ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟರ್ನರ್, ಷ್ಯಾರನ್

ವಿಕಿಸೋರ್ಸ್ದಿಂದ

ಟರ್ನರ್, ಷ್ಯಾರನ್ 1768-1847. ಇಂಗ್ಲಿಷ್ ಇತಿಹಾಸಕಾರ. ಲಂಡನಿನಲ್ಲಿ ಜನಿಸಿದ. ಲಂಡನ್ ನಗರದಲ್ಲಿ ಸಾಲಿಸಿಟರ್ (ಸಲಹೆ ವಕೀಲ) ಆಗಿ ಕೆಲಸಮಾಡಿ 1829ರಲ್ಲಿ ನಿವೃತ್ತನಾದ. ಹಿಸ್ಟೊರಿ ಆಫ್ ದಿ ಆಂಗ್ಲೋ-ಸ್ಯಾಕ್ಸನ್ಸ್ (1799-1805) ಎಂಬ ನಾಲ್ಕು ಸಂಪುಟಗಳ ಸಂಶೋಧನಾತ್ಮಕ ಇತಿಹಾಸಗ್ರಂಥದಿಂದ ಪ್ರಸಿದ್ಧನಾದ. ಈ ವಿಷಯದ ಮೇಲೆ ಉತ್ತಮ ದರ್ಜೆಯ ಕೃತಿಯೆಂದು ಇದು ಅನೇಕ ವರ್ಷಗಳ ಕಾಲ ಪ್ರಸಿದ್ಧವಾಗಿತ್ತು. ಹಿಸ್ಟೊರಿ ಆಫ್ ಇಂಗ್ಲೆಂಡ್ (1814-29), ಸೇಕ್ರೆಡ್ ಹಿಸ್ಟೊರಿ ಆಫ್ ದಿ ವಲ್ರ್ಡ್ (1832) ಎಂಬವು ಟರ್ನರನ ಇತರ ಕೃತಿಗಳು. ಟರ್ನರನ ಪಾಂಡಿತ್ಯ ಹಾಗೂ ಲಲಿತವಾದ ಶೈಲಿ ಈ ಕೃತಿಗಳಲ್ಲಿ ಸ್ಫುಟವಾಗಿ ಮೂಡಿವೆ. ಆಳವಾದ ಸಂಶೋಧನೆಯ ಫಲವಾದ ಈ ಗ್ರಂಥಗಳು ಇಂಗ್ಲೆಂಡಿನ ಇತಿಹಾಸ ಬರವಣಿಗೆಯಲ್ಲಿ ತಮ್ಮವೇ ಆದ ಸ್ಥಾನ ಗಳಿಸಿವೆ. (ಕೆ.ಎಸ್.ಎಸ್.)