ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟೇಟ್, ನೇಹಮ್

ವಿಕಿಸೋರ್ಸ್ದಿಂದ

ಟೇಟ್, ನೇಹಮ್ 1652-1715. ಇಂಗ್ಲೆಂಡಿನ ರಾಷ್ಟ್ರಕವಿ. ಹುಟ್ಟಿದ್ದು ಡಬ್ಲಿನ್ನಿನಲ್ಲಿ. ಟ್ರಿನಿಟಿ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ ಲಂಡನಿಗೆ ತೆರಳಿದ (1672). 1677 ರಲ್ಲಿ ಇವನ ಪೂಯೆಮ್ಸ್ ಆನ್ ಸೆವರಲ್ ಅಕೇಷನ್ಸ್ ಎಂಬ ಕವನ ಸಂಕಲನ ಪ್ರಕಟವಾಯಿತು. ಅನಂತರ ಈತ ಷೇಕ್ಸ್‍ಪಿಯರನನ್ನು ಉತ್ತಮಗೊಳಿಸಲು ಯತ್ನಿಸಿ ಆತನ ರುದ್ರನಾಟಕ ಕಿಂಗ್ ಲಿಯರ್ ವಿನೋದವಾಗುವಂತೆ ಮಾಡಿದ. ಆ ಅನುಚಿತ ವ್ಯತ್ಯಾಸಕ್ಕೆ ಡಾ. ಜಾನ್ಸನ್ನನ ಬೆಂಬಲವೂ ದೊರೆಯಿತು. ಹೀಗಾಗಿ ಇದು 19 ನೆಯ ಶತಮಾನದ ನಡುವಿನರೆಗೂ ಜನಪ್ರಿಯವಾಯಿತು.

ಡ್ರೈಡನ್ನನ ದೀರ್ಘ ವಿಡಂಬನ ಕಾವ್ಯ ಅಬ್‍ಸಲಾಮ್ ಮತ್ತು ಅಕಿಟೊಫೆಲ್‍ನ ಎರಡನೆಯ ಭಾಗವನ್ನು ಆತನ ಸಹಾಯದಿಂದ ಈತ ಸಹಾಯದಿಂದ ಈತ ಬರೆದನೆನ್ನಲಾಗಿದೆ (1682).

ಟೇಟ್ ಸ್ವಂತ ಕವಿತೆಗಳಲ್ಲಿ ಶ್ರೇಷ್ಠವಾದುದು ಪೆನೇಸಿಯ ಆರ್ ಎ ಪೊಯೆಮ್ ಆನ್ ಟೀ (1700). ಷ್ಯಾಡ್‍ವೆಲ್ ಆದ ಮೇಲೆ ರಾಷ್ಟ್ರಕವಿಯಾದ (1831-1901) ಟೇಟನನ್ನು ಅಲೆಕ್ಸಾಂಡರ್ ಪೋಪ್ ತನ್ನ ಡನ್ಸಿಯಡ್ ಕೃತಿಯಲ್ಲಿ ಗೇಲಿ ಮಾಡಿದ್ದಾನೆ. (ಕೆ.ಎಸ್.ಬಿ.ಎಚ್.) ಪರಿಷ್ಕರಣೆ: