ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಾದರಸ

ವಿಕಿಸೋರ್ಸ್ದಿಂದ

ಪಾದರಸ ರಾಸಾಯನಿಕ ಲೋಹ ಧಾತು (ಮಕ್ರ್ಯೂರಿ). ಸಾಮಾನ್ಯ ಉಷ್ಣತೆಯಲ್ಲಿ ದ್ರವರೂಪದಲ್ಲಿರುವ ಪರಿಚಿತ ಲೋಹ ಇದೊಂದೇ. ಪ್ರತೀಕ Hg; ಪರಮಾಣು ಸಂಖ್ಯೆ 80; ಪರಮಾಣು ತೂಕ 200.61; ಸಾಂದ್ರತೆ 13.546; ಕುದಿಬಿಂದು 359.9ಲಿಅ. ಸ್ಥಿರ ಸಮಸ್ಥಾನಿಗಳ ಸಂಖ್ಯೆ 7. ಪಾದರಸದ ಮೇಲ್ಮೈ ಎಳೆತ ಹೆಚ್ಚು. ಆದ್ದರಿಂದ ಸುರಿದಾಗ ಇತರ ದ್ರವಗಳೋಪಾದಿಯಲ್ಲಿ ಇದು ಹರಿಯುವುದಿಲ್ಲ ಮತ್ತು ಹರಡುವುದಿಲ್ಲ, ಬದಲು ಸಣ್ಣ ಹನಿಗಳಾಗಿ ವಿಭಾಗವಾಗುವುದು. ರಸವಾದಿಗಳಿಗೂ ಪುರಾತನ ಹಿಂದೂ ಮತ್ತು ಚೀನಿಯರಿಗೂ ಪಾದರಸದ ಗುಣ ಗೊತ್ತಿತ್ತು.

ಧಾತು ಸ್ಥಿತಿಯಲ್ಲಿ ಪಾದರಸ ಅತ್ಯಲ್ಪ ಮೊತ್ತದಲ್ಲಿ ದೊರೆಯುತ್ತದೆ. ಕೆಂಪು ಬಣ್ಣದ ಸಿನಬಾರ್ ಇದರ ಮುಖ್ಯ ಅದುರು. ಪಾದರಸದ ಗಣಿಗಳ ಪೈಕಿ ಸ್ಪೇನ್ ದೇಶದ ಆಲ್ಮಾಡೇನ್ ಮತ್ತು ಇಟಲಿಯ ಕಾರ್ನಿಯೋಲಾ ಗಣಿಗಳು ಪ್ರಸಿದ್ಧವಾದವು. ಪಾದರಸದ ಉತ್ಪಾದನೆಯಲ್ಲಿ ಈ ದೇಶಗಳು ಪ್ರಮುಖ ಸ್ಥಾನ ಗಳಿಸಿವೆ. ಮೆಕ್ಸಿಕೋ ಅಮೆರಿಕ ಸಂಯುಕ್ತ ಸಂಸ್ಥಾನ ಯುಗೊಸ್ಲಾವಿಯ ದೇಶಗಳು ಸಹ ಗಣನೀಯ ಮೊತ್ತದಲ್ಲಿ ಪಾದರಸವನ್ನು ಉತ್ಪಾದಿಸುತ್ತವೆ

