ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಟಲ ಪಿನಾರಿ

ವಿಕಿಸೋರ್ಸ್ದಿಂದ

ಭಟಲ ಪಿನಾರಿ - ಸ್ಟರ್‍ಕ್ಯೂಲಿಯೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ವೃಕ್ಷ. ಸ್ವರ್‍ಕ್ಯೂಲಿಯ ಫೀಟಿಡ ಇದರ ಸಸ್ಯವೈಜ್ಞಾನಿಕ ಹೆಸರು.

ಉಷ್ಣವಲಯದ ಮೂಲನಿವಾಸಿಯಾದ ಇದು ಆಫ್ರಿಕ, ಉತ್ತರ ಆಸ್ಟ್ರೇಲಿಯ, ಶ್ರೀಲಂಕಾ, ಮಲಕಾ ದ್ವೀಪಗಳು ಹಾಗೂ ಭಾರತದಲ್ಲಿ ಸಮೃದ್ಧವಾಗಿ ಹರಡಿದೆ.

ಇದು 7-15 ಮೀ ಎತ್ತರಕ್ಕೆ ಬೆಳೆಯುವ ಮರ. ಎಲೆಗಳು ಸಂಯುಕ್ತಮಾದರಿಯವು. ಫೆಬ್ರುವರಿ-ಮಾರ್ಚ್ ಹೂಬಿಡುವ ಕಾಲ. ಆಗ ಹೂಗಳಿಂದ ದುರ್ವಾಸನೆ ಹೊರಡುತ್ತದೆ. ಕಾಯಿ ದೋಣಿಯಾಕಾರದ್ದು. ಭಟಲಪಿನಾರಿಯ ವೃದ್ಧಿ ಬೀಜದ ಮೂಲಕ.

ಕ್ಷಾಮಕಾಲದಲ್ಲಿ ಇದರ ಬೀಜಗಳನ್ನು ಹುರಿದು ತಿನ್ನುವುದಿದೆ. ಬೀಜದಿಂದ ಎಣ್ಣೆಯೂ ಒದಗುತ್ತದೆ. ತೊಗಟೆಯಿಂದ ನಾರನ್ನು ತೆಗೆದು ಹಗ್ಗಗಳನ್ನು ಹೊಸೆಯುವುದುಂಟು. ಚೌಬೀನೆಯಿಂದ ಹಗುರವಾದ ಉಪಕರಣಗಳನ್ನು ತಯಾರಿಸಬಹುದು. (ಎಸ್‍ಐ.ಎಚ್.)