ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯುರೋಪಿಯಮ್

ವಿಕಿಸೋರ್ಸ್ದಿಂದ

ಯುರೋಪಿಯಮ್ ಆವರ್ತಕೋಷ್ಟಕದ ಲ್ಯಾಂತೆನಮ್ ಶ್ರೇಣಿಯ ಧಾತುಗಳ ಪೈಕಿ ಒಂದು; ವಿರಳ ಭಸ್ಮಧಾತು ಗುಂಪಿನ ಸದಸ್ಯ; ರಾಸಾಯನಿಕ ಪ್ರತೀಕ ಇu. ಪರಮಾಣು ಸಂಖ್ಯೆ 63. ಪರಮಾಣು ತೂಕ 151.96. ಉಕ್ಕು - ಬೂದುಬಣ್ಣ. ದ್ರವನ ಬಿಂದು 1100-13000 ಸೆ. ನೈಸರ್ಗಿಕವಾಗಿ ದೊರೆಯುವ ಈ ಧಾತು ಸ್ಥಿರ ಐಸೋಟೋಪುಗಳಾಗಿರುವ 151 ಇu. (52.18%) ಗಳಿಂದ ಕೂಡಿದೆ. ಇಂಗ್ಲಿಷ್ ರಾಸಾಯನ ಹಾಗೂ ಭೌತವಿe್ಞÁನಿ ಸರ್ ವಿಲಿಯಮ್ ಕ್ರೂಕ್ಸ್ (1832-1919) ಸಾಮರ್‍ಸ್ಕೈಟ್ ಎಂಬ ಖನಿಜದ ರೋಹಿತ ರೇಖೆಗಳ ಅಧ್ಯಯನದಲ್ಲಿ ತೊಡಗಿದ್ದಾಗ ಅದರ ರೋಹಿತದಲ್ಲಿ ಅವಶೋಷಣಾ ಪಟ್ಟೆ (ಅಬ್‍ಸಾರ್ಬ್‍ಷನ್ ಬ್ಯಂಡ್) ಇರುವುದನ್ನು ವೀಕ್ಷಿಸಿ ಈ ಲೋಹೀಯ ಧಾತುವಿನ ಅಸ್ತಿತ್ವವನ್ನು ಮೊತ್ತಮೊದಲಿಗೆ (1859) ಶಂಕಿಸಿದ. ಹೊಸಧಾತುವಿಗೆ ಈ ಅವಶೋಷಣ ಪಟ್ಟಿಯನ್ನು ಆರೋಪಿಸಿ, ಧಾತುವಿಗೆ ಯೂಜಿನ್ ಅನಟೋಲಿ ಡೀಮಾರ್ಕೆ (1852-1904) ಈ ಧಾತುವನ್ನು ಆವಿಷ್ಕರಿಸಿ ಯುರೋಪ್ ಖಂಡದ ಗೌರವಾರ್ಥ ಯುರೋಪಿಯಮ್ ಎಂಬುದಾಗಿ ನಾಮಕರಣ ಮಾಡಿದ. ಅನಂತರ S ಧಾತುವೂ ಯುರೋಪಿಯನ್ ಧಾತುವೂ ಒಂದೇ ಎಂಬುದು ಸ್ಥಿರಪಟ್ಟಿತು. ರಸಾಯನ ವಿe್ಞÁನಿಗಳಾದ ಜಿ. ಉರ್ಬೈನ್ ಮತ್ತು ಎಚ್. ಲಾಕೋಂಬೇ ಎಂಬವರು ಇದರ ಸಂಯುಕ್ತಗಳನ್ನು ಸಾಕಷ್ಟು ಶುದ್ಧರೂಪದಲ್ಲಿ ತಯಾರಿಸಿದರು (19-4). ಈ ಧಾತುವಿನ ತ್ರಿಬಂಧನ (ಟ್ರೈವೇಲೆಂಟ್) ಲವಣಗಳು ಬಹಳಷ್ಟು ಮಂದ ಕಡುಗೆಂಪು ಬಣ್ಣದಿಂದ ಕೂಡಿರುತ್ತವೆ; ಸಂಯುಕ್ತಗಳ ದ್ವಿಬಂಧನ (ಟೈವೇಲೆಂಟ್) ಶ್ರೇಣಿಯ ಬಗ್ಗೆ ಮಾಹಿತಿ ಇದೆ. ನೈಸರ್ಗಿಕವಾಗಿ ದೊರೆಯುವ ವಿರಳತರಧಾತುಗಳ ಪೈಕಿ ಯುರೋಪಿಯಮ್ ಒಂದು. ದ್ವಿಬಂಧನ ಯುರೋಪಿಯಮ್ ಲವಣಗಳನ್ನು ತಯಾರಿಸುವ ವಿಧಾನಗಳನ್ನು 1936-41ರ ಅವಧಿಯಲ್ಲಿ ಎಚ್. ಎನ್.