್ಮೇನಿಯಮ್ ಒಂದು. ಭೂಮಿಯ ಹೊರಚಿಪ್ಪಿನಲ್ಲಿ, ತೂಕದ ಪ್ರಕಾರ, ಒಂದು ಮಿಲಿಯನ್ನಿನಲ್ಲಿ ನಾಲ್ಕು ಭಾಗ ಮಾತ್ರ ಜರ್ಮೇನಿಯಮ್ ಇದೆ, ಅಷ್ಟೆ. ಗಣನೀಯ ಪರಿಣಾಮದಲ್ಲಿ ಈ ಧಾತು ಕಂಡುಬರುವ ಖನಿಜಗಳೇ ಅಪರೂಪ. ಆರ್ಜಿರೊಡೈಟ್ (4ಂg2S.ಉeS2) ಮತ್ತು ಜರ್ಮನೈಟ್ (6ಅuS.ಉeS2) ಅವುಗಳಲ್ಲಿ ಮುಖ್ಯವಾದುವು. ಜರ್ಮೇನಿಯಮನ್ನು ತಯಾರಿಸುವುದು, ಸಾಮಾನ್ಯವಾಗಿ ಬಿಟುಮಿನಸ್ ಕಂದು ಕಲ್ಲಿದ್ದಲಿನ ಬೂದಿಯಿಂದ ಹಾಗೂ ಸತುವಿನ ಅದುರಿನಿಂದ ಸತುವನ್ನು ತೆಗೆದ ಬಳಿಕ ಉಳಿಯುವ ನಿರುಪಯುಕ್ತ ಪದಾರ್ಥಗಳಿಂದ. ಆಕರ ಪದಾರ್ಥದಲ್ಲಿನ ಜರ್ಮೇನಿಯಮನ್ನು ಆವಿಶೀಲವಾದ ಅದರ ಟೆಟ್ರಕ್ಲೋರೈಡಾಗಿ ಪರಿವರ್ತಿಸಿ, ಅದನ್ನು ಆಸವಿಸುವ ಮೂಲಕ ಇತರ ಧಾತುಗಳಿಂದ ಅದನ್ನು ಪ್ರತ್ಯೇಕಿಸುತ್ತಾರೆ. ತರುವಾಯ ಅದನ್ನು ಡೈಆಕ್ಸೈಡಾಗಿ ಪರಿವರ್ತಿಸಿ, ಹೈಡ್ರೊಜನ್ ಅಥವಾ ಕಾರ್ಬನ್ನಿನಿಂದ ಅಪಕರ್ಷಿಸಿ ಧಾತುವನ್ನು ತಯಾರಿಸುತ್ತಾರೆ. ಜರ್ಮೇನಿಯಮ್, ಬೆಳ್ಳಿಯಂತೆ ಬೆಳ್ಳನೆಯ ಹೊಳಪಿರುವ ಗಡುಸಾದ ಭಿದುರಲೋಹ. ಸಾಂದ್ರತೆ 5. 46. ದ್ರವದ ಬಿಂದು 958.50ಅ. ನೈಸರ್ಗಿಕ ಜರ್ಮೇನಿಯಮಿನಲ್ಲಿ 74,72 ಮತ್ತು 70 ತೂಕಗಳ ಐಸೊಟೋಪುಗಳು ಪ್ರಧಾನವಾದವು. ಇವು ಒಟ್ಟು 85% ರಷ್ಟಾಗುತ್ತದೆ. ಉಳಿದ 15% ಭಾಗ 73 ಮತ್ತು 76 ತೂಕಗಳ ಐಸೊಟೋಪುಗಳು. ಹೈಡ್ರೊಕ್ಲೋರಿಕ್ ಮತ್ತು ಸಾರರಿಕ್ತ ಸಲ್ಫ್ಯೂರಿಕ್ ಆಮ್ಲಗಳು ಜರ್ಮೇನಿಯಮ್ಮಿನ ಮೇಲೆ ವರ್ತಿಸುವುದಿಲ್ಲ. ಉತ್ಕರ್ಷಕ ಆಮ್ಲಗಳು, ಅಂದರೆ ಡೈಆಕ್ಸೈಡಾಗಿ ಪರಿವರ್ತಿಸುತ್ತವೆ. ಆಲ್ಕಲಿ ಲೋಹಗಳ ಹೈಡ್ರಾಕ್ಸೈಡುಗಳಲ್ಲಿ ಜರ್ಮೇನಿಯಮ್ ನಿಧಾನವಾಗಿ ಕರಗುವುದು. ಸುಮಾರು 2000ಅ. ಅಥವಾ 2500ಅ. ಉಷ್ಣತೆಯಲ್ಲಿ ಅದು ಕ್ಲೋರಿನ್ನಿನೊಂದಿಗೆ ಮತ್ತು ಗಂಧಕದೊಂದಿಗೆ ನೇರವಾಗಿ ಸಂಯೋಗಗೊಳ್ಳುತ್ತದೆ.