ಸಿನಬಾರನ್ನು (ಮಕ್ರ್ಯೂರಿಕ್ ಸಲ್ಫೈಡ್) ವಾಯವಿನಲ್ಲಿ ಹಾಗೆಯೇ ಅಥವಾ ಸುಣ್ಣದೊಡನೆ ಬೆರೆಸಿ ಹುರಿದಾಗ ಲೋಹ ಬಿಡುಗಡೆಯಾಗುವುದು. ಅದನ್ನು ನೀರಿನಿಂದ ತಣಿಸಿ ಲೋಹ ಅಥವಾ ಮಣ್ಣಿನ ಸಾಂದ್ರತೆಗಳಲ್ಲಿ ಸಂಗ್ರಹಿಸಲಾಗುವುದು. ಷೇಮಾಯ್ ಚಕ್ಕಳದ ಮೂಲಕ ಶೋಧಿಸಿ, ಮಕ್ರ್ಯೂರಸ್ ನೈಟ್ರೇಟ್ ಮಿಶ್ರಿತ 5% ನೈಟ್ರಿಕ್ ಆಮ್ಲದಿಂದ ತೊಳೆದುಬಂದ ಪಾದರಸವನ್ನು ಆಸವನ ವಿಧಾನದಿಂದ ಶುದ್ಧೀಕರಿಸಲಾಗುವುದು. ಇದನ್ನು ಮೆದು ಕಬ್ಬಿಣದ ಜಾಡಿಗಳಲ್ಲಿಟ್ಟು ರವಾನಿಸುತ್ತಾರೆ. ಗಾಜಿಗೆ ಅಂಟದಿರುವುದು ಪಾದರಸದ ವೈಶಿಷ್ಟ್ಯ. ಇದು ಉತ್ತಮ ಉಷ್ಣವಾಹಕ. ಉಷ್ಣತಾಮಾಪಕಗಳಲ್ಲಿ ಪಾದರಸದ ಉಪಯೋಗ ಈ ಗುಣಗಳನ್ನು ಅವಲಂಬಿಸಿದೆ. ಇದರ ಸಾಂದ್ರತೆ ಹೆಚ್ಚು. ಆವಿಯೊತ್ತಡ ಕಡಿಮೆ. ಆದ್ದರಿಂದ ವಾಯುಭಾರಮಾಪಕ, ಮೆಕ್‍ಲಿಯಾಡ್ ಅಳೆಪಿಡಿ (ಗೇಜ್) ಇತ್ಯಾದಿ ನಿರ್ವಾತ ಅಳೆಪಿಡಿಗಳ ನಿರ್ಮಾಣದಲ್ಲಿ ಪಾದರಸವನ್ನು ಬಳಸುವರು. ಇದು ಒಳ್ಳೆಯ ವಿದ್ಯುತ್‍ವಾಹಕವಾದ್ದರಿಂದ ಸ್ವಿಚ್ಚುಗಳು ಮತ್ತು ಟಪ್ಪೆ (ರಿಲೇ) ವ್ಯವಸ್ಥೆಗಳಲ್ಲಿ ಇದರ ಉಪಯೋಗ ಹೆಚ್ಚು. ಕೆಲವು ವಿಶಿಷ್ಟ ಬಾಯಿಲರುಗಳಲ್ಲಿ ಹಬೆಗಿಂತ ಪಾದರಸದ ಆವಿಯೇ ಹೆಚ್ಚು ಪರಿಣಾಮಕಾರಿ ಎಂದು ಪ್ರಯೋಗಗಳಿಂದ ತಿಳಿದುಬಂದಿದೆ. ಇಂಥ ಆಧುನಿಕ ಬಾಯ್ಲರುಗಳ ಸೀಮಿತ ವೆಚ್ಚದಲ್ಲಿ ಅಧಿಕ ಶಕ್ತಿಯನ್ನು ಉತ್ಪಾದಿಸಬಲ್ಲವು. ಇತರ ಅನಿಲಗಳು ವಿದ್ಯುತ್‍ವಾಹಕಗಳು, ಪಾದರಸಾನೀಲವಾದರೋ ವಿದ್ಯುತ್‍ವಾಹಕ. ಈ ಕಾರಣದಿಂದ ದಿಷ್ಟಕಾರಿ (ರೆಕ್ಟಿಫೈಯರ್; ಪರ್ಯಾಯ ಪ್ರವಾಹವನ್ನು ಏಕಮುಖ ಪ್ರವಾಹಕ್ಕೆ ಪರಿವರ್ತಿಸುವ ಸಾಧನ) ಉಪಕರಣದಲ್ಲಿ ಪಾದರಸವನ್ನು ಬಳಸುವರು. ಪಾದರಸಾನಿಲದ ಮೂಲಕ ವಿದ್ಯುದ್ವಿಸರ್ಜನೆಯನ್ನು ಹಾಯಿಸಿದಾಗ ಅತಿ ನೇರಿಳೆ ಕಿರಣಗಳು ಹೊರಬೀಳುವುವು. ಕ್ವಾಟ್ರ್ಜ್ ಕೋಶಗಳಲ್ಲಿ ಅಳವಡಿಸಿದ ಇಂಥ ದೀಪಗಳಿಂದ ಅತಿ ನೇರಿಳೆ ಬೆಳಕನ್ನು ಪಡೆಯುವುದು ವಾಡಿಕೆ.

