ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯಕ್ಕ

ವಿಕಿಸೋರ್ಸ್ದಿಂದ

ಯಕ್ಕ- ಅಮೆರಿಕ ಸಂಯುಕ್ತ ಸಂಸ್ಥಾನಗಳ ನೈಋತ್ಯ ಭಾಗ ಮತ್ತು ಮೆಕ್ಸಿಕೋ ಪ್ರದೇಶಗಳಲ್ಲಿ ಕಾಣದೊರೆಯುವ ಉಪಯುಕ್ತ ಸಸ್ಯಜಾತಿ. ಲಿಲಿಯೇಸೀ ಕುಟುಂಬಕ್ಕೆ ಸೇರಿದ ಇದರಲ್ಲಿ ಸುಮಾರು 20 ಪ್ರಭೇದಗಳುಂಟು. ಇವುಗಳ ಪೈಕಿಯ ಅಲಾಯ್‍ಪೋಲಿಯ (ಸ್ಟ್ಯಾನಿಷ್ ಬಾಯನೆಟ್-ಆಲವೀ ಯುಕ್ಕ) ಯು. ಫಿಲಿಮೆಂಟೋಸ (ಆಡಮ್ಸ ನೀಡಲ್-ಕರಡಿ ಹುಲ್ಲು-ರೇಷ್ಮೆ ಹುಲ್ಲು). ಯು. ಗ್ಲೋರಿಯೋಸ, ಯ, ಬ್ರೆವಿಪೋಲಿಯ (ಜೋಷುವ ಟ್ರೀ) ಯು. ಶಿಡಿಗೆರ (ಮೊಹೇವ್ ಯುಕ್ಕ) ಮುಂತಾದವು ಪ್ರಸಿದ್ಧವಾಗಿವೆ. ಇವು ಸ್ವಾಭಾವಿಕವಾಗಿ ಮರುಭೂಮಿಗಳಲ್ಲಿ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಇಲ್ಲವೆ ಬೇಸಾಯ ಮಾಡದಿರುವ ಪಾಳುನೆಲಗಳಲ್ಲಿ ಬೆಳೆಯುತ್ತವೆ. ಇವು ಕಾಡುಗಿಡಗಳಾದರೂ ಸುಂದರವಾಗಿರುವುದರಿಂದ ಕೆಲವನ್ನು ತೋಟಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುವುದುಂಟು.

ಇವುಗಳಲ್ಲಿ ಕೆಲವು ಪ್ರಭೇದಗಳು ನೋಡಲು ಕತ್ತಾಳೆ ಗಿಡದಂತೆ ಕಾಣುತ್ತವೆ. ನೆಲದಿಂದ ಮೇಲಕ್ಕೆ ಕಾಂಡವೇ ಕಾಣುವಂತಿದ್ದು ನೆಲಮಟ್ಟದಿಂದಲೇ ಅನೇಕ ಎಲೆಗಳು ಹುಟ್ಟಿಕೊಂಡಿರುತ್ತವೆ. ಇನ್ನು ಕೆಲವಲ್ಲಿ ಸುಮಾರು 3-15 ಮೀ ಎತ್ತರದ ಪ್ರಧಾನ ಕಾಂಡವಿದ್ದು ಅದರ ತುದಿಯಲ್ಲಿ ಗುಂಪಾಗಿ ಎಲೆಗಳು ಮೂಡಿಬರುತ್ತದೆ. ಎರಡು ಬಗೆಯಲ್ಲೂ ಎಲೆಗಳು ಚೂಪು ತುದಿಯ ಕತ್ತಿಗಳ ಆಕಾರದಲ್ಲಿವೆ.