ಮ್ಯಾಕ್‍ಕಾಯ್ ಎಂಬವ ತನ್ನ ಪ್ರಬಂಧಗಳಲ್ಲಿ ನಿರೂಪಿಸಿದ್ದ. ಈ ಧಾತು ವಿರಳಭಸ್ಮ ಧಾತುಗಳ ಪೈಕಿ ಅತ್ಯಂತ ಭಾಷ್ಪಶೀಲವಾಗಿರುವುವಲ್ಲಿ ಎರಡನೆಯ ಸ್ಥಾನ ಪಡೆದಿರುವುದು ಮಾತ್ರವಲ್ಲದೇ ದ್ರವಬಿಂದುವಿನಲ್ಲಿ ಗಮನಾರ್ಹ ಭಾಷ್ಪ ಸಂವರ್ದವನ್ನು ಹೊಂದಿದೆ ಕೂಡ. ಕ್ಯಾಲ್ಸಿಯಮ್ ಇಲ್ಲವೇ ಕ್ಷಾರೀಯ ಲೋಹಗಳೊಂದಿಗೆ ಯುರೋಪಿಯಮ್ ಲವಣಗಳ ಅಪಕರ್ಷಣ ದ್ವಿಬಂಧನ ಯುರೋಪಿಯಮ್ ಲವಣಗಳನ್ನು ಉಂಟುಮಾಡುತ್ತದೆ. ಯುರೋಪಿಯಮ್ ಆಕ್ಸೈಡ್ ಮತ್ತು ಲ್ಯಾಂತನಮ್ ಲೋಹಗಳ ಮಿಶ್ರಣವನ್ನು ನಿದ್ರ್ರವ್ಯ ಅಸವನಕ್ಕೆ ಈಡುಮಾಡುವುದರಿಂದ ಲೋಹವನ್ನು ತಯಾರಿಸಬಹುದು. ಲೋಹ ಬಲು ಮೆದು. ವಾಯುವಿನಿಂದ ಬಾಧಿತವಾಗುತ್ತದೆ. ಇದರ ವಹನಪಟ್ಟೆಗಳಲ್ಲಿ (ಕಂಡಕ್ಷನ್ ಬ್ಯಾಂಡ್ಸ್) ಎರಡು ಎಲೆಕ್ಟ್ರಾನುಗಳು ಮಾತ್ರ ಇರುತ್ತವೆ. ಈ ಧಾತು ನ್ಯೂಟ್ರಾನುಗಳಿಗೆ ಅಧಿಕ ಅವಶೋಷಣ ಅಡ್ಡ ಕೊಯ್ತವನ್ನು (ಹೈ ಅಬ್‍ಸಾರ್ಬ್‍ಷನ್ ಕ್ರಾಸ್-ಸೆಕ್ಷನ್) ಹೊಂದಿರುವುದು ಮಾತ್ರವಲ್ಲದೇ ನ್ಯೂಟ್ರಾನುಗಳನ್ನು ಸೇರಿಸಿದಾಗ ಹೆಚ್ಚಿನ ಸಂಖ್ಯೆಯ ಸಮಸ್ಥಾನಿಗಳು ಉಂಟುಮಾಡಿಕೊಳ್ಳಬಲ್ಲುದು ಕೂಡ. ಈ ಲಕ್ಷಣದಿಂದಾಗಿ ಪರಮಾಣು ಉದ್ಯಮದಲ್ಲಿ ಇದರ ಬಳಕೆ ಇದೆ.

ಯುರೋಪಿಯಮ್ ಆಕ್ಸೈಡಿಗೆ 1964ರಿಂದ ಗಮನಾರ್ಹ ಕೈಗಾರಿಕಾ ಪ್ರಾಮುಖ್ಯ ಬಂದಿದೆ. ದೂರದರ್ಶನದಲ್ಲಿ ಯುರೋಪಿಯಮ್ ಪ್ರಚೋದಿತ ಇಟ್ರಿಯಮ್ - ಆರ್ತೊವೆನಡೈಟುಗಳನ್ನು ಸ್ಫುರದೀಪ್ತಿ ವಸ್ತುಗಳಾಗಿ ಬಳಸುವುದಿದೆ. ಇನ್ನಿತರ ಯುರೋಪಿಯಮ್ ಆಧರಿತ ಸ್ಫುರದೀಪ್ತಿ ವಸ್ತುಗಳ ಬಗ್ಗೆಯೂ ಅಧ್ಯಯನ-ಸಂಶೋಧನೆ ನಡೆಸಿ ಕೆಲವೊಂದರ ಏಕಸ್ವವನ್ನು ಪಡೆಯಲಾಗಿದೆ.