ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೇಕಬ್, ನೆಓಮೈ ಎಲಿಂಗ್ಟನ್

ವಿಕಿಸೋರ್ಸ್ದಿಂದ

ಜೇಕಬ್, ನೆಓಮೈ ಎಲಿಂಗ್‍ಟನ್ 1889-1964. ಇಂಗ್ಲಿಷ್ ಕಾದಂಬರಿಗಾರ್ತಿ. ಯಾರ್ಕ್‍ಷೈರಿನ ರಿಪನ್‍ನಲ್ಲಿ ಹುಟ್ಟಿ ಮಿಡಲ್ಸ್‍ಬರೋ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದಳು. ತನ್ನ ಹದಿನೈದನೆಯ ವರ್ಷದಲ್ಲೇ ಉಪಾಧ್ಯಾಯಿನಿಯಾಗಿ ಕೆಲಸ ಆರಂಭಿಸಿದಳು. ಮೊದಲ ಮಹಾಯುದ್ದದಲ್ಲಿ ಮದ್ದಿನ ಕಾರ್ಖಾನೆಯಲ್ಲಿ ಕೆಲಸ ಮಾಡಿದುದರ ಫಲವಾಗಿ ಕ್ಷಯರೋಗಕ್ಕೆ ತುತ್ತಾಗಿ ಮೂರು ವರ್ಷ ಆಸ್ಪತ್ರೆಯಲ್ಲಿದ್ದಳು. ಅನಂತರ ನಟಿಯಾಗಿ ಹೆಸರುಗಳಿಸಿ, ಆರೋಗ್ಯದ ನಿಮಿತ್ತ ಇಟಲಿಯಲ್ಲಿ 1939ರವರೆಗೂ ಇದ್ದಳು. ಜೇಕಬ್ ಅಷರ್ (1926); ದಿ ಲೋಡೆಡ್ ಸ್ಟಿಕ್ (1935); ಬ್ಯಾರನ್ ಮೆಟಲ್ (1937); ಸ್ಟ್ರಾಸ್ ಇನ್ ಆ್ಯಂಬರ್ (1938); ದಿ ಕ್ಯಾಪ್ ಆಫ್ ಯೂತ್ (1941); ಹ್ವೈಟ್ ವುಲ್ (1944); ಪ್ಯಾಸೇಜ್ ಪೆರಿಲಸ್ (1948); ಮಾರ್ನಿಂಗ್ ವಿಲ್ ಕಮ್ (1953)-ಇವು ಈಕೆಯ ಕೆಲವು ಕಾದಂಬರಿಗಳು. ಈಕೆ ಆತ್ಮಕಥೆಯ ಮಾಲೆಯಲ್ಲಿ ಅನೇಕ ಪುಸ್ತಕಗಳನ್ನೂ ಮೇರಿ ಲಾಯ್ಡಳ ಜೀವನ ಚರಿತ್ರೆಯೊಂದನ್ನೂ ಬರೆದಿದ್ದಾಳೆ. (ಎಚ್.ವಿ.ಎಸ್.)