ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ಯುಪ

ವಿಕಿಸೋರ್ಸ್ದಿಂದ

ಪ್ಯೂಪ - ಪೂರ್ಣರೂಪಾಂತರ ಹೊಂದುವ ಕೀಟಗಳ ಜೀವನಚರಿತ್ರೆಯ ಒಂದು ಹಂತ. ಈ ಹಂತದಲ್ಲಿ ಕೀಟಚಟುವಟಿಕೆಯಿರುವುದಿಲ್ಲ: ಮರಿಯ ಅಂಗಗಳು ಪ್ರಬುದ್ಧಾವಸ್ಥೆಯ ಅಂಗಗಳಾಗಿ ಮಾರ್ಪಾಟಾಗುತ್ತವೆ. ಇವುಗಳ ಆಕಾರದಲ್ಲಿ ತುಂಬ ವೈತ್ಯಾಸವನ್ನು ಕಾಣಬಹುದು. ಮುಖ್ಯವಾದ ಪ್ಯೂಪಗಳು ಇಂತಿವೆ :

1 ಪ್ರಿಮಿಟಿವ್: ಪ್ಯೂಪ ಲೈಬೀರ ಎಂಬ ಹೆಸರಿನಿದು ಸರಳ. ಹೊದಿಕೆ ಇಲ್ಲ. ಉಪಾಂಗಗಳು ಕಾಣಿಸುತ್ತಿದ್ದು, ಪೌಢ ಕೀಟವನ್ನೇ ಹೋಲುತ್ತದೆ. ಕೆಲವು ಕುಟುಂಬಗಳಲ್ಲಿ ಕೊನೆಯ ಸಲ ಪೊರೆ ಬಿಡುವುದಕ್ಕೆ ಮುಂಚೆ ಇವು ಚುರುಕಾಗುವುವು. ಉದಾ: ನ್ಯೂರಾಪ್ಟ್ಪರ, ಮೀಕಾಪÀ್ಟರ, ಟ್ರೈಕಾಪ್ಟರ. ಕೋಲಿಯಾಪ್ಟರ, ಡಿಪ್ಟರ, ಲೆಪಿಡಾಪ್ಟರ, ಹೈಮಿನಾಪ್ಟರ.

2. ಜಟಿಲ: ಅಪೂರ್ಣ ಕೋಶ. ಕೋಶದ ಹೊಟ್ಟೆ ಚಲಿಸಬಲ್ಲುದು: ಉಪಾಂಗಗಳು ಬೇರೆ ಬೇರೆ ಒರೆಗಳಲ್ಲಿರುತ್ತವೆ. ಉದಾ: ಸೊಳ್ಳೆಗಳ ಕೋಶ, ಟಂಬ್ಲರ್ ಮಶಕಗಳು, ಕೆಲವು ತೆರನ ಡಿಪ್ಟರ, ಲೆಪಿಡಾಪ್ಟರ ಮತ್ತು ಕೋಲಿಯಾಪ್ಟರ.

ಅ. ಪ್ಯೂಪ ಅಬ್ಟೆಕ್ಟ: ಉಪಾಂಗಗಳೆಲ್ಲ ಒಟ್ಟು ಸೇರಿರುತ್ತವೆ ಅಥವಾ ಕೋಶದ ಶರೀರಕ್ಕೆ ಒತ್ತಿಕೊಂಡಿರುತ್ತವೆ. ಇವುಗಳ ಮೇಲೆ ಚವರ್iದ ಪೊರೆ ಇದೆ. ಚಲನೆ ಇಲ್ಲ. ಒಂದು ತುದಿಯಲ್ಲಿ ಕ್ರಿಮಾಸ್ಟರ್ ಎಂಬ ಮುಳ್ಳಿದೆ. ಉದಾ; ಲೆಪಿಡಾಪ್ಟರ.

ಆ: ಪ್ಯೂಪ ಕೊಆಕ್ರ್ಟೀಟ: ಕೊನೆಯ ಚರ್ಮದ ಪೋರೆಯಲ್ಲಿ ಪ್ರಾಯದ ಕೀಟ ಅಡಗಿದ್ದು ಹೊರಕ್ಕೆ ಬರುತ್ತದೆ.

( ಪಿ.ಎಂ.)