ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮ್ಯಾರಿಯಾಟ್, ಎಡ್ಮೇ

ವಿಕಿಸೋರ್ಸ್ದಿಂದ

ಮ್ಯಾರಿಯಾಟ್, ಎಡ್ಮೇ 1620-84. ಫ್ರೆಂಚ್ ಭೌತವಿe್ಞÁನಿ. ಪ್ರಾಯೋಗಿಕ ಭೌತವಿe್ಞÁನದ ಪ್ರವರ್ತಕರ ಪೈಕಿ ಒಬ್ಬ. ಬರ್ಗಂಡಿಯ ಡೈಜೋನ್‍ನಲ್ಲಿ ಜನನ. ಅಲ್ಲಿಯೇ ಹೆಚ್ಚು ಕಾಲ ಕಳೆದ ಈತ ಅಲ್ಲಿಯ ಸೇಂಟ್ - ಮಾರ್ಟಿನ್ - ಸೂ - ಬೌನ್ ನ ಮಠಾಧಿಪತಿ ಆಗಿದ್ದ. ಪ್ಯಾರಿಸ್‍ನಲ್ಲಿ 1966 ರಲ್ಲಿ ಸ್ಥಾಪನೆಯಾದ ವಿe್ಞÁನ ಅಕಡೆಮಿಯ ಪ್ರಥಮ ಸದಸ್ಯರ ಪೈಕಿ ಈತನೂ ಒಬ್ಬ. ಭೌತವಿಜ್ಞಾನದಲ್ಲಿ ಅವಲೋಕನ ಮತ್ತು ಸಂಶಯಗಳ ಸತ್ತ್ವವನ್ನು ಪ್ರಥಮವಾಗಿ ಜಾರಿಗೆ ತಂದವ. ಅನಿಲಗಳಿಗೆ ಸಂಬಂಧಿಸಿದಂತೆ ಬ್ರಿಟಿಷ್ ವಿe್ಞÁನಿ ರಾಬರ್ಟ್ ಬಾಯ್ಲ್ (1627-91) ಆವಿಷ್ಕರಿಸಿದ ನಿಯಮವನ್ನು ಮ್ಯಾರಿಯಾಟ್ ಸ್ವತಂತ್ರವಾಗಿ ಆವಿಷ್ಕರಿಸಿದ. ಫ್ರಾನ್ಸಿನಲ್ಲಿ ಈ ನಿಯಮಕ್ಕೆ ಮ್ಯಾರಿಯಾಟ್ ನಿಯಮ ಎಂದೇ ಹೆಸರಿತ್ತು. ತರಲಗಳ ಚಲನೆ, ವಸ್ತುಗಳ ಬೀಳುವಿಕೆ, ಬಂದೂಕದ ಹಿನ್ನೆಗೆತ, ಬಣ್ಣದ ಸ್ವಭಾವ, ತುತೂರಿಯ ಸ್ವರ, ವಾಯುಭಾರಮಾಪಕ, ನೀರಿನ ಹೆಪ್ಪುಗಟ್ಟುವಿಕೆ ಮುಂತಾದ ಅನೇಕ ಭೌತವಿದ್ಯಮಾನಗಳನ್ನು ಕುರಿತಂತೆ ಮ್ಯಾರಿಯಾಟ್ ಪ್ರೌಢಪ್ರಬಂಧಗಳನ್ನು ಬರೆದ. ಇವೆಲ್ಲ ಅಕಡೆಮಿಯ ಅನುಭವಗಳು ಮತ್ತು ಇತಿಹಾಸ ಎಂಬ ಅರ್ಥಬರುವ ಹೆಸರಿನ ಗ್ರಂಥದ (1733) ಮೊದಲ ಭಾಗದಲ್ಲಿವೆ. ಭೌತವಿe್ಞÁನವನ್ನು ಕುರಿತ ಇವನ ನಾಲ್ಕು ಪ್ರಬಂಧಗಳ ಪೈಕಿ ಮೊದಲನೆಯ ಮೂರು ಪ್ಯಾರಿಸ್ಸಿನಲ್ಲಿ (1676-79) ಪ್ರಕಟವಾದವು. ಇವನ ಮುಖ್ಯ ಸಂಶೋಧನೆಗಳಿಗೆ ಸಂಬಂಧಿಸಿದ ವಿಷಯಗಳು ಅವುಗಳಲ್ಲಿವೆ. ಇವು ಮತ್ತು ಭೌತದ್ರವ್ಯಗಳ ಆಘಾತಗಳು ಎಂಬ ಪ್ರಬಂಧ ಮ್ಯಾರಿಯಾಟ್‍ನ ಪ್ರಬಂಧಗಳು ಎಂಬ ಅರ್ಥಬರುವ ಹೆಸರಿನ ಗ್ರಂಥದ ಮೊದಲ ಭಾಗದಲ್ಲಿ ಎವೆ. ಇದರ ಎರಡನೆಯ ಪ್ರಬಂಧ ಅನಿಲಗಳ ಸ್ವಭಾವಕ್ಕೆ ಸಂಬಂಧಿಸಿದ್ದು. ಇದರಲ್ಲಿ ಈತ ಸ್ವತಂತ್ರವಾಗಿ ಆವಿಷ್ಕರಿಸಿದ ಬಾಯ್ಲ್ ನಿಯಮದ ನಿರೂಪಣೆ ಇದೆ. ಮ್ಯಾರಿಯಾಟ್ 1684 ಮೇ 12 ರಂದು 64 ನೆಯ ವಯಸ್ಸಿನ ಪ್ಯಾರಿಸ್ಸಿನಲ್ಲಿ ನಿಧನನಾದ. (ಸಿ.ಎಚ್.ಆರ್.)