ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡೇನಿಷ್ ಭಾಷೆ

ವಿಕಿಸೋರ್ಸ್ದಿಂದ

ಡೇನಿಷ್ ಭಾಷೆ ಇಂಡೋಯೂರೋಪಿಯನ್ ಭಾಷಾಪರಿವಾರದ ಜಮ್ರ್ಯಾನಿಕ್ ಉಪಪರಿವಾರದ ಸ್ಕ್ಯಾಂಡಿವೇನಿಯನ್ ಶಾಖೆಗೆ ಸೇರಿದ ಪ್ರಮುಖ ಭಾಷೆ. ಡೆನ್ಮಾರ್ಕಿನಿಂದ ಅಮೆರಿಕ ಮತ್ತು ಕೆನಡಗಳಿಗೆ ವಲಸೆ ಹೋಗಿರುವ ಜನ ಡೇನಿಷ್ ಭಾಷೆಯನ್ನೇ ಬಳಸುತ್ತಿದ್ದಾರೆ. ಈ ಭಾಷೆಯ ಭೌಗೋಳಿಕ ಮತ್ತು ಭಾಷಿಕ ಸಂಬಂಧವನ್ನು ಈ ಕೆಳಗಿನಂತೆ ತಿಳಿಸಬಹುದು : ಐಸ್‍ಲ್ಯಾಂಡಿಕ್-ಫ್ಯೆರೋಸ್ó-ನ್ಯೂ ನಾರ್ವೀಜಿಯನ್-ಡೆನೊ ನಾರ್ವೀಜಿಯನ್-ಸ್ವೀಡಿಷ್-ಈ ಸರಣಿಯಲ್ಲಿ ಡೆನೊ ಸಾರ್ವೀಜಿಯನ್‍ನಿಂದ ಡೇನಿಷ್ ನಾರ್ವೀಜಿಯನ್ ಆವಿರ್ಭವಿಸಿದೆ.

ಹಳೆ ಡೇನಿಷ್ : ಕ್ರಿ.ಶ. 1000-1150. ಸ್ಕ್ಯಾಂಡಿನೇವಿಯನ್ ಭಾಷೆಗಳು ಕವಲೊಡೆದದ್ದು ಕ್ರಿ.ಶ. 1000ದ ಸುಮಾರಿಗೆ. ಇವುಗಳ ಪ್ರಾಕ್ ರೂಪವನ್ನು (ಕ್ರಿ.ಶ. ಸು.250-800) ಅತಿ ವಿರಳವಾಗಿರುವ ರೂನಿಕ್ ಶಾಸನಗಳಿಂದ ಗುರುತಿಸಬಹುದಾಗಿದೆ. ಉಪಲಬ್ಧ ಶಾಸನಗಳಲ್ಲಿ ಡೇನಿಷ್ ಗೋಲ್ಡ್ ಹೋರ್ನ್ ಎಂಬುದು ಸುಪ್ರಸಿದ್ಧ. 10ನೆಯ ಶತಮಾನದ ಈಚೆಗೆ ಸಿಕ್ಕಿರುವ ಶಾಸನಗಳನ್ನು ಅಭ್ಯಸಿಸಿದಾಗ ಹೊಸ ಧ್ವನ್ಯಾತ್ಮಕ ಬದಲಾವಣೆಗಳು ಗಮನಕ್ಕೆ ಬರುತ್ತದೆ.


ನಡು ಡೇನಿಷ್ : (ಸು.1150-1500) ಈ ಕಾಲದಲ್ಲಿ ಧ್ವನಿಮಾತ್ಮಕ ಬದಲಾವಣೆಗಳೂ ಉಂಟಾದುವು : (1) ಸ್ವರಾಘಾತವಿಲ್ಲದ ಸ್ಥಾನಗಳಲ್ಲಿ ವ್ಯಾಕರಣ ಸರಳವಾಗತೊಡಗಿತು. ಗ್ರೀಕ್, ಲ್ಯಾಟಿನ್ ಮತ್ತು ಜರ್ಮನ್ ಭಾಷೆಗಳಿಂದ ಪದಗಳೂ ಪ್ರತ್ಯಯಗಳೂ ಸೇರತೊಡಗಿದವು.

ಹೊಸಡೇನಿಷ್ : (1700- ) ಗಲೀಯ ಸ್ಪರ್ಶ ಕಾಣತೊಡಗಿದುದೇ ಹೊಸ ಡೇನಿಷ್‍ನ ಪ್ರಮುಖ ಲಕ್ಷಣ. ಇದರ ವ್ಯಾಕರಣದಲ್ಲಿ ಎರಡು ವಿಭಕ್ತಿಗಳು (ಪ್ರಥಮ ಮತ್ತು ಷಷ್ಠಿ) ಎರಡು ಲಿಂಗಗಳು (ನಪುಂಸಕ ಮತ್ತು ಇತರ) ಕಂಡುಬರುತ್ತವೆ. ನಿರ್ದೇಶಕ ಗುಣವಾಚಿ ವಿಶೇಷ್ಯದ ಹಿಂದೆ (ಒಚಿಟಿಜ-eಟಿ, ಣhe mಚಿಟಿ) ಇರುತ್ತದೆ. ನಾಮ ಗುಣವಾಚಿಗಳಿಗೆ ಬಹುವಚನದಲ್ಲಿ ವಿಶೇಷ ರೂಪಗಳಿವೆ. ಹಾಗೂ ನಿರ್ದೇಶಕ ಗುಣವಾಚಿಗಳ ಸಂಬಂಧದಲ್ಲಿ ವಿಶೇಷ ರೂಪಗಳಿವೆ. ಕ್ರಿಯಾಪದದಲ್ಲಿ ಪುರುಷವಾಚಕ ಪ್ರತ್ಯಯವಾಗಲಿ ಬಹುವಚನ ಪ್ರತ್ಯಯಗಳಾಗಲಿ ಇರುವುದಿಲ್ಲ. hಚಿಡಿ hಚಿs ಮತ್ತು eಡಿ is ಎಂಬ ಸಹಾಯಕ ಕ್ರಿಯಾಪದಗಳು ಸೇರಿ ಸಂಯುಕ್ತ ಕ್ರಿಯಾರೂಪಗಳು ಸಾಧಿತಗೊಳ್ಳುತ್ತವೆ. ಸ್ವೀಕೃತ ಪ್ರತ್ಯಯಗಳು ಪದೋತ್ಪನ್ನಕಾರಕಗಳಾಗಿವೆ. ಗ್ರೀಕ್, ಲ್ಯಾಟಿನ್ ಮತ್ತು ಫ್ರೆಂಚ್‍ಗಳಿಂದ ಸ್ವೀಕೃತ ಪದಗಳು ಅಳಿದು ಹೋಗುತ್ತಿರುವಾಗ ಜರ್ಮನ್ ಸ್ವೀಕೃತಗಳು ಶಿಷ್ಟರೂಪಗಳೆಂದು ಪರಿಗಣಿಸಲಾಗುತ್ತದೆ. ಇಂಗ್ಲಿಷ್‍ನಿಂದ ಪಾರಿಭಾಷಿಕ ಶಬ್ದಗಳು ಡೇನಿಷ್ ಭಾಷೆಯನ್ನು ಸೇರುತ್ತಾ ಇವೆ. ವಾಕ್ಯರಚನೆಯಲ್ಲಿ ಲ್ಯಾಟಿನ್ ಶೈಲಿ ಕಡಿಮೆಯಾಗಿ ದೇಶೀಯ ಬಳಕೆ ಹೆಚ್ಚುತ್ತಿದೆ. ವಾಕ್ಯದ ಪದಕ್ರಮ ಕಟ್ಟುನಿಟ್ಟಾಗಿದೆ. ಕರ್ತೃಪದ ಕ್ರಿಯಾಪದದ ಹಿಂದಿನ ಸ್ಥಾನದಲ್ಲಿ ಬರುತ್ತದೆ, ಬರತಕ್ಕದ್ದು. ವಾಕ್ಯಗಳ ನಡುವಿನಲ್ಲಿ ಸಮುಚ್ಚಯಗಳು ಕ್ವಚಿತ್ತಾಗಿ ಕಂಡುಬರುತ್ತದೆ.

1948ರಲ್ಲಿ ಆದ ಲಿಪಿ ಸುಧಾರಣೆಯ ಪ್ರಕಾರ ನಾಮಪದಗಳ ಆದಿಯ ದೊಡ್ಡ ಅಕ್ಷರಗಳನ್ನು ತೆಗೆದುಹಾಕಲಾಯಿತು. ಚಿಚಿ ಎಂಬ ಅಕ್ಷರ ಎಂದು ಬದಲಾಯಿತು. ರೋಮನ್ ಲಿಪಿಗೆ ಅಲ್ಲದೆ œ ಮತ್ತು ( ಸಂಜ್ಞೆಗಳೂ ಸೇರಿಕೊಂಡವು. ಈ ಸಂಜ್ಞೆಗಳನ್ನು ಸ್ವೀಕೃತ ಪದಗಳಲ್ಲಿ ಮಾತ್ರ ಬಳಸಲಾಗುತ್ತಿದೆ. (ಡಬ್ಲ್ಯೂ.ಎಂ.)