ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮ್ಯಾಕರಲ್

ವಿಕಿಸೋರ್ಸ್ದಿಂದ

ಮ್ಯಾಕರಲ್ - ಉಷ್ಣ ಮತ್ತು ಸಮಶೀತೋಷ್ಣ ವಲಯಗಳ ಸಮುದ್ರಗಳಲ್ಲಿ ವಾಸಿಸುವ ಮ್ಯಾಕರಲ್ ಎನ್ನುವುದು ಮುಖ್ಯವಾಗಿ ಪಶ್ಚಿಮ ಕರಾವಳಿಯ ಪ್ರಧಾನ ಮೀನುಗಾರಿಕೆಗೆ ಕಾರಣವಾದ ಬಂಗುಡೆ (ರಾಸ್ಟ್ರೆಲ್ಲಿಜರ್ ಕನಗುರ್ತ) ಮೀನು.

  ಮ್ಯಾಕರಲ್‍ಗಳು ಬಹಳ ವೇಗವಾಗಿ ಈಜಬಲ್ಲ ಹಾಗೂ ಅತ್ಯಂತ ಚಟುವಟಿಕೆಯ ಮೀನುಗಳು.  ದೇಹದ ಮೇಲ್ಭಾಗ ನೀಲಿಬಣ್ಣದ್ದು.  ಕೆಳಭಾಗ ಬಿಳಿ, ಬೆನ್ನಿನ ರೆಕ್ಕೆ ಮತ್ತು ಗುದದ ರೆಕ್ಕೆಗಳ ಹಿಂದೆ ಕಿರಿರೆಕ್ಕೆಗಳ ಸಾಲೊಂದು ಇರುವುದು.
    ನಿಜವಾದ ಮ್ಯಾಕರಲ್‍ಗಳು ಎಂದು ಹೇಳಬಹುದಾದ ಜಾತಿಗಳು:
  (1) ಸ್ಕಾಂಬರ : ಮೆಡಿಟರೇನಿಯನ್ ಮತ್ತು ಉತ್ತರ ಅಟ್ಲಾಂಟಿಕ್ ಮಹಾಸಾಗರಗಳಲ್ಲಿ ನೆಲಸಿರುವ ಸ್ಕಾಂಟರ್ ಸ್ಕಾಂಬ್ರಸ್ ಜಾತಿಯ ಮೀನು, ಸ್ಕಾಂಬರ್ ಜಾತಿಯ ಮೀನುಗಾರಿಕೆ ಅಮೆರಿಕ ಸಂಯುಕ್ತ ಸಂಸ್ಥಾನಗಳು, ಜಪಾನ್, ಸ್ಕಾಂಡಿನೇವಿಯ ನೆದರ್‍ಲ್ಯಾಂಡಿನ ಸ್ಪೇನ್ ಪೋರ್ಚುಗಲ್ ಮತ್ತು ಬ್ರಿಟನ್‍ಗಳಲ್ಲಿ ವಿಶೇಷವಾಗಿದೆ. ಸ್ಕಾಂಬರ್ ಜಪಾನಿಕಸ್ ಪ್ರಭೇದ ಪೆಸಿಫಿಕ್ ಮಹಾಸಾಗರದ ಪ್ರಧಾನ ಮ್ಯಾಕರಲ್ ಮೀನು.
  (2) ರಾಸ್ಟ್ರೆಲ್ಲಿಜರ್ : ರಾಸ್ಟ್ರೆಜರ್ ಕನಗುರ್ತ (ಬಂಗುಡೆ) ಹಿಂದೂ ಮಹಾಸಾಗರದ ಮುಖ್ಯವಾದ ಮ್ಯಾಕರಲ್ ಮೀನು.  ಭಾರತ ಮತ್ತು ತಾಯ್ಲೆಂಡ್ ದೇಶಗಳಲ್ಲಿ ಇದರ ಮೀನುಗಾರಿಕೆ ಮುಖ್ಯವೆನಿಸಿದೆ.

ಮ್ಯಾಕರಲ್ ಗುಂಪಿಗೆ ಸೇರಿದ ಆದರೆ ನಿಜವಾದ ಮ್ಯಾಕರಲ್‍ಗಳಲ್ಲದ ಬೇರೆ ಮುಖ್ಯವಾದ ಮೀನುಗಳು ಸ್ಕಾಂಬಿರೋಮೋರಸ್ (ಸುರ್ಮೈ) ಮತ್ತು ಆಕ್ಸಿಸ್ ಜಾತಿಗಳಿಗೆ ಸೇರಿದ ಮೀನುಗಳು ಸ್ಕಾಂಬಿರೋಮೋರಸ್ ಕೆವಲ್ಲಾ ಪ್ರಭೇದ ಗುಂಪಿನ ಅತಿ ದೊಡ್ಡ ಮೀನು. ಇದು ಸುಮಾರು 50 ಕೆಜಿ ತೂಕದ್ದು. ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳ ಪೂರ್ವ ಸಮುದ್ರಗಳ ನಿವಾಸಿ. ಆ.ಥಿನ್ನಾಯ್‍ಡೆಸ್ (ಆ.ಟಾನೋಸೋಮಾ) ಸಿಕ್ಕಿರುವುದು ವರದಿಯಾಗಿದೆ.

(ಸಿ.ಜಿ.ಕೆ.)