ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೆಸ್ನರ್, ಕಾನ್ರಾಡ್ ಫಾನ್

ವಿಕಿಸೋರ್ಸ್ದಿಂದ

ಜೆಸ್ನರ್, ಕಾನ್ರಾಡ್ ಫಾನ್ 1516-1565. ಸ್ವಿಟ್‍ಜóರ್‍ಲೆಂಡಿನ ಪ್ರಸಿದ್ದ ಪ್ರಕೃತಿ ವಿe್ಞÁನಿ, ವೈದ್ಯ ಹಾಗೂ ಭಾಷಾಶಾಸ್ತ್ರಜ್ಞ. 1516ರ ಮಾರ್ಚ್ 16ರಂದು ಜೂóರಿಕಿನಲ್ಲಿ ಜನಿಸಿದ. ಸ್ಟ್ರ್ಯಾಸ್‍ಬರ್ಗ್, ಬೂರ್ಷ್ ಮತ್ತು ಪ್ಯಾರಿಸ್‍ಗಳಲ್ಲಿ ಈತನ ವಿದ್ಯಾಭ್ಯಾಸ ನಡೆಯಿತು. ಅನಂತರ ಜೂóರಿಕಿನಲ್ಲಿ ಕೊಂಚಕಾಲ ಉಪಾಧ್ಯಾಯನಾಗಿದ್ದ. 1541ರಲ್ಲಿ ಬಾಸೆಲ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪದವಿ ಪಡೆದು ಜೂóರಿಕಿನಲ್ಲಿ ವೈದ್ಯವೃತ್ತಿ ಕೈಗೊಂಡ. ವೈದ್ಯನಾಗಿದ್ದರೂ ಬೇರೆ ವಿಷಯಗಳ ಬಗ್ಗೆ ಆಸಕ್ತನಾಗಿದ್ದ. ರೋಮನ್ ಮತ್ತು ಗ್ರೀಕ್ ಆದರ್ಶಗಳ ಪ್ರಭಾವಕ್ಕೆ ಒಳಗಾಗಿ, ಯೂರೋಪಿನಲ್ಲಿ ಆಗ ನಡೆಯುತ್ತಿದ್ದ ಸಾಹಿತ್ಯ ಮತ್ತು ಕಲೆಗಳ ಪುನರುಜ್ಜೀವನ ಕಾರ್ಯದಲ್ಲೂ ನಿರತನಾಗಿದ್ದ. 1551-1558ರ ಅವಧಿಯಲ್ಲಿ ಗ್ರಂಥಾಲಯದ ಒಂದು ಬೃಹತ್ ಕೈಪಿಡಿಯನ್ನು (ಯೂನಿವರ್ಸಲ್ ಲೈಬ್ರರಿ) ರಚಿಸಿ, ಆವರೆಗೆ ದೊರೆತಿದ್ದ ಹೀಬ್ರೂ, ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳ ಪುಸ್ತಕಗಳನ್ನು ಕುರಿತು ಸಂಕ್ಷಿಪ್ತ ಟಿಪ್ಪಣಿಗಳನ್ನು ಬರೆದ. ರೋಮನ್ ವಿದ್ವಾಂಸ ಹಾಗೂ ವಿಶ್ವಕೋಶ ನಿರ್ಮಾತೃ ಪ್ಲಿನೀ (ಕ್ರಿ. ಶ. 23-79) ಎಂಬವನಂತೆಯೇ ಬಹುಮುಖ ಪ್ರತಿಭಾವಂತನಾಗಿದ್ದುದರಿಂದ ಜೆಸ್ನರನ್ನು ಜರ್ಮನಿಯ ಪ್ಲಿನೀ ಎಂದು ಕರೆಯುತ್ತಿದ್ದುದುಂಟು. ಸ್ವಿಟ್‍ಜûರ್‍ಲೆಂಡಿನ ಲೋಜಾನ್ ಎಂಬಲ್ಲಿ ಗ್ರೀಕ್ ಭಾಷೆಯ ಪ್ರಾಧ್ಯಾಪಕನಾಗಿಯೂ ಜೂóರಿಕಿನಲ್ಲಿ ತತ್ತ್ವಶಾಸ್ತ್ರ ಪ್ರಾಧ್ಯಾಪಕನಾಗಿಯೂ ಸೇವೆಸಲ್ಲಿಸಿದ್ದ.

