ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡ ಲಾರೀಸ್, ಗೀಯೋಮ್

ವಿಕಿಸೋರ್ಸ್ದಿಂದ

ಡ ಲಾರೀಸ್, ಗೀಯೋಮ್

ಸತ್ತದ್ದು ಸು. 1235. ಮಧ್ಯ ಯುಗದ ಈ ಫ್ರೆಂಚ್ ಕವಿಯ ವಿಚಾರವಾಗಿ ಏನೇನೂ ತಿಳಿದುಬಂದಿಲ್ಲ. ಲಾರೀಸ್ ಎಂಬ ಊರಿನ ನಿವಾಸಿಯಾಗಿದ್ದಿರಬಹುದೆಂದು ಊಹಿಸಿದ್ದಾರೆ. ಖಚಿತವಾಗಿರುವ ಒಂದು ಸಂಗತಿ ಏನೆಂದರೆ, ಲೋಕಪ್ರಿಯವಾದ ರೊಮಾನ್ ಡ ಲ ರೋಸ್ (ಗುಲಾಬಿ ಹೂವಿನ ಅಚ್ಚರಿ ಕಥೆ) ಎಂಬ ಸುದೀರ್ಘ ಕಥನ ಕಾವ್ಯದ ಪೂರ್ವಭಾಗ, ಸುಮಾರು 4000 ಸಾಲುಗಳು, ಇವನಿಂದ ರಚಿತವಾದವು. ಕಾವ್ಯದ ವಿವರಗಳಿಗೆ. (ನೋಡಿ- ಡ-ಮ್ಯೂಂಗ್,-ಜೀನ್) (ಎಸ್.ವಿ.ಆರ್.)