ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೂಬ 1

ವಿಕಿಸೋರ್ಸ್ದಿಂದ

ಜೂಬ 1 - ಉತ್ತರ ಆಫ್ರಿಕದ ಇಬ್ಬರು ರಾಜರು. ಜೂಬ I : ಕ್ರಿ.ಪೂ.ಸು. 85-46. ನ್ಯುಮಿಡೀಯದ ರಾಜ. ರೋಮನ್ ಚಕ್ರಾಧಿಪತ್ಯದ ನಾಯಕರಾದ ಪಾಂಪಿ ಮತ್ತು ಸೀಸóರನ ನಡುವೆ ನಡೆದ ಅಂತರ್ಯುದ್ಧದಲ್ಲಿ ಪಾಂಪಿಯ ಪಕ್ಷ ವಹಿಸಿದ್ದ. ಈತ ಸೀಸóರನ ಕಟುವಿರೋಧಿಯಾಗಿದ್ದ. ಈತ ರೋಮಿಗೆ ಹೋಗಿದ್ದಾಗ ಸೀ¸óÀರನಿಂದ ಇವನಿಗೆ ಆದ ಅವಮಾನವೂ ನ್ಯುಮಿಡೀಯವನ್ನು ರೋಮನ್ ಸಾಮ್ರಾಜ್ಯದ ಪ್ರಾಂತ್ಯವನ್ನಾಗಿ ಮಾಡಬೇಕೆಂದು ಸೀ¸óÀರನ ದಂಡನಾಯಕ ಕ್ಯೂರೀಯೊ ನೀಡಿದ ಸಲಹೆಯೂ (ಕ್ರಿ.ಪೂ. 50) ಇವನ ವಿರೋಧಕ್ಕೆ ಕಾರಣಗಳು. ಕ್ರಿ.ಪೂ. 49ರಲ್ಲಿ ಕ್ಯೂರೀಯೊ ಪಾಂಪಿಯ ಕಡೆಯವರನ್ನು ಸದೆಬಡಿಯಲು ಆಫ್ರಿಕಕ್ಕೆ ದಂಡೆತ್ತಿಬಂದ. ಆಗ ಜೂಬ ಬಹು ದೊಡ್ಡ ಸೈನ್ಯದೊಡನೆ ಪಾಂಪಿಯ ನೆರವಿಗೆ ಹೋಗಿ ಕ್ಯೂರೀಯೊನನ್ನು ಸೋಲಿಸಿ ಕೊಂದ. ಆದರೆ ಕ್ರಿ.ಪೂ. 46ರಲ್ಲಿ ಸಿ¸óÀರನೊಂದಿಗೆ ಧ್ಯಾಪ್ಸಸ್‍ನಲ್ಲಿ ನಡೆದ ನೇರಯುದ್ಧದಲ್ಲಿ ಪಾಂಪಿಯ ಪಕ್ಷದವರು ಸೋಲಿಗೆ ಗುರಿಯಾದರು. ಸೋತ ಸೈನ್ಯದೊಡನಿದ್ದ ಜೂಬ ದೇಶಭ್ರಷ್ಟನಾಗಿ ಅಲೆಯಬೇಕಾಯಿತು. ಕೊನೆಗೆ ಜುಗುಪ್ಸೆಗೊಂಡು, ತನ್ನನ್ನು ಕೊಲ್ಲುವಂತೆ ಗುಲಾಮನೊಬ್ಬನನ್ನು ಕೇಳಿಕೊಂಡು ಮರಣವನ್ನಪ್ಪಿದ.

ಜೂಬ II : ಕ್ರಿ.ಪೂ.ಸು. 50-ಕ್ರಿ.ಶ. 24. ಒಂದನೆಯ ಜೂಬನ ಮಗ. ಸೀ¸óÀರ್ ಉತ್ತರ ಆಫ್ರಿಕದಲ್ಲಿ ಪಡೆದ ಜಯದ (ಕ್ರಿ.ಪೂ. 46) ಕುರುಹಾಗಿ, ಆಗ ಶಿಶುವಾಗಿದ್ದ ಜೂಬನನ್ನು ಅವನು ರೋಮಿಗೆ ಕೊಂಡೊಯ್ದ. ಇಟಲಿಯಲ್ಲಿ ಇವನಿಗೆ ಶಿಕ್ಷಣ ದೊರೆಯಿತು. ರೋಮನ್ ಚಕ್ರವರ್ತಿ ಆಗಸ್ಟಸನ ಸ್ನೇಹವೂ ಒದಗಿತು. ಕ್ರಿ.ಪೂ. 29ರಲ್ಲಿ ಈತನನ್ನು ನ್ಯುಮಿಡೀಯದ ರಾಜನನ್ನಾಗಿ ಮಾಡಲಾಯಿತು. ಅನಂತರ ಇವನು ಮಾರಿಟೇನೀಯಕ್ಕೆ ವರ್ಗವಾದ (25). ಇವನು ಅದನ್ನು ತನ್ನ ಅಂತ್ಯಕಾಲದವರೆಗೂ ಆಳಿದ.

ಈತ ಮಾರ್ಕ್ ಆಂಟೊನಿ ಮತ್ತು ಕ್ಲೀಯೊಪಾಟ್ರಳ ಮಗಳಾದ ಕ್ಲೀಯೊ ಪಾಟ್ರ ಸಿಲೀನೀಯನ್ನು ಮದುವೆಯಾಗಿದ್ದ. ಅವಳು ಇವನ ಮೇಲೆ ಹೆಚ್ಚು ಪ್ರಭಾವ ಬೀರಿದಳು. ಇವನು ಇತಿಹಾಸ, ಭೂಗೋಳಶಾಸ್ತ್ರ, ವ್ಯಾಕರಣ, ರಂಗಭೂಮಿ ಮುಂತಾದ ಅನೇಕ ವಿಷಯಗಳನ್ನು ಕುರಿತು ಗ್ರೀಕ್ ಭಾಷೆಯಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾನೆ. (ಡಿ.ಎಸ್.ಜೆ.)