ಪರ್ವತಾರೋಹಣದಲ್ಲೂ ಈತನಿಗೆ ಒಲವಿತ್ತು. ಪರ್ವತಗಳನ್ನೇರುವಾಗ ಅಲ್ಲಿನ ಸಸ್ಯಗಳ ಹಾಗೂ ಪ್ರಾಣಿಗಳ ಬಗ್ಗೆ ಆಸಕ್ತನಾಗಿ ವಿವಿಧ ಬಗೆಯ ಸಸ್ಯಗಳನ್ನು ಸಂಗ್ರಹಿಸತೊಡಗಿದ. ಹಿಂದಿನವರಿಗೆ ಗೊತ್ತಿಲ್ಲದಿದ್ದ ಸುಮಾರು 500ಕ್ಕೂ ಹೆಚ್ಚು ಸಸ್ಯಗಳನ್ನು ಹೀಗೆ ಸಂಗ್ರಹಿಸಿದ್ದ. ಯೂನಿವರ್ಸಲ್ ಲೈಬ್ರಿ ಗ್ರಂಥರಚನೆಯ ಕಾಲದಲ್ಲೇ ಅದುವರೆಗೆ ತಿಳಿದಿದ್ದ ಪ್ರಾಣಿಗಳನ್ನು ವರ್ಣಿಸಿ ಅವನ್ನು ಗುರುತಿಸುವ ಬಗ್ಗೆ ಹಿಸ್ಟೋರಿಯ ಅನಿಮೇಲಿಯಮ್ ಎಂಬ ಬೃಹತ್ ಗ್ರಂಥವೊಂದನ್ನು ರಚಿಸಿದ ಜೀವಿಗಳ ವರ್ಗೀಕರಣಕ್ಕೆ ನಾಂದಿಯಾಗುವಂಥ ಕೃತಿ ಇದಾಗಿದ್ದರೂ ಆಗಿನ ಕಾಲದ ಪ್ರಕೃತಿತಜ್ಞರೆಲ್ಲ ಬರಿಯ ವಿವರಣಾತ್ಮಕ ವಿಷಯಗಳಲ್ಲೇ ತೊಡಗಿದ್ದುದರಿಂದ ಜೆಸ್ನರನ ಪುಸ್ತಕ ಅವರ ಗಮನ ಸೆಳೆಯಲಿಲ್ಲ. ಈತನ ಕಾರ್ಯದ ಮಹತ್ತು ಬೆಳಕಿಗೆ ಬರಬೇಕಾದರೆ ಸುಮಾರು ಒಂದು ಶತಮಾನವೇ ಆಗಬೇಕಾಯಿತು. ಜೆಸ್ನರ್ ಮಾಡಿದ ಇನ್ನೊಂದು ಮಹತ್ಕಾರ್ಯವೆಂದರೆ ಅರಿಸ್ಟಾಟಲ್ ಮುಂತಾದವರು ಜೀವಿಗಳನ್ನು ಕುರಿತು ಅಭ್ಯಾಸ ನಡೆಸಿದುದನ್ನು ತನ್ನ ಸಮಕಾಲೀನ ಸಸ್ಯ ಮತ್ತು ಪ್ರಾಣಿವಿe್ಞÁನಗಳಿಗೆ ಲೇಖನ, ಪುಸ್ತಕಗಳ ಮೂಲಕ ತಿಳಿಯಪಡಿಸಿದ್ದು. ಇದರಿಂದಾಗಿ ಜೆಸ್ನರ್ ವಿe್ಞÁನಸಂಬಂಧವಾಗಿ ಬರೆಯುತ್ತಿದ್ದ ಅಂದಿನ ಲೇಖಕರಲ್ಲಿ ಒಬ್ಬನೆನಿಸಿದ್ದಾನೆ.

ಫಾಸಿಲುಗಳನ್ನು ಸಂಗ್ರಹಿಸಿ, ಅವುಗಳ ಚಿತ್ರಗಳನ್ನು ಬಿಡಿಸಿದವರಲ್ಲಿ ಮೊಟ್ಟಮೊದಲಿನವನೆಂಬ ಕೀರ್ತಿಗೂ ಜೆಸ್ನರ್ ಭಾಜನನಾಗಿದ್ದಾನೆ. ಆದರೆ ಫಾಸಿಲುಗಳು ಹಿಂದೆ ಬದುಕಿದ್ದ ಜೀವಿಗಳ ಅವಶೇಷಗಳು ಎಂಬುದನ್ನು ಈತ ಮನಗಾಣಲಿಲ್ಲ. ಇವು ಕೇವಲ ಶಿಲೆಗಳ ತುಂಡುಗಳೆಂದೇ ಈತ ಭಾವಿಸಿದ್ದ. ತನ್ನ ಜೀವನದ ಕೊನೆಯವರೆಗೂ ವೈದ್ಯನಾಗಿಯೇ ಸೇವೆಸಲ್ಲಿಸುತ್ತಿದ್ದ ಜೆಸ್ನರ್, 1565ರಲ್ಲಿ ಜûೂರಿಕ್ ನಗರದಲ್ಲಿ ತಲೆದೋರಿದ ಪ್ಲೇಗ್ ವ್ಯಾಧಿಗೆ ತುತ್ತಾಗಿ ರೋಗಿಗಳ ಶುಶ್ರೂಷೆಯಲ್ಲಿ ನಿರತನಾಗಿದ್ದುಕೊಂಡೇ, ಅದೇ ವರ್ಷ ಡಿಸೆಂಬರ್ 13ರಂದು ಅಸುನೀಗಿದ. (ಕೆ.ಎಸ್.ಎನ್‍ಎ.)