ಆವರ್ತ ಕೋಷ್ಟಕದಲ್ಲಿ ಅದರ ಕೆಳಗಿರುವ ತವರ ಮತ್ತು ಸೀಸಗಳಂತೆ ಜರ್ಮೇನಿಯಮ್ ಕೂಡ ದ್ವಿವೇಲೆನ್ಸಿಯ ಹಾಗೂ ಚತುರ್ವೇಲಿನ್ಸೀಯ ಸಂಯಕ್ತಗಳನ್ನು ನೀಡುವುದಾದರೂ ದ್ವಿವೇಲೆನ್ಸಿಯ ಸಂಯುಕ್ತಗಳು ಬಹುಮಟ್ಟಿಗೆ ಅಸ್ಥಿರ. ಅವು ಸುಲಭವಾಗಿ ಚತುರ್ವೇಲೆನ್ಸೀಯ ಸಂಯುಕ್ತಗಳಾಗಿ ಪರಿವರ್ತಿತವಾಗುವುದರಿಂದ ಅವು ಅಪಕರ್ಷಣಕಾರಿಗಳಾಗಿ ವರ್ತಿಸುತ್ತವೆ. ಅಸ್ಥಿರವಾದ ಜರ್ಮನಸ್ ಆಕ್ಸೈಡು (ಉeಔ) ಕಪ್ಪು ಬಣ್ಣದ ಪುಡಿ. ರಾಸಾಯನಿಕವಾಗಿ ಅದು ಉಭಯವರ್ತಿ (ಆಂಫೊಟೆರಿಕ್). ಹೈಡ್ರೊಹ್ಯಾಲಿಕ್ ಆಮ್ಲಗಳಲ್ಲಿ ಕರಗಿ ಜರ್ಮನಸ್ ಹ್ಯಾಲೈಡುಗಳನ್ನು (ಉeಘಿ2) ಉತ್ಪತ್ತಿ ಮಾಡುತ್ತದೆ. ಜರ್ಮೇನಿಯಮ್ ಡೈಆಕ್ಸೈಡ್ (ಉeಔ2) ಬಿಳಿಯ ಪುಡಿ. ಅದೂ ಉಭಯವರ್ತಿಯೇ, ಆದರೂ ಪ್ರಧಾನವಾಗಿ ಆಮ್ಲೀಯ. ದೃಗ್‍ವೈಜ್ಞಾನಿಕ ಉಪಕರಣದಲ್ಲಿ ಬೇಕಾಗುವ ವಿಶೇಷ ಗಾಜಿನ ತಯಾರಿಕೆಯಲ್ಲಿ ಇದರ ಉಪಯೋಗ ಉಂಟು. ಜರ್ಮೇನಿಯಮ್ ಟೆಟ್ರಕ್ಲೋರೈಡ್ ಬಹುಮಟ್ಟಿಗೆ ಸಿಲಿಕನ್ ಟಿಟ್ರಕ್ಲೋರೈಡಿನಂತೆ ವರ್ತಿಸುತ್ತದೆ. ಜರ್ಮೇನಿಯಮಿನ ಹೈಡ್ರೈಡುಗಳಲ್ಲಿ ಮಿಥೇನಿಗೆ ಸದೃಶವಾದ ಉeಊ4 ಮಾತ್ರವಲ್ಲದೆ ಈಥೇನ್ ಮತ್ತು ಪ್ರೊಪೇನುಗಳಿಗೆ ಸದೃಶವಾದ ಉeಊ6 ಮತ್ತು ಉe3ಊ8 ಸಹ ಇವೆ ಎಂಬುದು ಗಮನಾರ್ಹ. ಇತ್ತೀಚಿನವರೆಗೂ ಜರ್ಮೇನಿಯಮಿಗೆ ಹೆಚ್ಚಿನ ಉಪಯೋಗಗಳೇ ಇರಲಿಲ್ಲ. ಅದು ಅರ್ಧವಾಹಕವಾಗಿ ವರ್ತಿಸುವುದು ತಿಳಿದು ಬಂದ ಬಳಿಕ ಈಗ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅದಕ್ಕೆ ವಿಶೇಷ ಪ್ರಾಶಸ್ತ್ಯ ಬಂದಿದೆ. ವಾಹಕವೂ ಅಲ್ಲ, ಅವಾಹಕವು ಅಲ್ಲ ಎರಡಕ್ಕೂ ಮಧ್ಯವರ್ತಿ ಗುಣಗಳಿರುವ ಪದಾರ್ಥಗಳಗೆ ಅರ್ಧವಾಹಕಗಳೆಂದು ಹೆಸರು. ಜರ್ಮೇನಿಯಮಿಗೆ ಈ ಗುಣವಿರುವುದು ತಿಳಿದುಬಂದುದರ ಪರಿಣಾಮವಾಗಿ ಟ್ರಾನ್ಸಿಸ್ಟರುಗಳ ತಯಾರಿಕೆ ಸಾಧ್ಯವಾಯಿತು. ಅಷ್ಟು ಸುರಕ್ಷಿತವಲ್ಲದ ಮತ್ತು ಹೆಚ್ಚಿಗೆ ಸ್ಥಳ ಆಕ್ರಮಿಸುವ ರೇಡಿಯೋ ಕವಾಟಗಳ ಬದಲು ಅತ್ಯಲ್ಪ ಗಾತ್ರದ ಈ ಟ್ರಾನ್ಸಿಸ್ಟರುಗಳನ್ನು ಬಳಸಬಹುದಾದ್ದರಿಂದ ರೇಡಿಯೋಕ್ಷೇತ್ರದಲ್ಲಿ ಮತ್ತು ಕಂಪ್ಯೂಟರ್‍ಕ್ಷೇತ್ರದಲ್ಲಿ ಅಸಾಧಾರಣ ಪ್ರಗತಿ ಸಾಧ್ಯವಾಗಿದೆ. ಅರ್ಧವಾಹಕ ಉಪಕರಣಗಳಲ್ಲಿ ಬಳಸುವ ಜರ್ಮೇನಿಯಮ್ ಅತ್ಯಂತ ಶುದ್ಧವಾಗಿರಬೇಕು. ಹತ್ತು ಮಿಲಿಯನ್ ಜರ್ಮೇನಿಯಮ್ ಪರಮಾಣುಗಳಲ್ಲಿ ಯಾವುದೇ ಅಶುದ್ಧತೆಯ ಒಂದು ಪರಮಾಣವಿದ್ದರೂ ಅದರ ವಾಹಕತೆ ಹೆಚ್ಚುವ ಸಂಭವವಿರುವುದರಿಂದ ಅದು ಉಪಯೋಗಕ್ಕೆ ಬರುವುದಿಲ್ಲ. ಅಷ್ಟು ಪರಿಶುದ್ಧವಾದ ಜರ್ಮೇನಿಯಮನ್ನು ವಲಯ ದ್ರವನ ವಿಧಾನದಿಂದ (eóÉೂೀನ್ ಮೆಲ್ಟಿಂಗ್) ತಯಾರಿಸುತ್ತಾರೆ. (ಜೆ.ಆರ್.ಎಲ್.)