ಪರಮಾಣುಶಕ್ತಿಯ ಉತ್ಪಾದನೆಯಲ್ಲಿ ಪಾದರಸವನ್ನು ಬಳಸಲಾಗುತ್ತಿದೆ. ವಿಕಿರಣ ಪಟುತ್ವ ನಿರೋಧಕ ರಕ್ಷಣ ಸಾಧನಗಳಲ್ಲಿ ಅಲ್ಲದೆ ಉಷ್ಣವಿನಿಮಯ ಮಾಧ್ಯಮವಾಗಿ ಕೂಡ ಪಾದರಸದ ಉಪಯೋಗ ಸಾಮಾನ್ಯವಾಗುತ್ತಿದೆ. ಲೋಹವಲ್ಲದೆ ಅದರ ಆಕ್ಸೈಡ್, ಕ್ಲೋರೈಡ್ ಮತ್ತು ಸಲ್ಫೇಟುಗಳು ವೇಗವರ್ಧಕಗಳಾಗಿ ವಿನಿಯೋಗವಾಗುತ್ತಿವೆ. ವಿದ್ಯುದ್ವಿಧಾನದಿಂದ ಕ್ಲೋರಿನ್ ಮತ್ತು ಕಾಸ್ಟಿಕ್ ಸೋಡ ತಯಾರಿಕೆಯಲ್ಲಿ ಪಾದರಸ ಕ್ಯಾಥೋಡಾಗಿ ವರ್ತಿಸುವುದು. ಎರಡನೆಯ ಮಹಾಯುದ್ಧ ಕಾಲದಲ್ಲಿ ನಿರೂಪಿಸಲಾದ ಮಕ್ರ್ಯೂರಿ ಆಕ್ಸೈಡ್ ವಿದ್ಯುತ್‍ಕೋಶಕ್ಕಾಗಿ ಪಾದರಸ ಬಹುವಾಗಿ ಬಳಕೆಯಾಗುತ್ತಿದೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಪ್ರಧಾನಸ್ಥಾನ ಉಂಟು. ಸಿಫಿಲಿಸ್ ಮೇಹರೋಗದ ಚಿಕಿತ್ಸೆಗೆ ಪಾದರಸದ ಬಳಕೆ ಶತಮಾನಗಳಿಂದ ರೂಢಿಯಲ್ಲಿದೆ. ಪಾದರಸದ ಉಪಯುಕ್ತ ರಾಸಾಯನಿಕಗಳ ಪೈಕಿ ಈ ಮುಂದಿನವನ್ನು ಹೆಸರಿಸಬಹುದು:

1. ಮಕ್ರ್ಯೂರಿಕ್ ಕ್ಲೋರೈಡ್ (ಊgಅಟ2) ಚರ್ಮದ ಹದಗಾರಿಕೆ, ಪೂತಿನಾಶಕ, ಮತ್ತು ಮರದ ತುಂಡುಗಳ ಸಂರಕ್ಷಣೆ. 2. ಮಕ್ರ್ಯೂರಿಕ್ ಫಲ್ಮಿನೇಟ್ ಊg (ಅಓಔ) 2 ವಿಸ್ಫೋಟ ಪ್ರೇರಕವಾಗಿ (ಡಿಟೊನೇಟರ್). 3. ಹಳದಿ ಮಕ್ರ್ಯೂರಿಕ್ ಆಕ್ಸೈಡಿನ ಮುಲಾಮು ಹುಳುಕಡ್ಡಿ ಇತ್ಯಾದಿ ಚರ್ಮರೋಗಗಳನ್ನು ಗುಣಪಡಿಸಲು. 4. ಪಾದರಸದ ಆಗ್ರ್ಯಾನಿಕ್ ಸಂಯುಕ್ತಗಳು ಕಾಗದದ ಕೈಗಾರಿಕೆಯಲ್ಲಿ ಅಲ್ಲದೆ ವಿಷಾಪಹಾರಿಗಳಾಗಿ, ಕ್ರಿಮಿನಾಶಕಗಳಾಗಿ ಮತ್ತು ಪೂತಿನಾಶಕಗಳಾಗಿ ಜನಪ್ರಿಯವಾಗಿವೆ. ಇವುಗಳ ಪೈಕಿ ಮೆಟಾಫೆನ್ ಮರ್‍ಥಯೋಲೇಟ್ ಮಕ್ರ್ಯೂರೋಕ್ರೋಮ್, ಮರ್‍ಫೀನೈಲ್ ನೈಟ್ರೇಟ್, ಮರ್‍ಫೀನೈಲ್ ಬೋರೇಟ್, ಮತ್ತು ಮರಾಕ್ಸಿಲ್ ಮುಖ್ಯವಾದವು.