ಯಕ್ಕ ಗಿಡದ ಪರಾಗಸ್ಪರ್ಶಕ್ರಿಯೆ ಕೊಂಚ ಸ್ವಾರಸ್ಯಕರವಾದ್ದು ಇದು ಯಕ್ಕ ಅಥವಾ ಪ್ರೋನೋಬ ಪತಂಗದ ಸಹಾಯದಿಂದ ಜರುಗುತ್ತದೆ. ಒಂದೊಂದು ಬಗೆಯ ಪತಂಗಗಳುಂಟು ಯಕ್ಕದ ಹೂಗಳು ರಾತ್ರಿವೇಳೆ ಮಾತ್ರ ಅರಳುವುವು; ಹೀಗೆ ಅರಳಿದಾಗ ಒಂದು ಬಗೆಯ ಸುವಾಸನೆ ಹೊರಸೂಸುತ್ತದೆ. ಇದರಿಂದ ಆಕರ್ಷಿತಗೊಳ್ಳುವ ನಿರ್ದಿಷ್ಟ ಬಗೆಯ ಹಣ್ಣು ಪತಂಗ ಹೂವಿನ ಮಕರಂದ ಹೀರಲು ಬಂದು, ಕೇವಲ ಮಕರಂದ ಹೀರುವುದಲ್ಲದೆ ತನ್ನ ವಿಶೇಷವಾದ ಉದ್ದನೆಯ ಸೂಜಿಯಂಥ ಅಂಡವಿಕ್ಷೇಪಕವನ್ನು (ಓನಿಪಾಸಿಟರ್) ಹೂವಿನ ಅಂಡಾಶಯದೊಳಗೆ ಚುಚ್ಚಿ ತನ್ನ ಮೊಟ್ಟೆಗಳನ್ನೂ ಇಡುತ್ತದೆ. ಹೀಗೆ ಮಾಡುವಾಗ ಪತಂಗದ ತಲೆ ಹೂವಿನ ಕೇಸರಗಳ ಸಂಪರ್ಕಕ್ಕೆ ಬರುವುದರಿಂದ ಅದಕ್ಕೆ ಪರಾಗ ಅಂಟಿಕೊಳ್ಳುತ್ತದೆ. ಇದೇ ಪತಂಗ ಸ್ವಜಾತಿಯ ಬೇರೊಂದು ಯಕ್ಕ ಗಿಡದ ಹೂವನ್ನು ಸಂದರ್ಶಿಸಿದಾಗ ಇದರ ತಲೆಗೆ ಅಂಟಿರುವ ಪರಾಗ ಆ ಹೂವಿನ ಶಲಾಕಾಗ್ರಕ್ಕೆ ವರ್ಗಾವಣೆಗೊಳ್ಳುತ್ತದೆ. ಈ ರೀತಿ ಪರಾಗಸ್ಪರ್ಶಕ್ರಿಯೆ ನಡೆಯುತ್ತದೆ. ಅಲ್ಲದೆ ಹೂವಿನ ಅಂಡಾಶಯಕೊಳಕ್ಕೆ ಇರಿಸಲಾದ ಮೊಟ್ಟೆಗಳಿಂದ ಹೊರಬರುವ ಮರಿಗಳು ಅಂಡಾಶಯದೊಳಕ್ಕೆ ಇರಿಸಲಾದ ಮೊಟ್ಟೆಗಳಿಂದ ಹೊರಬರುವ ಮರಿಗಳು ಅಂಡಕಗಳಲ್ಲಿ ಕೆಲವನ್ನು ತಿಂದು ಬೆಳೆಯುತ್ತವೆ. ಹೀಗೆ ಪತಂಗದಿಂದ ಯಕ್ಕ ಸಸ್ಯದ ಪರಾಗಸ್ಪರ್ಶ ಕ್ರಿಯೆ ನಡೆದು ಸಸ್ಯಕ್ಕೆ ಸಹಾಯವಾಗುವುದು ಒಂದು ಕಾರ್ಯವಾದರೆ, ಪತಂಗದ ಮರಿಗಳಿಗೆ ಹೂವಿನ ಅಂಡಕಗಳ ಆಹಾರ ದೊರೆತು ಅವು ಬೆಳೆಯಲು ಅನುಕೂಲವಾಗುವುದು ಇನ್ನೊಂದು ಕಾರ್ಯ.

ಯಕ್ಕ ಸಸ್ಯದಿಂದ ಹಲವಾರು ಉಪಯೋಗಗಳಿವೆ ಇದರ ಕಾಂಡ ಮತ್ತು ಎಲೆಗಳಿಂದ ನಾರನ್ನು ಪಡೆಯಬಹದು. ಕೆಲವು ಪ್ರಭೇದದ ಬೇರಿನಲ್ಲಿ ಸ್ಯಾಪೊನಿನ್ ಎಂಬ ಅಂಶವಿದ್ದು ಇದನ್ನು ಸಾಬೂನಿಗೆ ಬದಲಾಗಿ ಉಪಯೋಗಿಸುವುದಿದೆ. ಇದರಿಂದ ಈ ಪ್ರಭೇದಕ್ಕೆ ಸೋಪ್‍ವೀಡ್ ಎಂಬ ಹೆಸರೂ ಇದೆ. (ಜಿ.ಬಿ.)