ಪಾದರಸದ ಸಂಯುಕ್ತಗಳಲ್ಲಿ ಎರಡು ವಿಧಗಳಿವೆ. ಮಕ್ರ್ಯೂರಸ್ ಸಂಯುಕ್ತಗಳಲ್ಲಿ ಪಾದರಸದ ವೇಲೆನ್ಸಿ ಒಂದು. ಆಕ್ಸೈಡ್, ಕ್ಲೋರೈಡ್, ಬ್ರೋಮೈಡ್, ಅಯೊಡೈಡ್, ಸಲ್ಫೈಡ್, ಸಲ್ಫೇಟ್, ನೈಟ್ರೇಟ್, ಫಾಸ್ಫೇಟ್, ಮತ್ತು ಕ್ರೋಮೇಟ್ ಪ್ರಧಾನ ಮಕ್ರ್ಯೂರಸ್ ಸಂಯುಕ್ತಗಳು. ಇವುಗಳ ಪೈಕಿ ಕ್ಯಾಲೊಮೆಲ್ ಎಂದು ಪ್ರಸಿದ್ಧವಾಗಿರುವ ಮಕ್ರ್ಯೂರಸ್ ಕ್ಲೋರೈಡ್ (ಊg2ಅಟ2) ಮುಖ್ಯವಾದದ್ದು. ಪಾದರಸ ಮತ್ತು ಮಕ್ರ್ಯೂರಿಕ್ ಕ್ಲೋರೈಡಿನ ನಿಕಟ ಮಿಶ್ರಣವನ್ನು ಕರ್ಪೂರೀಕರಿಸಿ ಇದನ್ನು ತಯಾರಿಸಬಹುದು. ಇದು ನೀರಿನಲ್ಲಿ ಅದ್ರಾವ್ಯವಾದ ಬಿಳಿಯ ಪುಡಿ. ಇದನ್ನು ಭೇದಿಕಾರಕವಾಗಿ ಉಪಯೋಗಿಸಬಹುದು. ಪರ್ಯಾಪ್ತ ಪೋಟ್ಯಾಸಿಯಮ್ ಕ್ಲೋರೈಡ್ ದ್ರಾವಣದಲ್ಲಿ ನಿಲಂಬಿತವಾದ ಕ್ಯಾಲೊಮೆಲ್ ಎಲೆಕ್ಟ್ರೋಡನ್ನು ವಿದ್ಯುದ್ರಾಸಾಯನಿಕ ಪ್ರಯೋಗಗಳಲ್ಲಿ ಆದರ್ಶಮಾನವಾಗಿ ಉಪಯೋಗಿಸುವರು. ವೆಸ್ಟನ್ ವಿದ್ಯುತ್ಕೋಶದಲ್ಲಿ ಮಕ್ರ್ಯೂರಸ್ ಸಲ್ಫೇಟ್ ದ್ರುವೀಕರಣವನ್ನು ನಿರೋಧಿಸುವುದು. ಮಕ್ರ್ಯೂರಿಕ್ ಸಂಯುಕ್ತಗಳಲ್ಲಿ ಪಾದರಸದ ವೇಲೆನ್ಸಿ ಎರಡು. ಇವುಗಳಲ್ಲಿ ಮುಖ್ಯವಾದದ್ದು, ಮಕ್ರ್ಯೂರಿಕ್ ಕ್ಲೋರೈಡ್ (ಊg2ಅಟ2). ಇದು ನೀರಿನಲ್ಲಿ ದ್ರಾವ್ಯ. ದಾರುಣವಾದ ವಿಷ. ಕಾಸಿದಾಗ ಕರ್ಪೂರಿಕರಿಸುವುದು. ಪೊಟ್ಯಾಸಿಯಂ ಅಯೋಡೈಡ್ ದ್ರಾವಣದೊಡನೆ ವರ್ತಿಸಿದಾಗ ಕೆಂಪು ಬಣ್ಣದ ಮಕ್ರ್ಯೂರಿಕ್ ಅಯೋಡೈಡ್ (ಊgI2) ಒತ್ತರಿಸುವುದು. ಇದು ಮತ್ತೆ ಪೊಟ್ಯಾಸಿಯಂ ಅಯೋಡೈಡಿನಲ್ಲಿ ವಿಲೀನವಾದರೆ ಪೊಟ್ಯಾಸಿಯಂ ಮಕ್ರ್ಯೂರಿಕ್ ಅಯೋಡೈಡ್ (ಏ2ಊgI4) ಎಂಬ ಸಂಕೀರ್ಣ ಲವಣ ಉಂಟಾಗುವುದು. ಇದರ ಕ್ಷಾರೀಯ ದ್ರಾವಣವೇ ನೆಸ್ಲರ್ ಪರಿವರ್ತಕ. ಅಲ್ಪ ಪ್ರಮಾಣ ಅಮೋನಿಯ ಅಥವಾ ಅಮೋನಿಯಂ ಲವಣಗಳ ಸಂಪರ್ಕದಲ್ಲಿ ಹಳದಿ ಅಥವಾ ಕಂದು ಬಣ್ಣ ಉಂಟಾಗುವುದು. ಅಮೋನಿಯಂ ಲವಣಗಳನ್ನು ಗುರುತಿಸಲು ಇದೊಂದು ಸೂಕ್ಷ್ಮ ಪರೀಕ್ಷಾ ಪ್ರಯೋಗ. ನೀರಿನಲ್ಲಿ ವಿಲೀನವಾಗಿರುವ ಅಮೋನಿಯಾದ ಅಂಶವನ್ನು ನಿರ್ಧರಿಸಲು ಈ ಪ್ರಯೋಗ ಸಹಕಾರಿಯಾಗಿದೆ.

ಮಕ್ರ್ಯೂರಿಕ್ ಥಯೋಸಯನೇಟನ್ನು ಊg (ಅಓS)2 ಹಾವುಬಾಣದ ತಯಾರಿಕೆಯಲ್ಲಿ ಉಪಯೋಗಿಸುವರು. ಇದರ ಸಣ್ಣ ತುಂಡೊಂದನ್ನು ಉರಿಸಿದಾಗ ನೀಳವಾದ ಸರ್ಪಾಕೃತಿಯನ್ನು ಹೊಂದುವುದು. ಈ ಬೂದಿ ವಿಷವಸ್ತು. ಮಕ್ರ್ಯೂರಿಕ್ ಸಲ್ಫೈಡ್ (ಊgS); ಪಾದರಸದ ಲವಣಗಳ ಮೂಲಕ ಹೈಡ್ರೋಜನ್ ಸಲ್ಫೈಡ್ ಅನಿಲವನ್ನು ಹಾಯಿಸಿದಾಗ ಕಪ್ಪುಬಣ್ಣದ ಮಕ್ರ್ಯೂರಿಕ್ ಸಲ್ಫೈಡ್ ಒತ್ತರಿಸುವುದು. ಇದನ್ನು ಪ್ರತ್ಯೇಕಿಸಿ ಕರ್ಪೂರೀಕರಿಸಿದರೆ ಕೆಂಪು ಬಣ್ಣದ ಘನವಸ್ತು ಲಭಿಸುವುದು. ರಂಗುಗಳಲ್ಲಿ ಅಲ್ಲದೆ ರಬ್ಬರ್ ಮತ್ತು ಪ್ಲಾಸ್ಟಿಕುಗಳಿಗೆ ಬಣ್ಣ ನೀಡಲು ಇದನ್ನು ಉಪಯೋಗಿಸುವರು.

ಪಾದರಸ ಮತ್ತು ಅದರ ದ್ರಾವ್ಯ ಸಂಯುಕ್ತಗಳೆಲ್ಲ ವಿಷಗಳು. ಚರ್ಮದ ಮೂಲಕವು ಪಾದರಸ ಸುಲಭವಾಗಿ ದೇಹಗತವಾಗುವುದು. ಆದ್ದರಿಂದ ಕಾರ್ಖಾನೆಗಳಲ್ಲಿ ಮತ್ತು ಸಂಶೋಧನಾಲಯಗಳಲ್ಲಿ ಪಾದರಸ ಆವಿಯ ಸೇವನೆಯ ವಿರುದ್ಧ ರಕ್ಷಣಾ ಕ್ರಮಗಳು ಅನಿವಾರ್ಯ ಮತ್ತು ಅಗತ್ಯ. (ಎಚ್.ಜಿ.ಎಸ್.)